

ತಿರುವನಂತಪುರಂ:ಕೇರಳದ ವೈನಾಡು ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವ ಮೂಲಕ ದಕ್ಷಿಣ ಹಾಗೂ ಉತ್ತರ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯನ್ನು ತೋರಿಸಿದ್ದಾರೆ. ಆದರೆ, ಪ್ರಧಾನಿ ಮೋದಿಗೆ ತಮಿಳುನಾಡು ಅಥವಾ ಕೇರಳದಲ್ಲಿ ಸ್ಪರ್ಧಿಸುವ ಧೈರ್ಯ ಇದೆಯಾ ? ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಸವಾಲು ಹಾಕಿದ್ದಾರೆ
ರಾಹುಲ್ ಗಾಂಧಿ ವೈನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ದಕ್ಷಿಣ ರಾಜ್ಯಾದ್ಯಂತ ಸ್ಪುಟವಾದ ಉತ್ಸಾಹ ಕಂಡುಬರುತ್ತಿದೆ. ದೇಶದ ಮುಂದಿನ ಪ್ರಧಾನಿ ಅಲ್ಲಿಂದಲೇ ಗೆದ್ದು ಬರಲಿದ್ದಾರೆ ಎಂದು ತರೂರ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸೋಲುವ ಭಯದಿಂದ ರಾಹುಲ್ ಗಾಂಧಿ ಪಲಾಯನ ಮಾಡಿದ್ದಾರೆ ಎಂಬ ಬಿಜೆಪಿ ಹಾಗೂ ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಶಶಿ ತರೂರ್, ಆಡಳಿತಾರೂಢ ಪಕ್ಷ ಪದೇ ಪದೇ ಸುಳ್ಳು ಹೇಳುತ್ತಿದೆ. ಹತಾಶೆಯಿಂದ ಮೋದಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.