ಫಿಫಾ ವಿಶ್ವಕಪ್ 2014

ಜಪಾನ್-ಗ್ರೀಸ್ ಪಡೆಗಳಿಗೆ ಗೆಲವು ಅನಿವಾರ್ಯ

ಜಪಾನ್-ಗ್ರೀಸ್ ಪಡೆಗಳಿಗೆ ಗೆಲವು ಅನಿವಾರ್ಯ
Published On :

ನಟಾಲ್: ಜಪಾನ್ ಮತ್ತು ಗ್ರೀಸ್ ತಂಡಗಳು ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ನಾಕೌಟ್ ಸುತ್ತಿಗಾಗಿ ಪೈಪೋಟಿಯಲ್ಲಿ ಉಳಿದುಕೊಳ್ಳಬೇಕಾದರೆ, ತಮ್ಮ ಎರಡನೇ ಲೀಗ್ ಪಂದ್ಯದಲ್ಲಿ ಗೆಲವು ಕಾಣುವುದು ಅನಿವಾರ್ಯವಾಗಿದೆ. ಎಸ್ಟಾಡಿಯೊ ಡಾಸ್ ಡುನಾಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ನಡೆಯಲಿರುವ 'ಸಿ' ಗುಂಪಿನ ಪಂದ್ಯದಲ್ಲಿ ಜಪಾನ್ ಮತ್ತು ಗ್ರೀಸ್ ತಂಡಗಳು ಪರಸ್ಪರ ಎದುರಾಗಲಿದ್ದು, ಉಭಯರ ಪಾಲಿಗೂ ಇದು ಪ್ರತಿಷ್ಠೆಯ ಸಮರವಾಗಿದೆ.
ಜಪಾನ್-ಗ್ರೀಸ್ ತಮ್ಮ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿವೆ. ಐವರಿ ಕೋಸ್ಟ್ ವಿರುದ್ಧ ಜಪಾನ್ 1-2ರಿಂದ ತಲೆಬಾಗಿಸಿದ್ದರೆ, ಕೊಲಂಬಿಯಾ ಎದುರು ಗ್ರೀಸ್ ತಂಡ 0-3 ಗೋಲುಗಳಿಂದ ಶರಣಾಗಿತ್ತು. ಉಭಯ ಪಡೆಗಳು ಈವರೆಗೆ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. 2005ರಲ್ಲಿ ನಡೆದ ಕಾನ್ಫೆಡ್‌ರೇಶನ್ ಕಪ್‌ನಲ್ಲಿ ಮುಖಾಮುಖಿಯಾದಾಗ ಜಪಾನ್ ತಂಡ ಏಕೈಕ ಗೋಲಿನಿಂದ ಗ್ರೀಸ್ ತಂಡದ ಸವಾಲು ಹತ್ತಿಕ್ಕಿತ್ತು. ಇಲ್ಲಿ ಅದಕ್ಕೆ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಗ್ರೀಸ್ ಆಟಗಾರರಿದ್ದರೆ, ಗೆಲವಿನ ಅಭಿಯಾನ ಮುಂದುವರಿಸಿಕೊಂಡು ಹೋಗುವ ಲೆಕ್ಕಾಚಾರದಲ್ಲಿ ಜಪಾನ್ ಆಟಗಾರರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.