ಕಿಕ್ ಸ್ಟಾರ್ಟ್: ಜಾಗತಿಕ ಕ್ರೀಡಾ ಹಬ್ಬಕ್ಕೆ ವರ್ಣರಂಜಿತ ಚಾಲನೆ

ಬ್ರೆಜಿಲ್‌ನ ಪರಿಸರ, ವಿಭಿನ್ನ ಸಮುದಾಯದ ಸಾಂಸ್ಕೃತಿಕ ಸೊಗಡಿನ ಅದ್ಭುತ ಪರಿಕಲ್ಪನೆಗಳನ್ನೊಳಗೊಂಡ ಕಣ್ಮನ ಸೆಳೆಯುವ ಕಾರ್ಯಕ್ರಮಗಳೊಂದಿಗೆ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಸಾವೋ ಪೊಲೊದಲ್ಲಿ ಗುರುವಾರ ಮಧ್ಯರಾತ್ರಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಸ್ಥಳದ ಮಧ್ಯ ಭಾಗದಲ್ಲಿ ಇರಿಸಲಾಗಿದ್ದ ವಿಡಿಯೋ ಚೆಂಡು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲ 32 ದೇಶಗಳ ಬಾಷೆಗಳಲ್ಲಿ ಸ್ವಾಗತ ಕೋರುವ ಮೂಲಕ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪರಿಸರ ಸ್ನೇಹಿ ವಿಶ್ವಕಪ್ ಎಂದು ಹೇಳಿಕೊಂಡಿದ್ದ ಬ್ರೆಜಿಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪರಿಸರಕ್ಕೆ ಸಂಬಂಧಿಸಿದ ಪರಿಕಲ್ಪನೆಗಳನ್ನೇ ಇಟ್ಟುಕೊಂಡು ಹಲವಾರು ಪ್ರದರ್ಶನಗಳನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳ ದಂಡು ವಿಭಿನ್ನವಾದ ಪ್ರದರ್ಶನಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದು ಕಂಡುಬಂದಿತು.
ಪ್ರತಿಭಟನೆ ಬಿಸಿ
ಇಡೀ ಬ್ರೆಜಿಲ್ ಫುಟ್ಬಾಲ್ ವಿಶ್ವಕಪ್‌ಗಾಗಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಎಲ್ಲೆಲ್ಲೂ ಹಬ್ಬದ ವಾತಾವರಣ, ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಫುಟ್ಬಾಲ್ ಅಭಿಮಾನಿಗಳು ವಿಶ್ವದಾದ್ಯಂತ ಕಾತರದಿಂದ ಕಾಯುತ್ತಿದ್ದರು. ಆದರೆ, ವಿಶ್ವಕಪ್ ನಡೆಯುವ ಸ್ಥಳದಲ್ಲೇ ಪೊಲೀಸರು ಅಶ್ರುವಾಯು, ರಬ್ಬರ್ ಬುಲೆಟ್, ಲಾಠಿ ಚಾರ್ಜ್ ಮಾಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಕಾರಣ ಫುಟ್ಬಾಲ್ ಪಂದ್ಯಾವಳಿಗೆ ಅಧಿಕ ಹಣ ವ್ಯಯ ಮಾಡುತ್ತಿರುವುದನ್ನು ವಿರೋಧಿಸಿ, ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಬ್ರೆಜಿಲ್ ನಾಗರಿಕರು ಪಂದ್ಯಾವಳಿಯ ಆರಂಭದ ದಿನವೂ ಪ್ರತಿಭಟನೆಯನ್ನು ಜೋರು ಮಾಡಿದ್ದರು. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಆ ಪ್ರಯೋಗ ಮಾಡಬೇಕಾಯಿತು. ಬ್ರೆಜಿಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಸಹ ಗುರುವಾರ ಪ್ರತಿಭಟನೆ ನಡೆಸುವ ಮೂಲಕ, ಕೆಲ ಹೊತ್ತು ವಿಮಾನ ಹಾರಾಟಕ್ಕೆ ಅಡ್ಡಿಪಡಿಸಿದರು. ಪ್ರತಿಭಟನೆಯಿಂದ ತೀವ್ರ ಸಂಚಾರ ವ್ಯತ್ಯಯವಾಗಿದ್ದು, ಅಶ್ಲೀಲ ಪದಗಳ ಬಳಕೆಯೊಂದಿಗೆ ಹಳದಿ ಮತ್ತು ಹಸಿರು ಬಣ್ಣದ ಟಿ ಶರ್ಟ್ ಮಾರಾಟ ಮಾಡಿದ ದೃಶ್ಯ ಕಂಡುಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


