ಮಣಿಪಾಲ: ಬಾಲಕಿ ಲೈಂಗಿಕ ಕಿರುಕಳ ಪ್ರಕರಣ ಮರುತನಿಖೆಗೆ ದಸಂಸ ಆಗ್ರಹ
ಉಡುಪಿ: ಮಣಿಪಾಲದ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಸೆ.16ರಂದು 3 ವರ್ಷ 10 ತಿಂಗಳು ವಯಸ್ಸಿನ ನರ್ಸರಿ ವಿದ್ಯಾರ್ಥಿಗೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳದ ಘಟನೆಯ ಬಗ್ಗೆ ಹಲವಾರು ಸಂಶಯಗಳನ್ನು ವ್ಯಕ್ತಪಡಿಸಿರುವ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಶಾಲೆಯ ಪೋಷಕರ ಒಕ್ಕೂಟ ಘಟನೆ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ಎರಡೂ ಸಂಘಟನೆಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದವು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಸಂಸ ಸಂಚಾಲಕ ಜಯನ್ ಮಲ್ಪೆ, ಅಂದು ಮಧ್ಯಾಹ್ನ 12.55ರಿಂದ 1.25ರ ನಡುವೆ ಈ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಲಾಗಿದೆ ಎಂದರು.
ಈ ಹೊತ್ತಿನಲ್ಲಿ ಈ ಮಗು ಶಾಲಾವರಣದಲ್ಲಿದ್ದು, 1800ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು 120ಕ್ಕೂ ಹೆಚ್ಚು ಶಿಕ್ಷಕರು, ಶಾಲೆಯ ಇತರ ಸಿಬ್ಬಂದಿ ಇರುವ ಶಾಲಾವರಣದಲ್ಲಿ ಈ ಲೈಂಗಿಕ ಕಿರುಕುಳದ ಘಟನೆ ನಡೆಯಿತು ಎನ್ನುವ ಮಗುವಿನ ತಾಯಿಯ ದೂರು ಸಂಶಯಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಹಲವರು ಶಾಮೀಲು ಶಂಕೆ: ಲೈಂಗಿಕ ಕಿರಕುಳ ನೀಡಿದ್ದಾರೆ ಎನ್ನಲಾದ ಆರೋಪಿಗಳು ಮಗುವನ್ನು ಆಟೋದಲ್ಲಿ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದೇ ಅವರ ತಪ್ಪು ಎಂಬಂತೆ ಬಿಂಬಿಸಲಾಗಿದೆ. ಸತ್ಯವನ್ನು ಶಾಲೆ ಸಿಬ್ಬಂದಿ ಹೇಳುತ್ತಿದ್ದರೂ ಪೊಲೀಸರು ಅದನ್ನು ಹೇಳಿಕೆಯಾಗಿ ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕೋಮು ಸೌಹಾರ್ದ ವೇದಿಕೆಯ ಜಿ. ರಾಜಶೇಖರ್, ದಿನಕರ ಬೇಂಗ್ರೆ, ಜಾತಿ ಮುಕ್ತ ವೇದಿಕೆಯ ಪ್ರೊ. ಹಯವದನ, ದಸಂಸ ನಾಯಕರಾದ ಗಣೇಶ್ ನೆರ್ಗಿ, ಸುಂದರಿ ಪುತ್ತೂರು, ಸುಂದರ ಕಪ್ಪೆಟ್ಟು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

