ಬ್ರಹ್ಮಾವರ: ಜೇನು ಕೃಷಿ ತರಬೇತಿ
ಬ್ರಹ್ಮಾವರ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ಜೇನು ಕೃಷಿ ಹಾಗೂ ತೆಂಗಿನ ಮರದ ಸ್ನೇಹಿತರು ತರಬೇತಿಯನ್ನು ತಂಬಾಕು ಮಂಡಳಿ ಮಾಜಿ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಚಾಂತಾರು ಗ್ರಾಪಂ ಅಧ್ಯಕ್ಷ ರವಿರಾಜ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಾಗಿ ಜಿಪಂ ಸದಸ್ಯೆ ಮಲ್ಲಿಕಾ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಎಸ್.ಯು. ಪಾಟೀಲ್, ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕಿ ಡಾ. ಜಯಲಕ್ಷ್ಮೀ, ಜೇನು ಕೃಷಿ ತರಬೇತುದಾರ ಹರಿಹರ ಹೆಗಡೆ ಮತ್ತು ತೆಂಗಿನ ಮರದ ಸ್ನೇಹಿತರು ತರಬೇತುದಾರ ಶ್ಯಾನುಭಾಗ್ ಇದ್ದರು.
ಚೈತನ್ಯ ಎಚ್. ಎಸ್. ಸ್ವಾಗತಿಸಿದರು. ಸಂಜೀವ್ ಕ್ಯಾತಪ್ಪ ನಿರೂಪಿಸಿ ಡಾ. ಸತೀಶ್ ಎನ್. ವಂದಿಸಿದರು.
ಸಮಾರೋಪ: ಕರಾವಳಿ ಜಿಲ್ಲೆಯಲ್ಲಿ ಜೇನು ಕೃಷಿಗೆ ಸಾಕಷ್ಟು ಅವಕಾಶಗಳಿವೆ, ರೈತರು ಈ ಅವಕಾಶವನ್ನು ಬಳಸಿಕೊಳ್ಳಬೇಕು, ಇಲ್ಲಿ ಇತರ ಸಮಗ್ರ ಕೃಷಿಯ ಒಂದು ಅಂಗವಾಗಿ ಜೇನು ಕೃಷಿಯನ್ನು ಅಳವಡಿಸಿಕೊಂಡು ಲಾಭ ಗಳಿಸಿಕೊಳ್ಳಬಹುದು ಎಂದು ಎಂದು ಬೆಂಗಳೂರು ಕೃಷಿ ವಿವಿಯ ಕಾರ್ಯಕ್ರಮ ಸಂಯೋಜಕ ಪ್ರೊ. ಎಲ್ಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಜೇನು ಕೃಷಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದು, ತರಬೇತಿ ಪಡೆದ ರೈತರಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.
ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಡಾ. ಬಿ.ಪಿ. ಸತೀಶ್, ಜೇನು ಕೃಷಿಗೆ ತೋಟಗಾರಿಕಾ ಇಲಾಖೆಯಲ್ಲಿ ಇರುವ ಸವಲತ್ತುಗಳು ಹಾಗೂ ಸಬ್ಸಿಡಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಡಾ. ಜಯಲಕ್ಮೀ ತರಬೇತಿಯ ಅವಧಿಯಲ್ಲಿ ಜೇನು ಸಾಕಣೆಯ ಪ್ರಯೋಜನಗಳು, ವಿವಿಧ ಜೇನು ತಳಿಗಳು, ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜೇನು ಕೃಷಿ ತರಬೇತುದಾರ ಹರಿಹರ ಹೆಗಡೆ, ಜೇನು ಕೃಷಿಕ ಸುರೇಶ ಕಾರೇಕಾರ್ ಆಗಮಿಸಿದ್ದರು. ಶಿಬಿರಾರ್ಥಿಗಳು ಜೇನು ಕೃಷಿ ತರಬೇತಿಯಲ್ಲಿ ಪಡೆದ ವಿಷಯ ಮಾಹಿತಿ, ಪ್ರಾಯೋಗಿಕ ತರಬೇತಿ ಮತ್ತು ವ್ಯವಸ್ಥೆಗಳ ಕುರಿತು ಸಂತಸ ವ್ಯಕ್ತ ಪಡಿಸಿದರು. ವಿಷಯ ತಜ್ಞರಾದ ಡಾ. ಸತೀಶ್ ಎನ್. ಸ್ವಾಗತಿಸಿ, ಡಾ. ಗಣೇಶ ಪ್ರಸಾದ ವಂದಿಸಿದರು. ಸಂಜೀವ್ ಕ್ಯಾತಪ್ಪ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

