ದೇಶ

ಟ್ವಿಟರ್ ನಿಂದ ಚೌಕಿದಾರ್ ಪದ ತೆಗೆದ ಮೋದಿ, ಎಲ್ಲರೂ ಚೌಕಿದಾರ್ ಪದ ತೆಗೆಯುವಂತೆ ಮನವಿ

ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿದ್ದ ಚೌಕಿದಾರ್ ಪದವನ್ನು ತೆಗೆದಿದ್ದು, ಎಲ್ಲರೂ ಚೌಕಿದಾರ್ ಪದ ತೆಗೆಯುವಂತೆ ಮನವಿ ಮಾಡಿದ್ದಾರೆ.

ಟ್ವಿಟರ್ ನಿಂದ ಚೌಕಿದಾರ್ ಪದ ತೆಗೆದ ಮೋದಿ, ಎಲ್ಲರೂ ಚೌಕಿದಾರ್ ಪದ ತೆಗೆಯುವಂತೆ ಮನವಿ
ಚೌಕಿದಾರ್ ಪದ
Published On :

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿದ್ದ ಚೌಕಿದಾರ್ ಪದವನ್ನು ತೆಗೆದಿದ್ದು, ಎಲ್ಲರೂ ಚೌಕಿದಾರ್ ಪದ ತೆಗೆಯುವಂತೆ ಮನವಿ ಮಾಡಿದ್ದಾರೆ.

ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಮೋದಿ, ಉತ್ಸಾಹವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಮಯ ಬಂದಿದೆ. ಈ ಉತ್ಸಾಹವನ್ನು ಎಲ್ಲಾ ಸಂದರ್ಭಗಳಲ್ಲಿಯೂ ಇಟ್ಟುಕೊಳ್ಳಲಾಗುತ್ತದೆ. ಭಾರತದ ಪ್ರಗತಿಯಾಗಿ ಕೆಲಸವನ್ನು ಮುಂದುವರೆಸಬೇಕಾಗಿದೆ ಎಂದು ಹೇಳಿದ್ದಾರೆ.

ತಮ್ಮ ಟ್ವಿಟರ್ ಮುಂದಿನ ಚೌಕಿದಾರ್ ಪದವನ್ನು ತೆಗೆಯುತ್ತಿದ್ದೇನೆ. ಆದರೆ, ಅದು ನನ್ನ ಭಾಗವಾಗಿಯೇ ಉಳಿಯಲಿದೆ, ಎಲ್ಲರೂ ಚೌಕಿದಾರ್ ಪದವನ್ನು ತೆಗೆಯುವಂತೆ  ಮೋದಿ ಮನವಿ ಮಾಡಿದ್ದಾರೆ.

ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಪದೇ ಪದೇ ದೇಶದ ಕಾವಲುಗಾರ ಕಳ್ಳ ಎಂದು  ಟೀಕಿಸುತ್ತಿದ್ದರ ಹಿನ್ನೆಲೆಯಲ್ಲಿ  ಮಾರ್ಚ್ 10 ರಂದು ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಚೌಕಿದಾರ್ ಅಭಿಯಾನವನ್ನು ಆರಂಭಿಸಲಾಗಿತ್ತು. ಹಲವು ಚುನಾವಣಾ ಪ್ರಚಾರ ಸಭೆಗಳಲ್ಲಿ ರಾಹುಲ್ ಗಾಂಧಿ  ಚೌಕಿದಾರ್ ಚೋರ್ ಹೈ ಎಂದು ವಾಗ್ದಾಳಿ ನಡೆಸಿದ್ದರು.

2014ರ ಚುನಾವಣೆ ಸಂದರ್ಭದಲ್ಲಿ ಚೌಕಿದಾರನಾಗಿ ದೇಶದ ಜನರ ಹಿತಾಸಕ್ತಿ ಕಾಪಾಡುವುದಾಗಿ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.