ಫಿಫಾ ವಿಶ್ವಕಪ್ 2018: ಡೆನ್ಮಾರ್ಕ್-ಆಸ್ಟ್ರೇಲಿಯಾ ಪಂದ್ಯ ಡ್ರಾ, ಪೆರು ವಿರುದ್ಧ ಗೆದ್ದ ಫ್ರಾನ್ಸ್

2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಡೆನ್ಮಾರ್ಕ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಪೆರು ವಿರುದ್ಧ ಫ್ರಾನ್ಸ್ ಐತಿಹಾಸಿಕ ಗೆಲುವು ದಾಖಲಿಸಿದೆ...
ಕೈಲ್ಯಾನ್ ಮಡ್ಪೆ
ಕೈಲ್ಯಾನ್ ಮಡ್ಪೆ
ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಡೆನ್ಮಾರ್ಕ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಪೆರು ವಿರುದ್ಧ ಫ್ರಾನ್ಸ್ ಐತಿಹಾಸಿಕ ಗೆಲುವು ದಾಖಲಿಸಿದೆ. 
ಪೆರು ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್ ನ ಯುವ ಆಟಗಾರ 19 ವರ್ಷದ ಕೈಲ್ಯಾನ್ ಮಡ್ಪೆ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲ ಗೋಲು ಬಾರಿಸಿದ್ದಾರೆ. ಕೈಲ್ಯಾನ್ ಗೋಲು ಬಾರಿಸಿದ ಅತೀ ಕಿರಿಯ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 
ಪೆರು ವಿರುದ್ಧ ಫ್ರಾನ್ಸ್ 1-0 ಗೋಲಿನಿಂದ ಗೆಲುವು ಸಾಧಿಸಿದೆ. ಇನ್ನು ಪಂದ್ಯಾವಳಿಯಲ್ಲಿ ಫ್ರಾನ್ಸ್ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪೆರು ಎರಡು ಪಂದ್ಯದಲ್ಲೂ ಸೋಲು ಕಂಡಿದೆ. 
ಆಸ್ಟ್ರೇಲಯಾ ಹಾಗೂ ಡೆನ್ಮಾರ್ಕ್ ನಡುವಿನ ಪಂದ್ಯನಲ್ಲಿ ಅಂತ್ಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com