'ಕೋ. ಚೆನ್ನಬಸಪ್ಪ ಕ್ಷಮೆ ಕೇಳದಿದ್ದರೆ ಕೊಡಗಿಗೆ ಕಾಲಿಡಲು ಬಿಡುವುದಿಲ್ಲ'
ಗೋಣಿಕೊಪ್ಪಲು: ಕೊಡವ ಜನಾಂಗ ಹಾಗೂ ಹಿಂದೂಗಳ ಬಗ್ಗೆ ಅವಹೇಳನ ಮಾಡಿರುವ ಸಾಹಿತ್ಯ ಸಮ್ಮೇಳನದ ನಿಕಟಪೂರ್ವಾಧ್ಯಕ್ಷ ಕೊ. ಚೆನ್ನಬಸಪ್ಪ ಅವರು ತಮ್ಮ ಕೃತಿಯಲ್ಲಿ ಟಿಪ್ಪುವನ್ನು ವೈಭವೀಕರಿಸಿದ್ದು, ಈ ಬಗ್ಗೆ ಬಹಿರಂಗ ಕ್ಷಮೆಯಾಚನೆ ಮಾಡದೆ ಕೊಡಗು ಜಿಲ್ಲೆಗೆ ಆಗಮಿಸಲು ಬಿಡಲಾರೆವು ಎಂದು ವೀರಾಜಪೇಟೆ ತಾಲೂಕು ಯುವ ಮೋರ್ಚಾ ಅಧ್ಯಕ್ಷ ನೆಲ್ಲೀರ ಚಲನ್ ಹಾಗೂ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ತಿಳಿಸಿದ್ದಾರೆ. ಟಿಪ್ಪುಸುಲ್ತಾನ್ ಹೋರಾಟ ಸಮಿತಿ ನೆಪದಲ್ಲಿ ಕೊ. ಚೆನ್ನಬಸಪ್ಪ ಅವರಿಗೆ ರಕ್ಷಣೆ ನೀಡುವ ಮಾತನಾಡುತ್ತಿರುವವರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಬೇಕಾಗುತ್ತದೆ. ಅನಗತ್ಯ ಘರ್ಷಣೆಗೆ ಎಡೆ ಮಾಡದೆ ಕೊಡಗಿನ ಶಾಂತಿಪ್ರಿಯ ಜನತೆಯ ಮನೋಭಾವವನ್ನು ಸಾಹಿತಿಗಳು ಅರ್ಥೈಸಿಕೊಳ್ಳಬೇಕು. ಜನಾಂಗದ ನಡುವೆ ಒಡಕು ಮೂಡಿಸಲು ಸಾಹಿತ್ಯವನ್ನು ಅಪಬಳಕೆ ಮಾಡಿಕೊಳ್ಳುವದು ಖಂಡನೀಯ. ಇದೀಗ ಟಿಪ್ಪುಸುಲ್ತಾನ್ ಹೋರಾಟ ಸಮಿತಿ ನೆಪದಲ್ಲಿ ಕೊಡಗಿನಲ್ಲಿ ಅಶಾಂತಿ ಉಂಟುಮಾಡಲು ಪ್ರಚೋದನೆ ನೀಡಲಾಗುತ್ತಿದೆ. ಕೊಡವರ ಮೇಲೆ ದೌರ್ಜನ್ಯ ಎಸಗಿದ, ಹಿಂದೂ ದೇವಾಲಯವನ್ನು ಲೂಟಿ ಮಾಡಿದ ಟಿಪ್ಪು ಸುಲ್ತಾನ್ ದೇಶದ್ರೋಹಿಯೇ ವಿನಾ ಸ್ವಾಂತಂತ್ರ್ಯ ಹೋರಾಟಗಾರನಾಗಲಾರ ಎಂದು ನೆಲ್ಲೀರ ಚಲನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

