ಉಡುಪಿ

ತೆಂಕನಿಡಿಯೂರು ಕಾಲೇಜಿಗೆ ಎನ್ನೆಸ್ಸೆಸ್ ಪ್ರಶಸ್ತಿ

Published On :

ಉಡುಪಿ: ರಾಷ್ಟ್ರೀಯ ಸೇವಾಯೋಜನೆಯ ವಿಶ್ವವಿದ್ಯಾನಿಲಯಮಟ್ಟದ 2011-12ನೇ ಸಾಲಿನ ಪ್ರಶಸ್ತಿಯನ್ನು ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ. ಮಂಗಳೂರಿನ ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ. ಯೋಗಾನಂದ ಅವರಿಗೆ ಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ಪ್ರಶಸ್ತಿ ಪ್ರಧಾನ ಮಾಡಿದರು. ರಾಜ್ಯ ಪ್ರಶಸ್ತಿ ವಿಜೇತ ಯೋಜನಾಧಿಕಾರಿ ಡಾ. ನಿಕೇತನ ಅವರಿಗೆ ವಿಶ್ವವಿದ್ಯಾನಿಲಯ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ನೀಡಲಾಯಿತು. ಕುಲಸಚಿವ ಪ್ರೊ. ಪಿ.ಎಸ್. ಯಡಪಡಿತ್ತಾಯ, ಸಂಯೋಜನಾಧಿಕಾರಿ ಪ್ರೊ. ವಿನೀತ ರೈ, ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಉಪಸ್ಥಿತರಿದ್ದರು.
ಬದನಾಜೆ ವಿದುಷಿ ಪಾರ್ವತಿ
ಸಂಸ್ಮರಣೆ- ಸಂಗೀತ ಕಾರ್ಯಕ್ರಮ
ಮಣಿಪಾಲ: ಇಲ್ಲಿನ ಪರ್ಕಳದ ಕುಕ್ಕುದಕಟ್ಟೆಯಲ್ಲಿರುವ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿದ್ಯಾದಶಮಿ ಸಂಗೀತೋತ್ಸವದ ಅಂಗವಾಗಿ ಬದನಾಜೆ ವಿದುಷಿ ಪಾರ್ವತಿ ಅಮ್ಮ ಅವರ ಸಂಸ್ಮರಣಾ ಸಂಗೀತ ಕಾರ್ಯಕ್ರಮದ ಉದ್ಘಾಟನೆಯು ಇತ್ತೀಚೆಗೆ ಜರಗಿತು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕಾಸರಗೋಡು ಚಿನ್ನಾ ಅವರು ಸಂಗೀತ ಮತ್ತು ಉತ್ತಮ ಸಾಹಿತ್ಯ ಇವೆರಡರ ನಡುವೆ ಅವಿನಾಭಾವ ಸಂಬಂಧವಿದೆ. ಆದರೆ, ಇಂತಹ ಸಂಬಂಧ ಇಂದಿನ ಸಿನಿಮಾ ಸಾಹಿತ್ಯದಲ್ಲಿ ಮರೆಯಾಗಿವೆ ಎಂದು ತಿಳಿಸಿ ಶಾಸ್ತ್ರೀಯ ಸಂಗೀತ ಕಲಿಕೆಯಿಂದ ಸೃಜನಾತ್ಮಕ ಬೆಳವಣಿಗೆ ಸಾಧ್ಯ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಮನೆಯಲ್ಲಿ ಉಳಿದು ಬೆಳಯಬೇಕು ಎಂದರು. ಬದನಾಜೆ ಶಂಕರ ಭಟ್, ವಿದುಷಿ ಸುಮತಿ ಶಂಕರ ಭಟ್, ನಾಡೋಡ ಕೆ.ಪಿ. ರಾವ್, ಸರಿಗಮ ಭಾರತಿ ನಿರ್ದೇಶಕ ಡಾ. ಉದಯ ಶಂಕರ್ ಇದ್ದರು. ನಂತರದಲ್ಲಿ ವಿದುಷಿ ಉಮಾಶಂಕರಿ ಅವರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.