ಶ್ರೀನಗರ ಶಂಕರಾಚಾರ್ಯ ಬೆಟ್ಟ ಮರುನಾಮಕರಣಕ್ಕೆ ಹಿಂದೂ ಯುವಸೇನೆ ವಿರೋಧ
ಉಡುಪಿ: ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿರುವ ಹಿಂದೂ ಶ್ರದ್ಧಾಕೇಂದ್ರ ಶಂಕರಾಚಾರ್ಯ ಬೆಟ್ಟವನ್ನು 'ತಖ್ತ್- ಎ - ಸುಲೇಮಾನ್' ಎಂದು ಮರುನಾಮಕರಣಗೊಳಿಸಲು ಭಾರತೀಯ ಪುರಾತತ್ವ ಇಲಾಖೆ ಮತ್ತು ಜಮ್ಮುಕಾಶ್ಮೀರ ರಾಜ್ಯ ಸರ್ಕಾರಗಳು ಹುನ್ನಾರ ನಡೆಸುತ್ತಿದೆ ಎಂದು ಹಿಂದೂ ಯುವಸೇನೆ ಆತಂಕ ವ್ಯಕ್ತಪಡಿಸಿದೆ.
ಇದರ ವಿರುದ್ಧ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಶಂಕರಾಚಾರ್ಯ ಪೀಠದ ಮಠಾಧಿಪತಿಗಳಿಗೆ ಪತ್ರ ಮೂಲಕ ವಿನಂತಿಸಲಾಗಿದೆ ಎಂದು ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ. ಈ ದೇಶದಲ್ಲಿ ಈಗಾಗಲೇ ನೂರಾರು ಸ್ಥಳಗಳ ಹೆಸರುಗಳನ್ನು ತುಷ್ಟೀಕರಣದ ನೆಪದಲ್ಲಿ ಬದಲಾಯಿಸಲಾಗಿದೆ. ರಾಜ್ಯದ ಚಂದ್ರದ್ರೋಣ ಪರ್ವತವನ್ನು ಬಾಬಾ ಬುಡನ್ಗಿರಿ ಎಂದು ಬದಲಾಯಿಸಿ, ಅದರ ಪರಿಣಾಮವಾಗಿ ಹಿಂದು ಸಂಘಟನೆಗಳು ಹೋರಾಟ ನಡೆಸುತ್ತಿವೆ.
ಈಗಾಗಲೇ ಶ್ರೀನಗರದ ಹರಿಪರ್ವತವನ್ನು ಕೋಹಿ ಸುಲೇಮಾನ್ ಎಂದೂ, ಅನಂತನಾಗ್ನ್ನು ಇಸ್ಲಮಾಬಾದ್ ಎಂದೂ ಕರೆಯಲು ನಿರ್ಧರಿಸಲಾಗಿದೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆಗೆ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಶಂಕರಾಚಾರ್ಯ ಪೀಠದ ಎಲ್ಲ ಮಠಾಧಿಪತಿಗಳು ಈ ಬಗ್ಗೆ ಹೋರಾಟಕ್ಕೆ ಕೂಡಲೇ ಮುಂದಾಗಬೇಕು ಎಂದು ಶೃಂಗೇರಿ, ಸ್ವರ್ಣವಲ್ಲಿ, ರಾಮಚಂದ್ರಾಪುರ, ಕಂಚಿ, ಎಡನೀರು, ಬಾಳೆಕುದ್ರು ಮೊದಲಾದ ಮಠಾಧೀಶರಿಗೆ ಪತ್ರ ಬರೆದು ವಿನಂತಿಸಲಾಗಿದೆ ಎಂದು ವಾಸುದೇವ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

