ಕನಿಷ್ಠ ಒಂದು ರಾಮಮಂದಿರವನ್ನಾದರೂ ನಿರ್ಮಿಸಿದ್ದೀರಾ..?; ಪ್ರಧಾನಿ ಮೋದಿಗೆ ಮಮತಾ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರಾಮಮಂದಿರ ಮುಂದಿಟ್ಟುಕೊಂಡು ಮತ ಕೇಳುವ ನೀವು ಕನಿಷ್ಟ ಒಂದೇ ಒಂದು ರಾಮಮಂದಿರವನ್ನಾದರೂ ನಿರ್ಮಿಸಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರಾಮಮಂದಿರ ಮುಂದಿಟ್ಟುಕೊಂಡು ಮತ ಕೇಳುವ ನೀವು ಕನಿಷ್ಟ ಒಂದೇ ಒಂದು ರಾಮಮಂದಿರವನ್ನಾದರೂ ನಿರ್ಮಿಸಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದ ಬಿಷ್ಣುಪುರದಲ್ಲಿ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ದೀದಿ, ಬಿಜೆಪಿ ಬಾಬು (ಮೋದಿ) ಜೈ ಶ್ರೀರಾಮ್ ಎಂದು ಹೇಳುವ ನೀವು ಒಂದೇ ಒಂದು ರಾಮಮಂದಿರವನ್ನಾದರೂ ನಿರ್ಮಿಸಿದ್ದಿರಾ.. ರಾಮಚಂದ್ರನನ್ನು ನಿಮ್ಮ ಪಕ್ಷದ ಎಜೆಂಟ್ ಮಾಡಿಕೊಂಡಿದ್ದೀರಾ... ಜೈ ಶ್ರೀರಾಮ್ ಎಂದು ಬಲವಂತವಾಗಿ ಇತರೊಂದಿಗೂ ಹೇಳಿಸುತ್ತೀರಾ.. ಚುನಾವಣಾ ಪ್ರಚಾರಕ್ಕಾಗಿ ಮಾತ್ರ ರಾಮಚಂದ್ರ ನಿಮಗೆ ಸೀಮಿತನಾಗಿದ್ದಾನೆ ಎಂದು ಕಿಡಿಕಾರಿದರು.
ಈ ಹಿಂದೆ ಜಾಗ್ರಾಮ್ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಜೈ ಶ್ರೀರಾಮ್ ಎನ್ನುವವರನ್ನು ಬಂಗಾಳದಲ್ಲಿ ಬಂಧಿಸಲಾಗುತ್ತಿದೆ. ನಾನೂ ಕೂಡ ಜೈ ಶ್ರೀರಾಮ್ ಎಂದು ಹೇಳುತ್ತೇನೆ ಧೈರ್ಯವಿದ್ದರೆ ನನ್ನನ್ನೂ ಬಂಧಿಸಿ ಎಂದು ಹೇಳಿದ್ದರು.  ಮೋದಿ ಈ ಭಾಷಣ ಬಂಗಾಳದಲ್ಲಿ ವೈರಲ್ ಆಗಿತ್ತು. ಇದಕ್ಕೂ ಮೊದಲು ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಬೆಂಗಾವಲು ವಾಹನಗಳು ತೆರಳುತ್ತಿದ್ದ ಸಂದರ್ಭದಲ್ಲಿ ಜೈ ಶ್ರೀರಾಮ್ ಎಂದು ಕೂಗಿದ ಮೂವರು ಹಿಂದೂಪರ ಕಾರ್ಯಕರ್ತರನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com