ತನಿಕೋಡು ಶೂಟೌಟ್ ಪ್ರಕರಣ; ಸರ್ಕಾರದ ನಿಲವಿಗೆ ಜನಜಾಗೃತಿ ಸಮಿತಿ ಖಂಡನೆ
ಉಡುಪಿ: ಶೃಂಗೇರಿ ತಾಲೂಕಿನ ತನಿಗೋಡು ಎಂಬಲ್ಲಿ ಶೂಟೌಟ್ ಪ್ರಕರಣದಲ್ಲಿ ಸತ್ತ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಕಬೀರ್ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಸರ್ಕಾರ ವೈಭವೀಕರಿಸಿ, ಕರ್ತವ್ಯ ದಕ್ಷತೆ ಮೆರೆದ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಸಿಬ್ಬಂದಿ ನವೀನ್ ನಾಯ್ಕ್ಗೆ ಬೆಲೆ ಕೊಡದಿರುವುದು ಖಂಡನೀಯ ಎಂದು ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕಾರರಾದ ಗುರುಪ್ರಸಾದ್ ಹೇಳಿದ್ದಾರೆ. ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಹಗಲು ರಾತ್ರಿ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಕಬೀರ್ ಪೊಲೀಸರನ್ನು ನೋಡಿ ತಪ್ಪಿಸಿ ಓಡಿ ಹೋಗುತ್ತಿದ್ದಾಗ ಅವನ ಮೇಲೆ ಗುಂಡು ಹಾರಿಸಿದ್ದು ಅವರ ಕರ್ತವ್ಯದ ಭಾಗವೇ ಆಗಿದೆ. ಇದರಲ್ಲಿ ಪೊಲೀಸರ ತಪ್ಪಿಲ್ಲ ಎಂದು ಗುರುಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಮೃತಪಟ್ಟವನು ಮುಸ್ಲಿಂ ಎಂಬ ಕಾರಣಕ್ಕೆ ಆತನ ಕುಟುಂಬಕ್ಕೆ ರು.5 ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದಕ್ಕೆ ಕೆಲವು ರಾಜಕೀಯ ನಾಯಕರು ಬೆಂಬಲಿಸಿದ್ದಾರೆ. ಉಳ್ಳಾಲದಲ್ಲಿ ಹಿಂದೂಗಳ ಮೇಲೆ ಅಲ್ಪಸಂಖ್ಯಾತರು ಹಲ್ಲೆ ನಡೆಸಿದಾಗ ಯಾರೂ ಹಿಂದೂಗಳಿಗೆ ಪರಿಹಾರ ನೀಡಲು ಮುಂದೆ ಬರಲಿಲ್ಲ. ಇದು ಸರ್ಕಾರದ ಮಲತಾಯಿ ಧೋರಣೆಯಾಗಿದೆ ಎಂದವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

