ಉಡುಪಿ

ಸಂಘಟನೆಯಿಂದ ಅಭಿವೃದ್ಧಿ: ಬಿಷಪ್

Published On :

ಉಡುಪಿ: ಅಭಿವೃದ್ಧಿ ಮಾಡುವುದು ಸರ್ಕಾರದ ಕೆಲಸ ಎನ್ನುವುದು ಸರಿಯಲ್ಲ, ನಮ್ಮ ಅಭಿವೃದ್ಧಿ ನಮ್ಮ ಕೈಯಲ್ಲಿದೆ, ಅದಕ್ಕಾಗಿ ಮೊದಲು ಸಂಘಟಿತರಾಗಬೇಕು ಎಂದು ಉಡುಪಿ ಧರ್ಮಪ್ರಾಂತದ ಬಿಷಪ್ ವಂ.ರೆ. ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಬನ್ನಂಜೆಯ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಉಡುಪಿ ತಾಲೂಕು ಮಟ್ಟದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆ, ಶಿಕ್ಷಣ ಮತ್ತು ಸ್ವಾವಲಂಬನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾದರಿ ಎಂದು ಅವರು ಶ್ಲಾಘಿಸಿದರು.
ದುಶ್ಚಟದಿಂದ ನೆಮ್ಮದಿ ಹಾಳು: ಶಿವಮೊಗ್ಗದ ಮಳಲಿ ಮಠದ ಶ್ರೀಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀವರ್ಚನ ನೀಡಿ, ದುಶ್ಚಟಗಳು ಬದುಕಿನ ನೆಮ್ಮದಿ ಹಾಳು ಮಾಡುತ್ತವೆ, ಧರ್ಮಾಧಾರಿತ ಸಂಪತ್ತು ಮತ್ತು ಬಯಕೆಗಳು ನೆಮ್ಮದಿಯ ಬದುಕಿಗೆ ಕಾರಣವಾಗುತ್ತದೆ ಎಂದರು.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್  ಉಡುಪಿಯ 4 ಕಾಲೇಜುಗಳಲ್ಲಿ ಆರಂಭಿಸಲಾಗಿರುವ ಸ್ವಾಸ್ಥ ಸಂಕಲ್ಪ ಕ್ಲಬ್‌ಗಳನ್ನು ಉದ್ಘಾಟಿಸಿದರು.
ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಕೆ. ನಾರಾಯಣ ಕೋಟ್ಯಾನ್, ಯೋಜನೆಯ ನಿರ್ದೇಶಕ ದುಗ್ಗೇಗೌಡ ಭಾಗವಹಿಸಿದ್ದರು. ಜನಜಾಗೃತಿ ವೇದಿಕೆಯ ವಿವಿಧ ವಲಯಾಧ್ಯಕ್ಷರು ಇದ್ದರು.  
ಅಧ್ಯಕ್ಷತೆ ವಹಿಸಿದ್ದ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಅಮೀನ್  ಸ್ವಾಗತಿಸಿದರು. ಯೋಜನೆಯ ಉಡುಪಿ ಜಿಲ್ಲಾ ಯೋಜನಾಧಿಕಾರಿ ಮಾಲತಿ ದಿನೇಶ್ ವರದಿ ಮಂಡಿಸಿದರು, ಯೋಜನೆಯ ಮೇಲ್ವಿಚಾರಕರಾದ ಉಮಾ ಮತ್ತು ಜಟ್ಟ ಎಂ. ಕಾರ್ಯಕ್ರಮ ನಿರ್ವಹಿಸಿದರು, ಹೈನುಗಾರಿಕಾಧಿಕಾರಿ ಸುರೇಶ್ ಹೆಗ್ಡೆ ವಂದಿಸಿದರು.
ಸಮಾವೇಶ ಗಾಂಧೀಜಿಗೆ ನೈಜ ಗೌರವ: ಸೊರಕೆ
ಸಮಾರಂಭದ ಉದ್ಘಾಟನೆಗೆ ಮೊದಲು ಆಗಮಿಸಿದ ಸಚಿವ ವಿನಯಕುಮಾರ್ ಸೊರಕೆ ಅವರು ಖಾಲಿ ವೇದಿಕೆಯಲ್ಲಿ, ಗಾಂಧಿ ಜಯಂತಿಯಂದೇ ಶ್ರೀಕ್ಷೇ.ಧ.ಗ್ರಾ.ಯೋಜನೆಯ ಮದ್ಯವರ್ಜನ ಶಿಬಿರಗಳಲ್ಲಿ ಮದ್ಯಪಾನದಿಂದ ಮುಕ್ತರಾದವರನ್ನು ಸೇರಿಸಿ ಈ ಸಮಾವೇಶ ನಡೆಸುತ್ತಿರುವುದು ಗಾಂಧೀಜಿಗೆ ಸಲ್ಲಿಸಲಾದ ಶ್ರೇಷ್ಠ ಗೌರವವಾಗಿದೆ, ಅವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದರು. ಸಮಾವೇಶ ಆರಂಭವಾಗುವುದಕ್ಕೂ ಮೊದಲೇ ನಿರ್ಗಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.