ಉಡುಪಿ

ಕಾರಂತ ಸಾಹಿತ್ಯದಲ್ಲಿ ಸಾಂತ್ವನ ಗುಣ: ಡಾ. ಭಾಸ್ಕರ ಆಚಾರ್ಯ

Published On :

ಕೋಟ: ಡಾ. ಶಿವರಾಮ ಕಾರಂತರು ಎಂದೂ ಬರಿದಾಗದ ಸಾಹಿತ್ಯದ ಸಿಹಿನೀರಿನ ಸಮುದ್ರವಿದ್ದಂತೆ ಬದುಕಿದವರು. ಅವರ ಸಾಹಿತ್ಯದಲ್ಲಿ ಮಾನಸಿಕ ಸಾಂತ್ವನದ ಗುಣಗಳಿವೆ. ಅವರು ತಮ್ಮ ಕೃತಿಗಳ ಮೂಲಕ ಮಾನಸಿಕ ತಜ್ಞರಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಸಾಹಿತಿ, ವೈದ್ಯ ಡಾ. ಭಾಸ್ಕರ ಆಚಾರ್ಯ ಹೇಳಿದ್ದಾರೆ.
 ಇಲ್ಲಿನ ಕಾರಂತ ಥೀಮ್ ಪಾರ್ಕ್‌ನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಸಾರಥ್ಯದಲ್ಲಿ ಕಾರಂತ ಜನದಿನೋತ್ಸವದ ಅಂಗವಾಗಿ ನಡೆಯುತ್ತಿರುವ 10 ದಿನಗಳ ಸಾಹಿತ್ಯಿಕ- ಸಾಂಸ್ಕೃತಿಕ ಕಾರ್ಯಕ್ರಮದ 8ನೇ ದಿನ ವಿಕಸನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
 ಕಾರಂತರ ಕೃತಿಗಳನ್ನು ಗಮನಿಸಿದರೆ ಅವರ ಪ್ರತಿಯೊಂದು ಕೃತಿಯಲ್ಲಿ ಬರುವ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಅನುಭವವನ್ನು ಹಂಚಿಕೊಂಡು ಬರೆದಂತೆ ಕಾಣುತ್ತದೆ. ಇದು ಕಾರಂತರ ಕೃತಿಗಳ ವಿಶೇಷತೆ. ಮುಂದಿನ ದಿನಗಳಲ್ಲಿ ಕಾರಂತ ಜೀವನವನ್ನು ಆಧರಿಸಿ ಯಕ್ಷಗಾನ ರಚಿಸಿ ಇದೇ ಥೀಮ್ ಪಾರ್ಕ್‌ನಲ್ಲಿ ಪ್ರದರ್ಶಿಸಿದರೆ ಅದು ಕಾರಂತರ ಋಣ ಸಂದಾಯ ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು.
 ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಸದಸ್ಯೆ ವಿದ್ಯಾ ಹೇರ್ಳೆ, ಶಿಬಿರದ ಮುಖಂಡರಾದ ಪ್ರಜ್ವಲ್, ಮೇಘ, ಮೇಘಶ್ರೀ ಮತ್ತು ಅರ್ಪಿತ ಇದ್ದರು.
 ಶಿಕ್ಷಕ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು, ಅಕ್ಷಯ ವಿನಾಯಕ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.