ಉಡುಪಿ

ಉಡುಪಿ ಧರ್ಮಪ್ರಾಂತ್ಯ ವರ್ಷಾಚರಣೆ

Published On :

ಕಲ್ಯಾಣಪುರ:  ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಪ್ರಥಮ ವರ್ಷದ ಆಚರಣೆ ಧರ್ಮಾಧ್ಯಕ್ಷ ಡಾ. ಜೆರಾಲ್ಡ್  ಐಸಾಕ್ ಲೋಬೊ ನೇತೃತ್ವದಲ್ಲಿ ಇಲ್ಲಿನ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಮಂಗಳವಾರ ಜರುಗಿತು.
ಈ ಪವಿತ್ರ ಕಾರ್ಯಕ್ರಮದಲ್ಲಿ ಉಡುಪಿಯ ವಿವಿಧ ಚರ್ಚ್‌ಗಳ 50ಕ್ಕೂ ಅಧಿಕ ಧರ್ಮಗುರುಗಳು, ಸಾವಿರಾರು ಮಂದಿ ಕ್ರೈಸ್ತ ಭಕ್ತರ ಉಪಸ್ಥಿತಿಯಲ್ಲಿ ಧರ್ಮಾಧ್ಯಕ್ಷರು ಧರ್ಮಪ್ರಾಂತ್ಯದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಕೃತಜ್ಞತಾ ಬಲಿಪೂಜೆ ಅರ್ಪಿಸಿದರು.
ಬಲಿಪೂಜೆಯ ನಂತರ ಪ್ರಧಾನ ಪ್ರವಚನ ನೀಡಿದ ಶಂಕರಪುರ ಚರ್ಚ್ ಧರ್ಮಗುರು ಡಾ. ಲೆಸ್ಲಿ ಡಿ' ಸೋಜಾ, ವರ್ಷದ ಹಿಂದೆ ಉಡುಪಿ ಧರ್ಮಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ ಧರ್ಮಕ್ಷೇತ್ರಾದ್ಯಂತ ಹಲವು ರೀತಿಯ ಬದಲಾವಣೆ ಅಭಿವೃದ್ಧಿ ಕಂಡಿದ್ದೇವೆ ಎಂದು ಅವರು ತಿಳಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ: ಕೃತಜ್ಞತಾ ಬಲಿಪೂಜೆಯ ಬಳಿಕ ಧರ್ಮಪ್ರಾಂತ್ಯದ ಒಂದು ವರ್ಷದ ನೆನಪಿನ ಸ್ಮರಣ ಸಂಚಿಕೆ 'ಆಶೀರ್ವಾದ್‌'ನ್ನು ಧರ್ಮಾಧ್ಯಕ್ಷರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲಿನ ರೆಕ್ಟರ್ ಸ್ಟ್ಯಾನಿ ಬಿ. ಲೋಬೊ, ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ವಲೇರಿಯನ್ ಮೆಂಡೊನ್ಸಾ, ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ಡೆನಿಸ್ ಡೆಸಾ, ಉಡುಪಿ, ಕುಂದಾಪುರ, ಕಾರ್ಕಳ, ಶಿರ್ವ ವಲಯಗಳ ಪ್ರಧಾನ ಧರ್ಮಗುರುಗಳಾದ ಸ್ಟ್ಯಾನಿ ತಾವ್ರೊ, ಜೊನ್ ಎ. ಬಾರ್ಬೊಜಾ, ಅನಿಲ್ ಡಿ' ಸೋಜಾ, ಫ್ರೆಡ್‌ಮಸ್ಕರೇನ್ಹಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.