ಉಡುಪಿ

ಅತ್ಯಾಚಾರಿಗಳಿಗೆ ಶಿಕ್ಷೆ ಪ್ರಮಾಣ ತೀರ್ಪು ಮುಂದೂಡಿಕೆ

Published On :

ಮಂಗಳೂರು: ಮೂರು ವರ್ಷಗಳ ಹಿಂದೆ ರೈಲು ನಿಲ್ದಾಣದಲ್ಲಿ ಬಾಲಕಿ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ವಿಧಿಸಲಾಗಿರುವ ಶಿಕ್ಷೆ ಪ್ರಮಾಣ ಘೋಷಣೆಯನ್ನು ನ್ಯಾಯಾಲಯ ಸೆ.21ಕ್ಕೆ ಮುಂದೂಡಿದೆ.
 2010ರ ಜ.14ರಂದು ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಒಡಿಶಾದ 15ರ ಹರೆಯದ ಬಾಲಕಿ ಮೇಲೆ ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಮಂಗಳವಾರ ವಿಚಾರಣೆ ನಡೆದು ಗುರುವಾರಕ್ಕೆ ನ್ಯಾಯಾಧೀಶರು ತೀರ್ಪು ಮುಂದೂಡಿದ್ದರು. ಗುರುವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ತೀರ್ಪನ್ನು ಸೆ.21ಕ್ಕೆ ಮತ್ತೆ ಮುಂದೂಡಿದ್ದಾರೆ.
ಮಂಗಳೂರಿನ ಮನೆಯೊಂದರಲ್ಲಿ ಕೆಲಸಕ್ಕಿದ್ದ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಒಡಿಶಾಕ್ಕೆ ತೆರಳಲು ಮುಂಜಾನೆ ರೈಲು ನಿಲ್ದಾಣದಲ್ಲಿ ಕುಳಿತಿದ್ದಳು. ನಾಲ್ಕು ಮಂದಿ ಆರೋಪಿಗಳು ಒಡಿಶಾಕ್ಕೆ ಹೋಗುವ ರೈಲು ನಿಲ್ಲುವ ಫ್ಲಾಟ್ ಫಾರಂ ತೋರಿಸುವುದಾಗಿ ಆಕೆಯನ್ನು ಬೇರೆಡೆ ಬೋಗಿ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಉಳ್ಳಾಲ ಮಿಲ್ಲತ್ ನಗರದ ಅಬ್ದುಲ್ ಸತ್ತಾರ್ ಯಾನೆ ಅಯೂಬ್‌ನನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿತ್ತು. ಪ್ರಮುಖ ಆರೋಪಿ ಕೇರಳ ಶಮೀಶ ತಲೆಮರೆಸಿಕೊಂಡಿದ್ದಾನೆ. ಎರಡನೇ ಆರೋಪಿ ಬಂಟ್ವಾಳ ಕಡೇಶಿವಾಲಯದ ಕೆ.ಅಶೋಕ (24), ಮೂರನೇ ಆರೋಪಿ ನಿಶಿತ್‌ನನ್ನು ಪೊಲೀಸರು ಬಂಧಿಸಿದ್ದರು.
ಕುಟುಂಬದ ಹೊಣೆ ಇದೆ: 2ನೇಆರೋಪಿ ಮಾಡಿದ್ದು ತಪ್ಪಾಗಿದೆ: 3ನೇ ಆರೋಪಿ
ಜಿಲ್ಲಾ 4ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ನ್ಯಾಯಾಧೀಶರಾದ ಬಿ.ಕೆ. ನಾಯಕ್ ಏನಾದರೂ ಹೇಳುವುದಿದ್ದರೆ ಹೇಳಿ ಎಂದರು. ನನಗೆ ತಂದೆ, ತಾಯಿ ಯಾರೂ ಇಲ್ಲ ಸಹೋದರಿ ಇದ್ದು ಕುಟುಂಬ ಹೊಣೆ ನನ್ನ ಮೇಲಿದೆ ಎಂದು 2ನೇ ಆರೋಪಿ ಅಶೋಕ ಮೌನಕ್ಕೆ ಶರಣಾದ. ನಿಶಿತ್ ನಾನು ಮಾಡಿದ್ದು ತಪ್ಪಾಗಿದೆ ಎಂದು ನ್ಯಾಯಾಧೀಶರ ಮುಂದೆ ಹೇಳಿದ.
 ಆರೋಪಿ ಪರ ವಕಾಲತ್ ನಡೆಸಿದ ವಕೀಲರು, ಬಾಲಕಿ ಒಡಿಶಾದವಳಾಗಿದ್ದು ಅಲ್ಲಿ ಪ್ರಕರಣ ಬಗ್ಗೆ ತಿಳಿದೇ ಇಲ್ಲ. ಅಶೋಕ್ ಹಾಗೂ ನಿಶಿತ್‌ನನ್ನು ಆಧರಿಸಿ ಕುಟುಂಬ ಇದೆ. ಆದರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಎಂದು ವಿನಂತಿಸಿದರು.
 ಸರ್ಕಾರಿ ಅಭಿಯೋಜಕ ಮಂಜುನಾಥ ವಿ. ಭಟ್ ಪನ್ನೆ ವಾದ ಮಂಡಿಸಿ, ಬಾಲಕಿ ಎಲ್ಲಿಯವಳೇ ಆಗಿದ್ದರೂ ಮಾನ ಎಂಬುದು ಪ್ರತಿಯೊಬ್ಬರಿಗೆ ಅಮೂಲ್ಯ. ಇಂಥ ಘಟನೆ ಮರುಕಳಿಸದಂತೆ ಸಮಾಜಕ್ಕೆ ಎಚ್ಚರಿಕೆ ಸಂದೇಶ ನೀಡಲು ಗರಿಷ್ಠ ಪ್ರಮಾಣ ಶಿಕ್ಷೆ ಆಗಬೇಕು ಎಂದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರ ತೀರ್ಪನ್ನು ಸೆ.21ಕ್ಕೆ ಮುಂದೂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.