ಚಾಂಪಿಯನ್ನರ ಮೂಟೆ ಕಟ್ಟಿದ ಚಿಲಿನಾಕೌಟ್ಗೆ

ರಿಯೋ ಡಿ ಜನೈರೊ: ಹಾಲಿ ಚಾಂಪಿಯನ್ ಸ್ಪೇನ್ ತಂಡದ ಹೋರಾಟ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದಲ್ಲೇ ಅಂತ್ಯಗೊಂಡಿದೆ. ತನ್ನ ಮೊದಲ ಲೀಗ್ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ 5-1 ಅಂತರದಿಂದ ಸೋಲನುಭವಿಸಿದ್ದ ಸ್ಪೇನ್ ಗುರುವಾರ ನಡೆದ
ತನ್ನ ಎರಡನೇ ಪಂದ್ಯದಲ್ಲಿ ಚಿಲಿ ವಿರುದ್ಧ 0-2 ಗೋಲುಗಳ ಅಂತರದಿಂದ ಸೋಲುವ ಮೂಲಕ ಲೀಗ್ ಹಂತದಲ್ಲೇ ತನ್ನ ಹೋರಾಟ ಅಂತ್ಯಗೊಳಿಸಿದೆ.
ಸ್ಪೇನ್ ಮೇಲೆ ಈ ಬಾರಿ ಸಹ ಭಾರೀ ನಿರೀಕ್ಷೆ ಇಡಲಾಗಿತ್ತು. ಅಲ್ಲದೆ, ಹಾಲಿ ಚಾಂಪಿಯನ್ ತಂಡದ ಪರ ಬೆಟ್ಟಿಂಗ್ ಸಹ ಜೋರಾಗಿಯೇ ನಡೆದಿತ್ತು. ಆದರೆ, ಅಂತಿಮವಾಗಿ ಪಂದ್ಯಾವಳಿಯಿಂದ ಹೊರಬಿದ್ದಿರುವುದು ಸಹಜವಾಗಿಯೇ ಅಭಿಮಾನಿಗಳಲ್ಲಿ ಅಪಾರ ನಿರಾಸೆ ಮೂಡಿಸಿದೆ. ಅಲ್ಲದೆ, ಮೊದಲೆರಡು ಪಂದ್ಯಗಳಲ್ಲೂ ಸೋಲನುಭವಿಸುವ ಮೂಲಕ ವಿಶ್ವಕಪ್ನಿಂದ ಹೊರಬಿದ್ದ ಮೊದಲ ಹಾಲಿ ಚಾಂಪಿಯನ್ ತಂಡ ಎಂಬ ಅಪಕೀರ್ತಿಗೂ ಅದು ಒಳಗಾಯಿತು. ಇದುವರೆಗೆ ಫುಟ್ಬಾಲ್ ಇತಿಹಾಸದಲ್ಲೇ ಯಾವುದೇ ಹಾಲಿ ಚಾಂಪಿಯನ್ ತಂಡ ಮೊದಲೆರಡು ಪಂದ್ಯಗಳಲ್ಲಿ ಸೋಲುವ ಮೂಲಕ ಪಂದ್ಯಾವಳಿಯಿಂದ ಹೊರಬಿದ್ದಿರಲಿಲ್ಲ.
1966ರಲ್ಲಿ ಬ್ರೆಜಿಲ್, 2002ರಲ್ಲಿ ಫ್ರಾನ್ಸ್ ಹಾಗೂ 2010ರಲ್ಲಿ ಇಟಲಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿವೆ. ಹೀಗಾಗಿ ಸ್ಪೇನ್ ಸಹ ಈ ರಾಷ್ಟ್ರಗಳ ಗುಂಪಿಗೆ ಸೇರಿದೆ. ಸ್ಪೇನ್ ನಾಕೌಟ್ ಹಂತ ತಲುಪಲು, ಈ ಪಂದ್ಯದಲ್ಲಿ ಗೆಲ್ಲಬೇಕಾಗಿತ್ತು. ಕನಿಷ್ಟ ಡ್ರಾ ಸಾಧಿಸಬೇಕಾಗಿತ್ತು. ಆದರೆ, ಮೊದಲೆರಡು ಸೋಲನುಭವಿಸುವ ಮೂಲಕ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಇದರೊಂದಿಗೆ 'ಬಿ' ಗುಂಪಿನಲ್ಲಿ ಸ್ಪೇನ್ ಜತೆ ಆಸ್ಟ್ರೇಲಿಯಾ ಸಹ ಹೋರಾಟ ಅಂತ್ಯಗೊಳಿಸಿದ್ದು, ಪಂದ್ಯಾವಳಿಯಿಂದ ಹೊರಬಿದ್ದ ಮೊದಲ ತಂಡಗಳು ಎನಿಸಿಕೊಂಡಿವೆ. 20ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಎಡ್ವರ್ಡೊ ವರ್ಗಾಸ್ ಅವರು ಚಿಲಿ ತಂಡಕ್ಕೆ 1-0 ಅಂತರದಿಂದ ಮನ್ನಡೆ ತಂದುಕೊಟ್ಟರು. ನಂತರ 43ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಚಾರ್ಲ್ಸ್ ಅರಾಂಗ್ಯೂಜ್ ಚಿಲಿ 2-0 ಅಂತರದಿಂದ ಮೇಲುಗೈ ಸಾಧಿಸುವಂತೆ ನೋಡಿಕೊಂಡರು. ಇದರೊಂದಿಗೆ ಸ್ಪೇನ್ ತಂಡದ ವಿರುದ್ಧ 2010ರ ವಿಶ್ವಕಪ್ ಪಂದ್ಯಾವಳಿಯಲ್ಲಿ 1-2 ಗೋಲುಗಳಿಂದ ಸೋಲನುಭವಿಸಿದ್ದ ಚಿಲಿ, ಈ ಜಯದೊಂದಿಗೆ ತನ್ನ ಸೇಡನ್ನು ತೀರಿಸಿಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


