ರೋಷನ್ ಬೇಗ್ ಅವರದು ಬರೀ ಟೀಸರ್, ಮೇ 23ಕ್ಕೆ ಸಿನಿಮಾ ರಿಲೀಸ್: ಆರ್. ಅಶೋಕ್ ವ್ಯಂಗ್ಯ

ಕಾಂಗ್ರೆಸ್ ಹಿರಿಯ ನಾಯಕ ರೋಷನ್ ಬೇಗ್ ಹೇಳಿಕೆ ಸಂಬಂಧ ಪ್ರತಿಕ್ರಯಿಸಿರುವ ಬಿಜೆಪಿ ಮುಖಂಡ ಆರ್. ಅಶೋಕ್ ಇದು ಕೇವಲ ಟೀಸರ್ ಮಾತ್ರ, ಮೇ 23ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಆರ್. ಅಶೋಕ್
ಆರ್. ಅಶೋಕ್
Updated on: 
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ರೋಷನ್ ಬೇಗ್ ಹೇಳಿಕೆ ಸಂಬಂಧ ಪ್ರತಿಕ್ರಯಿಸಿರುವ ಬಿಜೆಪಿ ಮುಖಂಡ  ಆರ್. ಅಶೋಕ್  ಇದು ಕೇವಲ ಟೀಸರ್ ಮಾತ್ರ, ಮೇ 23ಕ್ಕೆ  ಸಿನಿಮಾ  ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. 
ಸುದ್ದಿಗಾರರೊಡನೆ ಮಾತನಾಡಿದ ಅಶೊಕ್ "ಕಾಂಗ್ರೆಸ್ ನಾಯಕ ರೋಷನ್ ಬೇಗ್ ಇಂದು ಟೀಸರ್ ಬಿಡುಗಡೆ ಮಾಡಿದ್ದಾರೆ, ಅದರಲ್ಲಿ ಇಬ್ಬರು ವಿಲನ್ ಗಳನ್ನು ಹೈಲೈಟ್ ಮಾಡಲಾಗಿದೆ. ಇನ್ನು ಮೇ 23ಕ್ಕೆ ಪೂರ್ತಿ ಚಲನಚಿತ್ರ ಬಿಡುಗಡೆಯಾಗಲಿದೆ." ಎಂದರು.
"ಕಾಂಗ್ರೆಸ್ ನಲ್ಲಿ ಹೀರೋಗಳಾರೂ ಇಒಲ್ಲ, ಅಲ್ಲಿರೋದೆಲ್ಲ ವಿಲನ್ ಗಳು ಹಾಗೂ ಕಾಮಿಡಿ ಆಕ್ಟರ್ ಗಳಾಗಿದ್ದಾರೆ. ಇನ್ನು ಚುನಾವಣಾ ಫಲಿತಾಂಶ ಬಂದ ನಂತರ ಇನ್ನೆಷ್ಟು ವಿಲನ್ ಗಳು ಬರುತ್ತಾರೋ ನೊಡೊಣ" ಅಶೋಕ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
"ಸಿದ್ದರಾಮಯ್ಯ ಮುಖ್ಯ ಖಳನಾಯಕರಾದರೆ ದಿನೇಶ್ ಗುಂಡೂರಾವ್ ಇನ್ನೊಬ್ಬ ಖಳನಾಗಿದ್ದಾರೆ. ವೇಣುಗೋಪಾಲ್ ಓರ್ವ ಹಾಸ್ಯನಟ. ಎಂದು ರೋಷನ್ ಬೇಗ್ ಹೇಳಿದ್ದಾರೆ" ಅಶೋಕ್ ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದ್ದಾರೆ.
"ಮೇ 23 ಬಿಜೆಪಿ ಪಾಲಿಗೆ ಸಂಭ್ರದದ ದಿನವಾದರೆ ಕಾಂಗ್ರೆಸ್ ನವರಿಗೆ ರೆಸಾರ್ಟ್ ಕಡೆ ಹೋಗುವ ದಿನವಾಗಿದೆ.ರೊಷನ್ ಬೇಗ್ ಅವರದ್ದು ಕೇವಲ ಸ್ಯಾಂಪಲ್, ಇನ್ನೂ ಬೆಳಗಾವಿ, ಬಳ್ಳಾರಿಯ ಚಿತ್ರಗಳು ಬಿಡುಗಡೆ ಆಗಬೇಕಿದೆ. ಮಂಡ್ಯ, ತುಮಕುರಿ ಫಲಿತಾಂಅದ ಮೇಲೆ ರಾಜ್ಯ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ" ಅಶೋಕ್ ಹೇಳೀದ್ದಾರೆ.
ಮೇ 23ರ ಮಂಡ್ಯ, ತುಮಕುರು ಫಲಿತಾಂಶ ಘೋಷಣೆ ನಂತರ ಮೈತ್ರಿ ಸರ್ಕಾರವೆಂಬ ಮನೆ ಬೀಳುತ್ತದೆ. ಕಾಂಗ್ರೆಸ್ ನಲ್ಲಿ ಭೂಕಂಪನವಾಗುತ್ತದೆ ಎಂದು ಅವರು  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com