ಮೊದಲ ಬಾರಿಗೆ ಗೋಲ್ ಲೈನ್ ಟೆಕ್ನಾಲಜಿ

ಇದೇ ಮೊದಲ ಬಾರಿಗೆ ಬ್ರೆಜಿಲ್ ವಿಶ್ವಕಪ್ ಮೂಲಕ ಫೀಫಾ ಪರಿಚಯಿಸಿರುವ ಗೋಲ್ ಲೈನ್ ಟೆಕ್ನಾಲಜಿ ಮೊದಲ ಬಾರಿಗೆ ಪ್ರಯೋಗಕ್ಕೆ ಒಳಪಡಿಸಲಾಗಿದ್ದು, ಬಂದಿದ್ದು, ಅದರಿಂದ ಸಾಕಾರಾತ್ಮಕ ತೀರ್ಪು ಹೊರಬಂದಿದೆ. ಪಂದ್ಯದ 48ನೇ ನಿಮಿಷದಲ್ಲಿ ಕರೀಂ ಬೆಂಜೆಮಾ ಅವರು ಎದುರಾಳಿ ಗೋಲುಪೆಟ್ಟಿಗೆಯತ್ತ ರಭಸವಾಗಿ ಬಾರಿಸಿದ ಚೆಂಡು ಕಂಬಕ್ಕೆ ಬಡಿದು ಹಿಂತಿರುಗುತ್ತದೆ. ಆಗ ಗೋಲ್ಕೀಪರ್ ನೋಯೆಲ್ ವಲ್ಲಾಡರೆಸ್ ಅದಕ್ಕೆ ತಡೆಯೊಡ್ಡಲು ಮುಂದಾಗುತ್ತಾರೆ. ಆಗ ಚೆಂಡು ಅವರ ಕೈಗೆ ಬಡಿದು ಕೊಂಚ ಗೋಲುಬಲೆಯ ಗೆರೆ ದಾಟುತ್ತಿದ್ದಂತೆಯೆ ವಲ್ಲಾಡರೆಸ್ ಪುನಃ ಅದನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಆಗ ರೆಫರಿ ಸೇರಿದಂತೆ, ಗೋಲಾದ ಬಗ್ಗೆ ಯಾರಿಗೂ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಪರಿಣಾಮವಾಗಿ ಗೋಲ್ ಲೈನ್ ಟೆಕ್ನಾಲಜಿಯ ಮೋರೆ ಹೋಗಲಾಗುತ್ತದೆ. ಅದರಲ್ಲಿ ಈ ಸೂಕ್ಷ್ಮತೆಯನ್ನು ಗಮನಿಸಿದಾಗ ಚೆಂಡು ಗೋಲಿನ ಬಲೆಯೊಳಕ್ಕೆ ಕೊಂಚ ನುಸುಳಿರುವುದು ಕಂಡುಬರುತ್ತದೆ. ಹಾಗಾಗಿ, ಮ್ಯಾಚ್ ರೆಫರಿ, ಫ್ರಾನ್ಸ್ ತಂಡಕ್ಕೆ ಗೋಲು ನೀಡುತ್ತಾರೆ. ವಲ್ಲಾಡರೆಸ್ ಕೈಗೆ ಬಡಿದು ಚೆಂಡು ಬಲೆಯೊಳಕ್ಕೆ ನುಸುಳಿದ್ದು ಸ್ಪಷ್ಟವಾದ ಕಾರಣ ಸ್ವಯಂ ಗೋಲು ಎಂದು ದಾಖಲಿಸಲಾಗುತ್ತದೆ.
ಇದಕ್ಕೂ ಮುನ್ನ ಪಂದ್ಯದ 43ನೇ ನಿಮಿಷದಲ್ಲಿ ಗೋಲು ಆವರಣದ ಬಳಿ ಫ್ರಾನ್ಸ್ನ ರಕ್ಷಣಾ ಆಟಗಾರ ಪಾಲ್ ಪೊಗ್ಬಾ ಅವರನ್ನು ನೆಲಕ್ಕೆ ಬೀಳಿಸಿದ ವಿಲ್ಸನ್ ಪೆಲಾಸಿಯಸ್ಗೆ ಕೆಂಪು ಕಾರ್ಡ್ ನೀಡಿ ಹೊರಗೆ ಕಳುಹಿಸಲಾಗುತ್ತದೆ. ಅಲ್ಲದೆ ಫ್ರಾನ್ಸ್ ತಂಡಕ್ಕೆ ಪೆನಾಲ್ಟಿ ಅವಕಾಶವನ್ನೂ ನೀಡಲಾಗುತ್ತದೆ. ಈ ಅವಕಾಶವನ್ನು ತೆಗೆದುಕೊಂಡ ಕರೀಂ ಬೆಂಜೆಮಾ ಚೆಂಡನ್ನು ನಿರೀಕ್ಷಿತ ಗುರಿಯೊಳಕ್ಕೆ ಸೇರಿಸುವ ಮೂಲಕ ಫ್ರಾನ್ಸ್ ಆಟಗಾರರ ಸಂಭ್ರಮಕ್ಕೆ ಕಾರಣರಾಗುತ್ತಾರೆ. ಮತ್ತೊಂದೆಡೆ ಉತ್ತರಾರ್ಧದ ಆಟದಲ್ಲಿ ಒಬ್ಬ ಆಟಗಾರನ ಕೊರತೆಯಲ್ಲಿ 10 ಮಂದಿಯಿಂದಲೇ ಹೋರಾಟ ಮುಂದುವರಿಸಿದ ಪಶ್ಚಾತ್ತಾಪ ಹೋಂಡುರಾಸ್ ತಂಡಕ್ಕೆ ನಷ್ಟವೇ ಆಗುತ್ತದೆ. ಫ್ರಾನ್ಸ್ನ ಪ್ರಬಲ ರಕ್ಷಣಾ ಗೋಡೆಯನ್ನು ಭೇದಿಸಲಾಗದೇ ಭಾರಿ ನಿರಾಸೆಗೊಳ್ಳುವ ಹೋಂಡುರಾಸ್ ಆಟಗಾರರು ಅಂತಿಮವಾಗಿ ಜೋಲುಮೊರೆ ಹೊತ್ತುಕೊಂಡು ಪಂದ್ಯದ ಹೋರಾಟಕ್ಕೆ ತೆರೆ ಎಳೆದುಕೊಳ್ಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


