ಶಾಲೆ, ಕಾಲೇಜಲ್ಲಿ ತುಳು ಸಂಘ ಚಿಂತನೆ: ಜಾನಕಿ
ಮಂಗಳೂರು: ಶಾಲೆ, ಕಾಲೇಜ್ಗಳಲ್ಲಿ ತುಳು ಸಂಘಗಳನ್ನು ನಡೆಸಿ ತುಳು ಸಂಸ್ಕೃತಿ, ಭಾಷೆ ಕುರಿತಾದ ಕಾರ್ಯಕ್ರಮ ಆಯೋಜಿಸಲು ತುಳು ಅಕಾಡೆಮಿ ಚಿಂತಿಸಿದೆ ಎಂದು ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಹೇಳಿದರು.
ಶಾಲೆಗಳ ಪಠ್ಯ ಕಲಿಯಲು ತುಳು ಮಕ್ಕಳ ಹೆತ್ತವರೂ ಅಷ್ಟೇನು ಆಸಕ್ತಿ ವಹಿಸುತ್ತಿಲ್ಲ. ಅತ್ಯಂತ ರಸವತ್ತಾದ ತುಳು ಭಾಷೆ ಕುರಿತು ಒಲವು ಬೆಳೆಸಿಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
8, 9 ತರಗತಿಯ ಶಾಲೆ ಪಠ್ಯ ಪುಸ್ತಕ ಮುದ್ರಣವಾಗಿದೆ. 10ನೇ ತರಗತಿಯ ತುಳು ಪಠ್ಯ ಆಗುತ್ತಿದೆ. ಪಠ್ಯಪುಸ್ತಕ ಮಾಡಿಕೊಡುತ್ತೇನೆ ಎಂದು ಹೇಳಿದ ಒಬ್ಬರು ಕೆಲಸ ಬಾಕಿ ಮಾಡದ್ದಾರೆ. ಹೊಸ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಮುದ್ರಣವಾಗಲಿದೆ. ತುಳು ಡಿಪ್ಲೊಮ, ತುಳು ಪಿಜಿ ಕೋರ್ಸ್ಗಳಿಗೂ ಪ್ರಯತ್ನ ಮಾಡುತ್ತೇವೆ. ತುಳು ಸಾಹಿತ್ಯ ಅಕಾಡೆಮಿ ಕೇವಲ ಭಾಷೆ ಮಾತ್ರವಲ್ಲ, ಸಂಸ್ಕೃತಿ, ಸಾಹಿತ್ಯ ಕುರಿತಾಗಿಯೂ ಕೆಲಸ ಮಾಡಬೇಕಾಗಿದೆ. ತುಳು ಎದುರು ಉಳಿದ ಭಾಷೆಗಳು ಸಪ್ಪೆ. ತುಳುವಿನಲ್ಲಿ ವಿಶಿಷ್ಟ ಶಕ್ತಿ ಇದೆ. ಹಿಂದಿನ ಅಧ್ಯಕ್ಷರೆಲ್ಲ ಒಳ್ಳೆ ರೀತಿಯಲ್ಲಿ ನಿರ್ವಹಿಸಿದ್ದಾರೆ. ರಂಗಭೂಮಿ ನಿರ್ಮಾಣಕ್ಕೆ 3 ಕೋಟಿ ಅನುದಾನ ಬಂದಿದೆ. ಖರ್ಚಾಗಿದೆ. ಇನ್ನು 1.8 ಕೋಟಿ ಬಾಕಿ ಇದೆ. ಪೂರ್ಣಗೊಳ್ಳಲು ಕನಿಷ್ಠ 7 ಕೋಟಿ ಬೇಕಾಗಬಹುದು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತುಳು ಭಾಷೆ ಕಾರ್ಯಕ್ರಮ ನೀಡುವಾಗ ಅದಕ್ಕೆ ಶಿಕ್ಷಣ ಇಲಾಖೆ ವಿರೋಧ ವ್ಯಕ್ತಪಡಿಸಿ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಜಿಲ್ಲಾ ಮಟ್ಟದ ಬಳಿಕ ತುಳು ಭಾಷೆಯ ಕಾರ್ಯಕ್ರಮಕ್ಕೆ ಅವಕಾಶ ಇಲ್ಲದ ಕಾರಣ ಸಮಸ್ಯೆ ಆಗುತ್ತಿದೆ ಎಂದರು. ಅಧಿಕಾರ ಸ್ವೀಕರಿಸುವಾಗ ಸರ್ವ ಸದಸ್ಯರ ಸಭೆ ನಡೆಸಿ ಚರ್ಚೆ ನಡೆಸಿದ್ದೇವೆ. ಸೂಕ್ತ ಕ್ರಿಯಾ ಯೋಜನೆ ಚುನಾವಣೆ ಬಳಿಕ ಮಾಡುತ್ತೇವೆ ಎಂದರು.
ರಿಜಿಸ್ಟ್ರಾರ್ ಚಂದ್ರಹಾಸ ರೈ, ಪ್ರೊ. ವೇದವತಿ, ರಘು ಇಡ್ಕಿದು, ಜಯಶೀಲ, ಕೃಷ್ಣಪ್ಪ ಉಪ್ಪೂರು, ರೂಪಕಲಾ ಆಳ್ವ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

