ಉಡುಪಿ

ಬಾಲಕನ ಚಿಕಿತ್ಸೆಗೆ ನೆರವು ನೀಡಿ..

Published On :

ಬಂಟ್ವಾಳ: ಬಾಲ್ಯ ಸಹಜ ಓಡಾಟದಿಂದ ಮನೆ ಬೆಳಗಬೇಕಾದ ಸಜಿಪಮೂಡದ ನಾಲ್ಕೂವರೆ ವರ್ಷದ ಕಂದನೊಬ್ಬ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ.
ಸ್ಥಳೀಯ ನಿವಾಸಿ ರಿಕ್ಷಾ ಚಾಲಕ ಅಬೂ ಸ್ವಾಲಿಹ್ ಹಾಗೂ ಅವ್ವಾಬಿ ದಂಪತಿಯ ಇಬ್ಬರು ಮಕ್ಕಳ ಪೈಕಿ ಹಿರಿಯವನಾದ ನಾಲ್ಕೂವರೆ ವರ್ಷದ ಮುಹಮ್ಮದ್ ರಾಝಿ ಎಂಬಾತನೇ ರಕ್ತ ಸಂಬಂಧಿ ತಲಸ್ಸೆಮಿಯಾ ರೋಗದಿಂದ ಬಳಲುತ್ತಿರುವ ಬಾಲಕ.
ಹುಟ್ಟಿದ ಆರೇ ತಿಂಗಳಿಗೆ ಈ ಕಾಯಿಲೆಗೆ ತುತ್ತಾಗಿರುವ ಬಾಲಕ ಕಳೆದ ನಾಲ್ಕು ವರ್ಷದಿಂದ ಈ ನೋವು ಅನುಭವಿಸುತ್ತಿದ್ದಾನೆ.
ಇದೀಗ ಈತನಿಗೆ ಚಿಕಿತ್ಸೆ ನೀಡುತ್ತಿರುವ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಕೆ ಶ್ರೀಧರ್ ಅವಭೃತ ಅವರು ಮಗುವಿಗೆ ತುರ್ತು ಶಸ್ತ್ರ ಚಿಕಿತ್ಸೆಯ ಅವಶ್ಯಕತೆಯಿದ್ದು ಇದಕ್ಕೆ ಸುಮಾರು 10-12 ಲಕ್ಷ ರುಪಾಯಿಗಳಷ್ಟು ದೊಡ್ಡ ಮೊತ್ತ ವೆಚ್ಚವಾಗಬಹುದು ಎಂದು ಸಲಹೆ ನೀಡಿದ್ದಾರೆ.
ವೈದ್ಯರ ಸಲಹೆಯಂತೆ ಮಗುವನ್ನು ಉಳಿಸಲು ಶಸ್ತ್ರಚಿಕಿತ್ಸೆಗೆ ಮುಂದಾಗಿರುವ ಬಡ ಹೆತ್ತವರಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣಕಾಸನ್ನು ಯಾವ ರೀತಿ ಹೊಂದಿಸುವುದು ಎಂಬ ಚಿಂತೆ ಕಾಡತೊಡಗಿದೆ.
ಬಿಪಿಎಲ್ ಪಡಿತರ ಚೀಟಿ ಪಡೆಯಲು ಎಲ್ಲ ಅರ್ಹತೆ ಹೊಂದಿರುವ ಬಡ ಕುಟುಂಬ ನನ್ನದಾದರೂ ಎಪಿಎಲ್ ಪಡಿತರ ಚೀಟಿ ನೀಡಿರುವ ಕಂದಾಯ ಅಧಿಕಾರಿಗಳು ಕಂದಮ್ಮನ ಅನಾರೋಗ್ಯ ಹಾಗೂ ಬಡತನದ ನಡುವೆ ಸರ್ಕಾರಿ ಸವಲತ್ತು ಪಡೆಯಲು ಅಡ್ಡಗಾಲಿಡುತ್ತಿದ್ದಾರೆ ಎಂದು ಅಬೂ ಸ್ವಾಲಿಹ್ ಈ ಸಂದರ್ಭ ತಮ್ಮ ದುಖವನ್ನು ಪತ್ರಿಕೆ ಜೊತೆ ತೋಡಿಕೊಂಡಿದ್ದಾರೆ.
ಎಳೆಯ ಕಂದಮ್ಮ ಮುಹಮ್ಮದ್ ರಾಝಿಯ ಸುಂದರ ಭವಿಷ್ಯವನ್ನು ರೂಪಿಸಲು ನೆರವಾಗಬಯಸುವ ಸಹೃದಯಿ ಬಾಂಧವರು ಅಬೂಸಾಲಿ ಅವರ ಕರ್ನಾಟಕ ಬ್ಯಾಂಕ್ ಸುಭಾಷ್ ನಗರ- ಸಜಿಪಮೂಡ ಶಾಖೆಯ ಉಳಿತಾಯ ಖಾತೆ ಸಂಖ್ಯೆ 7342500100488101 (ಐಎಫ್‌ಎಸ್ಸಿ ಕೋಡ್ ಕೆಎಆರ್ಬಿ 0000734) ಗೆ ಆರ್ಥಿಕ ನೆರವನ್ನು ಜಮಾ ಮಾಡಬಹುದು. ಹೆಚ್ಚಿನ ವಿವರಗಳಿಗೆ ಅಬೂಸಾಲಿ ಅವರ ಮೊಬೈಲ್ ಸಂಖ್ಯೆ 9964158678 ಗೆ ನೇರವಾಗಿ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.