ಉಡುಪಿ

ಕೃಷ್ಣ, ಮುಖ್ಯಪ್ರಾಣ ಪೂಜೆ ತೃಪ್ತಿ ತಂದಿದೆ: ಸೋದೆಶ್ರೀ

Published On :

ಉಡುಪಿ: ಕಳೆದ ಎರಡು ವರ್ಷಗಳ ಕಾಲ ನಡೆದ ಪರ್ಯಾಯ, ಕೃಷ್ಣ ಮುಖ್ಯಪ್ರಾಣರ ಪೂಜೆ ತಮಗೆ ತೃಪ್ತಿ ತಂದಿದೆ ಎಂದು ಸೋದೆ ಮಠದ ನಿರ್ಗಮನ ಪರ್ಯಾಯ ಪೀಠಾಧೀಶ ಶ್ರೀವಿಶ್ವವಲ್ಲಭ ತೀರ್ಥರು ಹೇಳಿದರು.
 ಅವರು ಶುಕ್ರವಾರ ರಾತ್ರಿ ರಥಬೀದಿಯಲ್ಲಿ ಉಡುಪಿ ನಗರಸಭೆ ಮತ್ತು ಕಾಣಿಯೂರು ಪರ್ಯಾಯ ಸಮಿತಿಯ ವತಿಯಿಂದ ನಡೆದ ಪೌರಸನ್ಮಾನ, ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
 ಭಾವಿ ಪರ್ಯಾಯ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥರು ಸೋದೆ ಶ್ರೀಗಳನ್ನು ಸನ್ಮಾನಿಸಿ ಅಭಿನಂದಿಸಿ, ತಮ್ಮ 20ನೇ ವಯಸ್ಸಿನಲ್ಲಿ ಪರ್ಯಾಯ ಪೂಜೆ, ಆಧ್ಯಾತ್ಮಿಕ, ಧಾರ್ಮಿಕ ಮಹಾಸಾಧನೆ ಮಾಡಿರುವ ಸೋದೆ ಶ್ರೀಗಳು ಇತರರಿಗೂ ಸ್ಪೂರ್ತಿದಾಯಕರಾಗಿದ್ದಾರೆ ಎಂದು ಕೊಂಡಾಡಿದರು.
 ಸಮಾರಂಭದಲ್ಲಿ ಶಾಸಕ ಪ್ರಮೋದ್ ಮಧ್ವರಾಜ್, ನಗರಸಭಾ ಅಧ್ಯಕ್ಷ ಯುವರಾಜ್, ಪೌರಾಯುಕ್ತ ಶ್ರೀಕಾಂತ ರಾವ್, ಪರ್ಯಾಯ ಸಮಿತಿಯ ಅಧ್ಯಕ್ಷರುಗಳಾದ ರಾಘವೇಂದ್ರ ರಾವ್ ಮತ್ತು ವಾಸುದೇವ ರಾವ್, ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ, ಕೋಶಾಧಿಕಾರಿ ರಮೇಶ್ ರಾವ್, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ಮತ್ತು ಶ್ರೀಧರ ಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.