ಲೋಕಸಭೆ ಚುನಾವಣೆ: ಅಮೇಥಿಯಲ್ಲಿ ರಾಹುಲ್ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಮೇಥಿಯಿಂದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಅಮೇಥಿಯಲ್ಲಿ ರಾಹುಲ್ ನಾಮಪತ್ರ ಸಲ್ಲಿಕೆ
ಅಮೇಥಿಯಲ್ಲಿ ರಾಹುಲ್ ನಾಮಪತ್ರ ಸಲ್ಲಿಕೆ
Updated on: 
ಅಮೇಥಿ(ಉತ್ತರ ಪ್ರದೇಶ): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಮೇಥಿಯಿಂದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಬರ್ಟ್ ವಾದ್ರಾ ಜತೆಯಾಗಿ ಆಗಮಿಸಿದ ಗಾಂಧಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇದಕ್ಕೆ ಮುನ್ನ ರಾಹುಲ್ ರೋಡ್ ಶೋ ಕೈಗೊಂಡಿದ್ದರು.ಈ ವೇಳೆ ಪ್ರಿಯಾಂಕಾ, ರಾಬರ್ಟ್ ವಾದ್ರಾ ಹಾಗೂ ಅವರ ಇಬ್ಬರು ಮಕ್ಕಳು ಸಹ ರಾಹುಲ್ ಗೆ ಸಾಥ್ ನೀಡಿದ್ದರು.
ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ರಾಹುಲ್ ಅವರ ವಿರುದ್ಧ ಅಮೇಥಿಯಲ್ಲಿ ಕಣದಲ್ಲಿದ್ದಾರೆ. ಇನ್ನು ಎಸ್ಪಿ-ಬಿಎಸ್ಪಿ ಮೈತ್ರಿಕೂಟವು ಅಮೇಥಿಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ಇದಕ್ಕೆ ಮುನ್ನ ಏಪ್ರಿಲ್ 4ರಂದು ಕೇರಳದ ವಯನಾಡ್ ನಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com