ಮೆಸ್ಸಿ-ಮರಡೋನಾ ಹೋಲಿಕೆ ಮಾಡದಿರಲು ಜಪ

ಬ್ರಾಸಿಲಿಯಾ: 'ಲಯೋನೆಲ್ ಮೆಸ್ಸಿ ಮತ್ತು ಡೀಗೊ ಮರಡೋನಾ ಹೋಲಿಕೆ ಮಾಡಬೇಡಿ. ಇದು ಮೆಸ್ಸಿ ಪ್ರದರ್ಶನದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ' ಎಂದು ಅರ್ಜೆಂಟೀನಾದ ಮಾಜಿ ಅಂತಾರಾಷ್ಟ್ರೀಯ ಆಟಗಾರ ಜೊರ್ಗೆ ವಾಲ್ಡಾನೊ ಅವರು ಜಪಿಸುತ್ತಿದ್ದಾರಂತೆ. ಬೆಲ್ಜಿಯಂ ವಿರುದ್ಧ ಶನಿವಾರ ಕ್ವಾರ್ಟರ್ಫೈನಲ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಆಟಗಾರರ ನಡುವೆ ಹೋಲಿಕೆ ಹೆಚ್ಚಾಗಿದೆ. ಕಾರಣ ಬೆಲ್ಜಿಯಂ ವಿರುದ್ಧ ನಡೆದ ಮರಡೋನಾ ಅವರ ಘಟನೆಗಳನ್ನು ಅಭಿಮಾನಿಗಳು ಎಂದೂ ಮರೆಯುವುದಿಲ್ಲ. 1982ರಲ್ಲಿ ನಡೆದ ವಿಶ್ವಕಪ್ನ ಗುಂಪು ಹಂತದ ಪಂದ್ಯದಲ್ಲಿ ಮರಡೋನಾ ಅವರು ಬೆಲ್ಜಿಯಂನ ಆರು ರಕ್ಷಣಾ ವಿಭಾಗದ ಆಟಗಾರರನ್ನು ಎದುರಿಸುತ್ತಿರುವ ಕುರಿತು ಫೋಟೋವೊಂದನ್ನು ತೆಗೆಯಲಾಗಿದೆ. ಆ ಘಟನೆಯಿಂದ ಮರಡೋನಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು. ಈಗ ಈ ಇಬ್ಬರು ಆಟಗಾರರನ್ನು ಹೋಲಿಕೆ ಮಾಡುವುದರಿಂದ ಮೆಸ್ಸಿ ಮೇಲೆ ಒತ್ತಡ ಹೆಚ್ಚಲಿದೆ ಎಂಬುದು ವಾಲ್ಡಾನೊ ಅಭಿಪ್ರಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


