ಕೆಮರೂನ್ ಮೇಲೆ ಮೆಕ್ಸಿಕೋ ಸವಾರಿ

ನಟಾಲ್: ಮೊದಲಾರ್ಧ ಪಂದ್ಯದಲ್ಲಿ ಗೋಲು ಗಳಿಸಿಲಾಗದೇ ಕಂಗಾಲಾಗಿದ್ದ ಪಂದ್ಯದ ದ್ವಿತೀಯಾರ್ಧದಲ್ಲಿ, ಒರಿಬೆ ಪೆರಾಲ್ಟಾ ಅವರು ದಾಖಲಿಸಿದ ಏಕೈಕ ಗೋಲಿನೊಂದಿಗೆ ಮೆಕ್ಸಿಕೋ ತಂಡ ಫುಟ್ಬಾಲ್ ವಿಶ್ವಕಪ್ನ ಎರಡನೇ ಪಂದ್ಯದಲ್ಲಿ ಕೆಮರೂನ್ ವಿರುದ್ಧ 1-0 ಅಂತರದಿಂದ ಜಯ ಕಂಡುಕೊಂಡಿತು.
ಮೊದಲಾರ್ಧ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಗೋಲು ದಾಖಲಿಸಲು ಸಾಕಷ್ಟು ಪ್ರಯತ್ನ ನಡೆಸಿದರಾದರೂ, ಗೋಲು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧ ಪಂದ್ಯದ 61ನೇ ನಿಮಿಷದಲ್ಲಿ ಗಳಿಸಿದ ಗೋಲು, ಮೆಕ್ಸಿಕನ್ ತಂಡದಲ್ಲಿ ಮರ ಭೂಮಿಯಲ್ಲಿ ನೀರಿನ ಬುಗ್ಗೆ ಉಕ್ಕಿ ಹರಿದಷ್ಟೇ ಸಂತಸವನ್ನುಂಟು ಮಾಡಿತು. ಇದರೊಂದಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಫ್ರಿಕಾ ತಂಡವೊಂದನ್ನು ಮೆಕ್ಸಿಕೋ ಇದೇ ಮೊದಲ ಬಾರಿಗೆ ಸೋಲಿಸಿದಂತಾಗಿದೆ.
ಬಾರ್ಸಿಲೋನಾ ತಂಡದ ಪ್ರಮುಖ ಆಟಗಾರ ಸ್ಯಾಂಟೋಸ್ ಮೆಕ್ಸಿಕೋ ತಂಡದ ಪರ ಗೋಲು ದಾಖಲಿಸಲು ಆಗಲಿಲ್ಲ. ಆದರೆ, ಗೋಲು ದಾಖಲಿಸಲು ನೆರವಾದರು. ಹೆಕ್ಟರ್ ಹೆರೆರಾ ಪಾಸ್ ಮಾಡಿದ ಚೆಂಡನ್ನು ಅವರು ಎದುರಾಳಿ ರಕ್ಷಣಾ ವಿಭಾಗದ ಇಬ್ಬರು ಆಟಗಾರರ ನಡುವೆ ಗೋಲು ಪೆಟ್ಟಿಗೆಯತ್ತ ನುಗ್ಗಿಸಿದರು. ಆದರೆ, ಪ್ರಯತ್ನ ಸಫಲವಾಗಲಿಲ್ಲ. ನಂತರ ಪೆರಾಲ್ಟಾ ಬಲವಾಗಿ ಗೋಲುಪೆಟ್ಟಿಗೆಯತ್ತ ನುಗ್ಗಿಸಿದ ಚೆಂಡನ್ನು ತಡೆಯುವಲ್ಲಿ ಕೆಮರೂನ್ ತಂಡ ವಿಫಲವಾಯಿತು.
ಆಕ್ರಮಣಕಾರಿ ಪ್ರದರ್ಶನ ನೀಡಿದ ಮೆಕ್ಸಿಕೋ ತಂಡ ಪಂದ್ಯದ ಆರಂಭದಿಂದಲೂ ಕೆಮರೂನ್ ಮೇಲೆ ಪಾರಮ್ಯ ಮೆರೆದಿದ್ದು ಕಂಡುಬಂದಿತು. ಆದರೆ, ಅವರ ರಕ್ಷಣಾ ವಿಭಾಗ ಕೊಂಚ ವೈಫಲ್ಯ ಅನುಭವಿಸಿದ್ದು ಕಂಡುಬಂದಿತು. ಪೆರಾಲ್ಟಾ ಅವರು ಗೋಲು ದಾಖಲಿಸುವ ಮುನ್ನ ಪಂದ್ಯದ 10ನೇ ಮತ್ತು 31ನೇ ನಿಮಿಷದಲ್ಲಿ ದಾಖಲಿಸಿದ ಗೋಲುಗಳನ್ನು ನಿರಾಕರಿಸಲಾಯಿತು. ಮೊದಲು ಬಲ ಬದಿಯಿಂದ ಸ್ಟ್ರೈಕರ್ ಹೆಕ್ಟರ್ ಹೆರಾರಾರೆ ಪಾಸ್ ಮಾಡಿದ ಚೆಂಡನ್ನು ಗೋಲಾಗಿಸುವಲ್ಲಿ ಸ್ಯಾಂಟೋಸ್ ಯತ್ನಿಸಿದ್ದರು. ಆದರೆ, ಅದನ್ನು ನಿರಾಕರಸಲಾಯಿತು. ಹೀಗಾಗಿ ಕ್ರೀಡಾಂಗಣದಲ್ಲಿ ನೆರೆದಿದ್ದ ಮೆಕ್ಸಿಕೋದ ಅಪಾರ ಅಭಿಮಾನಿಗಳಲ್ಲಿ ಮೌನ ಆವರಿಸಿತು.
ಇದಾಗಿ 6 ನಿಮಿಷಗಳ ನಂತರ, ಕೆಮರೂನ್ ದಂತಕತೆ ಸ್ಯಾಮುಯಲ್ ಎಟೋ ಅವರು ಮೂಲೆಯಿಂದ ಚೆಂಡನ್ನು ನೆಟ್ಗೆ ಬಡಿಯುವಂತೆ ಮಾಡಿದ್ದರು. ಈ ಸಮಯದಲ್ಲಿ ಆಫ್ರಿಕಾ ತಂಡವನ್ನು ಮುನ್ನಡೆ ಕಂಡುಕೊಳ್ಳುವಂತೆ ಮಾಡಲು ಎಟೋ ಸದಾವಕಾಶವನ್ನು ಹೊದಿದ್ದರು. ಆದರೆ, ಚೆಂಡನ್ನು ಅಡ್ಡ ಹೊಡೆದದ್ದರಿಂದ ಗುರಿ ತಪ್ಪಿತು.
ಆಗ ಮೆಕ್ಸಿಕೋದ ರಕ್ಷಣಾ ವಿಭಾಗ ಕೊಂಚ ವೈಫಲ್ಯ ಹೊಂದಿದಂತೆ ಕಂಡಬಂದಿತು.
ಆದರೆ, 31ನೇ ನಿಮಿಷದಲ್ಲಿ ಸ್ಯಾಂಟೋಸ್ ಅವರಿಗೆ ನಂಬಲಾಗ ಮಾದರಿಯಲ್ಲಿ ಅವಕಾಶವೊಂದು ಒಲಿದು ಬಂದಿತ್ತು. ಆದರೆ, ಲೈನ್ಸ್ಮೆನ್ಗಳು ಧ್ವಜ ಎತ್ತಿ ಹಿಡಿಯುವ ಮೂಲಕ ಮೆಕ್ಸಿಕೋಗೆ ಮತ್ತೊಮ್ಮೆ ನಿರಾಸೆ ಉಂಟು ಮಾಡಿದರು.
ಗೋಲು ವಿವರ
ಮೆಕ್ಸಿಕೋ-1
ಒರಿಬೆ ಪೆರಾಲ್ಟಾ 61ನೇ ನಿಮಿಷ
ಸೋತ ನಿರಾಸೆಯಲ್ಲಿ ಕೆಮರೂನ್ ಆಟಗಾರರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


