ವಿವಿಧ ಸವಲತ್ತು, ಚೆಕ್ ವಿತರಣೆ
ಕಾರ್ಕಳ: ಪ್ರತಿ ಮನೆಯಲ್ಲೂ ಶೌಚಾಲಯವಿದ್ದರೆ ಗ್ರಾಮ ಪಂಚಾಯಿತಿನ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ದೇಶದಲ್ಲಿ ಕಾಡುತ್ತಿರುವ ವಿದ್ಯುತ್ ಅಭಾವದ ನೀಗಿಸಲು ಸೋಲಾರ್ ಬಳಕೆ ಉಪಯೋಗಿಸುವುದರಿಂದ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಆದಾಯ ಬರಲಿದೆ. ಮೂಲ ಸೌಕರ್ಯ ನೀಡುವಂತಹ ಪರಿಣಾಮಕಾರಿ ಕೆಲಸ ಗ್ರಾಮ ಪಂಚಾಯಿತಿನಿಂದ ಅದಲ್ಲಿ ದೇಶ ಮುನ್ನೆಡೆಯಲಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕು ಪಂಚಾಯಿತಿನ ಸಭಾಂಗಣದಲ್ಲಿ ಜರಗಿದ ಕುಕ್ಕುಂದೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರಿಗೆ ವಿವಿಧ ಸವಲತ್ತು ಹಾಗೂ ಚೆಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ತಾಲೂಕಿನಲ್ಲಿ ಅತೀ ವಿಸ್ತಾರಯುಳ್ಳ ಗ್ರಾಮ ಪಂಚಾಯಿತಿ ಕುಕ್ಕೂಂದೂರು ಆಗಿದೆ. ಗ್ರಾಮ ಪಂಚಾಯಿತಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಶಾಸಕ ಸುನಿಲ್ ಕುಮಾರ್ ಮಾತಾನಾಡಿ, ಶೇ. 52ರಷ್ಟು ಇದ್ದ ಬಿಪಿಎಲ್ ಕಾರ್ಡ್ ಇಂದು ಶೇ. 72ಕ್ಕೇರಿದೆ. ಇದರಿಂದ ಹೆಚ್ಚಿನ ನಾಗರಿಕರು ಸರ್ಕಾರ ಯೋಜನೆಗಳನ್ನು ಪಡೆಯುವಲ್ಲಿ ಸಾಧುವಿದೆ. ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿಯಲ್ಲಿ ರು. 1.5 ಲಕ್ಷ ವರೆಗೆ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಪಡೆಯಬಹುದಾಗಿದೆ. ಹಿಂದಿನ ಸರ್ಕಾರ ಜಾರಿಗೆ ತಂದಂತೆ ಎಪಿಎಲ್ ಮತ್ತು ಬಿಪಿಎಲ್ ಚೀಟಿ ಹೊಂದಿದವರೆಲ್ಲರೂ ಪಡಿತರ ವಸ್ತು ನೀಡಬೇಕು. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಲಾಗುದು ಎಂದು ತಿಳಿಸಿದರು.
ರು. 21 ಕೋಟಿ ಅನುದಾನದಲ್ಲಿ ಭವಾನಿ ಮಿಲ್ನಿಂದ ಜೋಡುರಸ್ತೆಯ ತನಕ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, ಈ ರಸ್ತೆ ಹಾದೂ ಹೋಗಿರುವ ಭಾಗವು ಕುಕಕ್ಕುಂದೂರು ಗ್ರಾಮ ಪಂಚಾಯಿತಿ ಸರಹದ್ದಿನೊಳಗೆ ಬರುತ್ತದೆ. ರಸ್ತೆಯ ಇಕ್ಕೆಲೆಗಳಲ್ಲಿ ಸೋಲಾರ್ ದಾರಿದೀಪ ಅಳವಡಿಸಲು ಎಲ್ಲ ರೀತಿಯಲ್ಲಿ ನೆರವು ನೀಡುವುದಾಗಿ ಇದೇ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ರಶ್ಮಿ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ರವೀಂದ್ರ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಆ್ಯಂಟನಿ ಡಿ' ಸೋಜಾ ನಕ್ರೆ, ಉಪಾಧ್ಯಕ್ಷೆ ಸುಮನ ರಾವ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊಯಿಲಿ, ಪಿಡಿಒ ರಾಘವೇಂದ್ರ ಪ್ರಭು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

