ದೇಶ

ಪ್ರಧಾನಿ ಮೋದಿಯ 100 ತಪ್ಪುಗಳು: ಕಾಂಗ್ರೆಸ್ ನಿಂದ ಕಿರು ಪುಸ್ತಕ ಬಿಡುಗಡೆ

ಪ್ರಧಾನಿ ಮೋದಿಯ 100 ತಪ್ಪುಗಳು: ಕಾಂಗ್ರೆಸ್ ನಿಂದ ಕಿರು ಪುಸ್ತಕ ಬಿಡುಗಡೆ
ಕಿರು ಪುಸ್ತಕದ ಕವರ್
Published On :
ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ '100 ತಪ್ಪುಗಳು' ಎಂಬ ಕಿರು ಪುಸ್ತಕವನ್ನು ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿದೆ. ಅಲ್ಲದೆ ಪ್ರಧಾನಿ ಮೋದಿ ಬಿಜೆಪಿಯ ಶಿಶುಪಾಲ(ಮಹಾಭಾರತದ ಒಂದು ಪಾತ್ರ) ಎಂದು ಕರೆದಿದೆ.
ಇಂದು ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ ಈ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಕ್ಷೇತ್ರದಲ್ಲೂ, ಎಲ್ಲಾ ವಿಧದಲ್ಲೂ ಅಚ್ಛೇ ದಿನ್ ಕನಸು ಕುಸಿದು ಬಿದ್ದಿದೆ. ಮೋದಿ ಸರ್ಕಾರ ಸುಳ್ಳು ಭರವಸೆ ನೀಡಿ ಜನ ಸಾಮಾನ್ಯರ ಮೇಲೆ ಸವಾರಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
2014ರಲ್ಲಿ ಬಿಜೆಪಿ ಸರ್ಕಾರವು ಸ್ಪಷ್ಟ ಬಹುಮತ ಹೊಂದಿದ್ದರೂ, ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈಗ ಅವರಿಗೆ ಪಾಠ ಕಲಿಸುವ ಸಮಯ ಬಂದಿದ್ದು, ಸಾಮಾನ್ಯ ವ್ಯಕ್ತಿ ತಮ್ಮ ಪ್ರತಿನಿಧಿಯನ್ನು ಸತ್ಯದ ಆಧಾರದ ಮೇಲೆ ಆಯ್ಕೆ ಮಾಡಬೇಕು ಎಂದು ಮೋದಿ ಸರ್ಕಾರ ಮಾಡಿದ 100 ತಪ್ಪುಗಳು ಪುಸ್ತಕದಲ್ಲಿ ತಿಳಿಸಲಾಗಿದೆ.
ಈ ಕಿರು ಪುಸ್ತಕದಲ್ಲಿ ಮೋದಿಯನ್ನು ಆಧುನಿಕ ಶಿಶುಪಾಲ ಎಂದು ಬಣ್ಣಿಸಲಾಗಿದ್ದು, ಮಹಾಭಾರತದ ಪುರಾಣಕೃತಿಯಲ್ಲಿ ಶಿಶುಪಾಲ ಎಂಬ ರಾಜನ ತಾಯಿ ತನ್ನ ಮಗ 100 ತಪ್ಪು ಮಾಡುವವರೆಗೆ ಕ್ಷಮಿಸಬೇಕು ಎಂದು ಸೋದರಳಿಯ ಕೃಷ್ಣನಿಂದ ವರ ಬೇಡುತ್ತಾಳೆ. ಅದಕ್ಕೆ ಸಮ್ಮತಿಸಿದ ಕೃಷ್ಣ ಶಿಶುಪಾಲನ 101ನೇ ತಪ್ಪಿಗಾಗಿ ವಧಿಸುತ್ತಾನೆ. ಅದೇ ರೀತಿ ದೇಶದ ಜನರು ಮೋದಿಯ 100 ತಪ್ಪುಗಳನ್ನು ಕ್ಷಮಿಸಿದ್ದು, ಈಗ 101ನೇ ತಪ್ಪು ಮಾಡಿರುವ ಪ್ರಧಾನಿಗೆ ಖಂಡಿತಾ ಶಿಕ್ಷೆ ಕಾದಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಕಿರು ಪುಸ್ತಕದಲ್ಲಿ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸೇರಿದಂತೆ ಮೋದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಮಾಡಿದ 100 ತಪ್ಪುಗಳ ವಿವರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.