ಕುಡಿಯುವ ನೀರು ಅಭಾವ ನೀಗಲು ವೈಜ್ಞಾನಿಕ ಯೋಜನೆ ತಯಾರಿಸಿ
ಮಣಿಪಾಲ: ಜಿಲ್ಲೆಯಲ್ಲಿ ವರ್ಷದಲ್ಲಿ ಸಾಧಾರಣವಾಗಿ 2 ತಿಂಗಳು ಮಾತ್ರ ಕುಡಿವ ನೀರಿನ ಸಮಸ್ಯೆ ಉಂಟಾಗುತ್ತದೆ. ಅದ್ದರಿಂದ ಇದನ್ನು ಶಾಶ್ವತವಾಗಿ ನಿವಾರಿಸಲು, ದೂರದೃಷ್ಟಿಯ, ವೈಜ್ಞಾನಿಕ, ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಕೈಗಾರಿಕಾ ಇಲಾಖೆಯ ಆಯುಕ್ತ ಮಹೇಶ್ವರ ರಾವ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕುಡಿಯುವ ನೀರು ಅಭಾವ ಮತ್ತು ಬರ ನಿರ್ವಹಣೆ ಕುರಿತ ವಿಶೇಷ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಬರದ ಸ್ಥಿತಿಗತಿಗಳ ಬಗ್ಗೆ ವಿವರ ನೀಡಿದ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲೆಗೆ 2013- 14ನೇ ಸಾಲಿನಲ್ಲಿ ಒಟ್ಟು ರು.4,843.78 ಲಕ್ಷ ಅನುದಾನದಲ್ಲಿ ರು.3,363.93 ಲಕ್ಷ ಬಿಡುಗಡೆಯಾಗಿದೆ. ಅದರಲ್ಲಿ ಒಟ್ಟು ರು.3,238.79 ಲಕ್ಷ ವೆಚ್ಚದೊಂದಿಗೆ 722 ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅವುಗಳಲ್ಲಿ 108 ಕೊಳವೆ ಬಾವಿಗಳನ್ನು ಹಾಗೂ 169 ತೆರೆದ ಬಾವಿಗಳನ್ನು ಹಾಗೂ 196 ನೀರು ಸರಬರಾಜು ಯೋಜನೆ ಹಾಗೂ 52 ಕಿರು ನೀರು ಸರಬರಾಜು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರಾಕೃತಿಕ ವಿಕೋಪ ನಿಧಿಯಡಿ ಜಿಲ್ಲೆಗೆ ಮಂಜೂರಾಗಿರುವ ಹಣವನ್ನು 45 ದಿನಗಳ ಒಳಗೆ ಖರ್ಚು ಮಾಡುವಂತೆ ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿಗಳು, ಕುಡಿಯುವ ನೀರಿನ ಉಸ್ತುವಾರಿ ಕುರಿತು ರಚಿಸಲಾಗಿರುವ ತಾಲೂಕು ಟಾಸ್ಕ್ಫೋರ್ಸ್ಗೊಂಡಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.
ಮಳೆಗಾಲದಲ್ಲಿ ಕಡಲ್ಕೊರೆತ ತಡೆಗೆ ಅಗತ್ಯವಿರುವ ಕಲ್ಲುಗಳನ್ನು ಶೇಖರಿಸಿ, ಸಮಸ್ಯೆ ಬಂದ ಕೂಡಲೇ ಶೀಘ್ರದಲ್ಲಿ ಕಾರ್ಯೋನ್ಮುಖರಾಗುವಂತೆ ಬಂದರು ಇಲಾಖೆಯ ಅಧಿಕಾರಿಗಳಿಗೆ ಕಾರ್ಯದರ್ಶಿಗಳು ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ, ಉಪ ವಿಭಾಗಾಧಿಕಾರಿ ಯೋಗೇಶ್ವರ್, ಜಿಪಂ ಉಪಕಾರ್ಯದರ್ಶಿ ಪ್ರಾಣೇಶ್ ರಾವ್ ಹಾಗೂ ಇತರೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
46 ಗ್ರಾಮಗಳಿಗೆ 128 ಟ್ಯಾಂಕರ್ ನೀರು ಪೂರೈಕೆ
ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿಧಿಯಡಿ ಕುಡಿಯುವ ನೀರು ಅಭಾವವಿರುವ ಉಡುಪಿ ತಾಲೂಕಿನ 40, ಕುಂದಾಪುರದ 24 ಹಾಗೂ ಕಾರ್ಕಳದ 13 ಸೇರಿದಂತೆ ಒಟ್ಟು 77 ಗ್ರಾಮಗಳಲ್ಲಿ ರು.113.70 ಲಕ್ಷ, ವೆಚ್ಚದಲ್ಲಿ 91 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ ರು.75.95 ಲಕ್ಷ ವೆಚ್ಚದಲ್ಲಿ 71 ಕಾಮಗಾರಿಗಳು ಮುಕ್ತಾಯಗೊಂಡಿದ್ದು, 20 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಡುಪಿ ತಾಲೂಕಿನ 12 ಗ್ರಾಮಗಳ 44 ಜನ ವಸತಿ ಪ್ರದೇಶಗಳಿಗೆ 43 ಟ್ಯಾಂಕರುಗಳ ಮೂಲಕ, ಕುಂದಾಪುರದ 26 ಗ್ರಾಮಗಳ 130 ಜನವಸತಿ ಪ್ರದೇಶಗಳಿಗೆ 75 ಟ್ಯಾಂಕರುಗಳ ಮೂಲಕ, ಕಾರ್ಕಳದ 8 ಗ್ರಾಮಗಳ 16 ಜನವಸತಿ ಪ್ರದೇಶಗಳಿಗೆ 20 ಟ್ಯಾಂಕರುಗಳ ಮೂಲಕ ಒಟ್ಟು ಜಿಲ್ಲೆಯ 46 ಗ್ರಾಮಗಳ 190 ಜನವಸತಿ ಪ್ರದೇಶಗಳಿಗೆ 128 ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
-ಡಾ. ಮುದ್ದುಮೋಹನ್, ಡಿಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

