ಫಿಫಾ ವಿಶ್ವಕಪ್ 2014

ಬ್ರೆಜಿಲ್‌ಗೆ ಆರಂಭಿಕ ಜಯ: ಆಮೆ ಭವಿಷ್ಯ

ಬ್ರೆಜಿಲ್‌ಗೆ ಆರಂಭಿಕ ಜಯ: ಆಮೆ ಭವಿಷ್ಯ
Published On :

ಪ್ರಾಯಿಯಾ ಡೂ ಫೋರ್ಟ್: ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಪ್ರಾಣಿಗಳ ಭವಿಷ್ಯ ಆರಂಭವಾಗಿದೆ. ಪ್ರಸ್ತುತ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿಕೊಂಡಿರುವ ಬ್ರೆಜಿಲ್ ತನ್ನ ಆರಂಭಿಕ ಪಂದ್ಯದಲ್ಲಿ ವಿಜಯ ಸಾಧಿಸುತ್ತದೆ ಎಂದು ಆಮೆಯೊಂದು ಭವಿಷ್ಯ ನುಡಿದಿದೆ.ಆಯ್ಕೆಗಾಗಿ ಇರಿಸಲಾಗಿದ್ದ ಆಹಾರವನ್ನು ತಿಂದ ನಂತರ ಬ್ರೆಜಿಲ್ ಧ್ವಜದತ್ತ ನೋಡಿದ ಆಮೆ, ಗುರುವಾರ ನಡೆಯಲಿರುವ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಕ್ರೋವೇಷಿಯಾ ವಿರುದ್ಧ ಆತಿಥೇಯ ಬ್ರೆಜಿಲ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. 2010ರ ವಿಶ್ವಕಪ್ ಫುಟ್ಬಾಲ್  ಪಂದ್ಯಾವಳಿಯಲ್ಲಿ ಜರ್ಮನಿ ಆಕ್ಟೋಪಸ್ ಭವಿಷ್ಯ ನುಡಿದಿತ್ತು. ಆ ಪಂದ್ಯಾವಳಿಯಿಂದಲೇ ಪ್ರಾಣಿಗಳಿಂದ ಭವಿಷ್ಯ  ನಡಿಸುವ ಗೀಳು ಆರಂಭವಾಗಿದೆ.
ಉತ್ತರ ಸಲ್ವಾಡೊರ್ ಅಭಯಾರಣ್ಯದಿಂದ ಪ್ರಾಯಿಯಾ ಡೂ ಫೋರ್ಟ್ ಆಮೆಯನ್ನು ತರಲಾಗಿದೆ.
25 ವರ್ಷದ ಗಂಡು ಆಮೆಗೆ ತಿನ್ನಲು ಮೀನನ್ನು ಇಡಲಾಗಿತ್ತು. ಮೀನನ್ನು ತಿಂದ ನಂತರ ಬ್ರೆಜಿಲ್ ಅಥವಾ ಕ್ರೊವೇಷಿಯಾ ಯಾವ ರಾಷ್ಟ್ರದ ಧ್ವಜ ನೋಡುತ್ತದೆಯೋ ಅದು ಗೆಲ್ಲಲಿದೆ ಎನ್ನಲಾಗಿತ್ತು. ಮೀನನ್ನು ತಿಂದ ಆಮೆ ಬ್ರೆಜಿಲ್ ಧ್ವಜವನ್ನು ನೋಡುವ ಮೂಲಕ ಆತಿಥೇಯ ರಾಷ್ಟ್ರದ ಪರ ಭವಿಷ್ಯ ನುಡಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.