ಫೈನಲ್ ಪಂದ್ಯಕ್ಕೆ ಅಡಿಡಾಸ್ ಚೆಂಡು

ನವದೆಹಲಿ: ಜಾಗತಿಕ ಕ್ರೀಡಾ ಸಾಮಗ್ರಿಗಳನ್ನು ತಯಾರಿಸುವ ಅಡಿಡಾಸ್ ಕಂಪನಿ, ಬ್ರೆಜಿಲ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಡಲು ಚೆಂಡನ್ನು ಅನಾವರಣಗೊಳಿಸಿತು. ಇದಕ್ಕೆ ಬ್ರಾಜುಕಾ ಫೈನಲ್ ರಿಯೋ ಎಂದು ಹೆಸರಿಸಲಾಗಿದೆ.ಜುಲೈ 13ರಂದು ಎರಡು ಸಮರ್ಥ ತಂಡಗಳು ಇತಿಹಾಸ ನಿರ್ಮಿಸಲು ಹೋರಾಡುವ ಪಂದ್ಯದಲ್ಲಿ ಆಡಲು ಈ ಚೆಂಡನ್ನು ಬಳಸಲಾಗತ್ತದೆ.
ಬ್ರಾಜುಕಾ ಫೈನಲ್ ರಿಯೋ, ವಿಶ್ವಕಪ್ ಟ್ರೋಫಿ ಮೇಲಿರುವಂತೆ, ಚೆಂಡು ಹಸಿರು ಮತ್ತು ಬಂಗಾರದ ವರ್ಣವನ್ನು ಹೊಂದಿದೆ. ಹೀಗಾಗಿ, ಸದ್ಯಕ್ಕೆ ಪಂದ್ಯಾವಳಿಯಲ್ಲಿ ಉಪಯೋಗಿಸುತ್ತಿರುವ ಚೆಂಡಿಗಿಂತ ಈ ಚೆಂಡಿನ ಬಣ್ಣ ಭಿನ್ನವಾಗಿದೆ. 2.5 ವರ್ಷಗಳಿಂದ ವಿಶ್ವದ ಆಗ್ರ 600 ಆಟಗಾರರು, 30 ತಂಗಳು ಹಾಗೂ ಮೂರು ಖಂಡಗಳ 10 ರಾಷ್ಟ್ರಗಳು ಈ ಚೆಂಡನ್ನು ಪರೀಕ್ಷಿಸಿವೆ ಎಂದು ಅಡಿಡಾಸ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


