ನೈಜೀರಿಯಾ ನಾಟ್ಯಕ್ಕೆ ಬೋಸ್ನಿಯಾ ಬೌಲ್ಡ್

ಕ್ಯೂಬಾ (ಬ್ರೆಜಿಲ್): ಇದೇ ಮೊದಲ ಬಾರಿಗೆ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಪ್ರವೇಶ ಪಡೆದಿದ್ದ ಹೆರ್ಜ್ಗೊವಿನ ತಂಡ, ಆಫ್ರಿಕಾ ಚಾಂಪಿಯನ್ ನೈಜೀರಿಯಾ ಆಡಿದ ನ್ಯಾಟ್ಯಕ್ಕೆ ತಲೆದೂಗುವ ಮೂಲಕ ಮೊದಲ ಸುತ್ತಿನಿಂದ ಹೊರಬಿದ್ದಿದೆ. 29ನೇ ನಿಮಿಷದಲ್ಲಿ ಪೀಟರ್ ಓಡೆಮ್ವಿಂಗೀ ದಾಖಲಿಸಿದ ಮಹತ್ವದ ಗೋಲಿನೊಂದಿಗೆ ಬೊಸ್ನಿಯಾ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿದ ನೈಜೀರಿಯಾ, ನಾಕೌಟ್ ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ.
ಅಲ್ಲದೆ, ನೈಜೀರಿಯಾ ತಂಡ 1998ರ ನಂತರ ಇದೇ ಮೊದಲ ಬಾರಿಗೆ ವಿಶ್ವಕಪ್ ಪ್ರಮುಖ ಹಂತದಲ್ಲಿ ಗೆಲವು ದಾಖಲಿಸಿತು. ಅಲ್ಲದೆ, ಈಗ ಎಫ್ ಗುಂಪಿನಲ್ಲಿ ಅರ್ಜೆಂಟೀನಾ ಜತೆ ನಾಕೌಟ್ ಪ್ರವೇಶಿಸುವ ಫೇವರಿಟ್ ತಂಡ ಎನಿಸಿದೆ. ಇದಕ್ಕೂ ಮುನ್ನ ನಡೆದ ದಿನದ ಮೊದಲ ಪಂದ್ಯದಲ್ಲಿ ಇರಾನ್ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿದ ಅರ್ಜೆಂಟೀನಾ ತಂಡ, ಪ್ರಿ ಕ್ವಾರ್ಟರ್ಫೈನಲ್ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಅರ್ಜೆಂಟೀನಾ ವಿರುದ್ಧ ಸೋತ ಇರಾನ್ ಕೇವಲ ಒಂದು ಅಂಕ ಹೊಂದಿದ್ದರೆ, ನೈಜೀರಿಯಾ 4 ಅಂಕಗಳನ್ನು ಹೊಂದಿದೆ.
ನೈಜೀರಿಯಾ ತಂಡ ಈಗ ಗುರುವಾರ ನಡೆಯಲಿರುವ ತಮ್ಮ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸೆಣಸಲಿದೆ. ನೈಜೀರಿಯಾ ಬಲಿಷ್ಠ ತಂಡವೆನಿಸಿದ್ದರೂ, ಕಳೆದ ಭಾನುವಾರ ಇರಾನ್ ವಿರುದ್ಧ ನಡೆದ ಪಂದ್ಯದಲ್ಲಿ 0-0 ಗೋಲುಗಳಿಂದ ಡ್ರಾ ಸಾಧಿಸುವಲ್ಲಿ ಹರಸಾಹಸಪಟ್ಟಿತ್ತು. ಪಂದ್ಯದೂದ್ದಕ್ಕೂ ನೈಜೀರಿಯಾದ ಎಮ್ಮಾನ್ಯುಲ್ ಎಮಿನೇಕೆ ಅವರು ಬೊಸ್ನಿಯಾ ತಂಡಕ್ಕೆ ಆತಂಕ ಉಂಟುಮಾಡಿದರು. ಅಲ್ಲದೆ, ಬೊಸ್ನಿಯಾದ ಹಿರಿಯ ಆಟಗಾರ ಮತ್ತು ನಾಯಕ ಎಮಿರ್ ಸ್ಪಾಹಿಕ್ ಅವರೊಂದಿಗೆ ಅಂತ್ಯದವರೆಗೂ ತೀವ್ರ ಪೈಪೋಟಿಯನ್ನು ನೀಡಿದರು.
ಪಂದ್ಯದಲ್ಲಿ ಬೊಸ್ನಿಯಾ ಸಹ ಗೋಲು ದಾಖಲಿಸುವ ಅಕಾಶವನ್ನು ಪಡೆದಿತ್ತು. ಆದರೆ, ಆ ತಂಡದ ಎಡಿನ್ ಜೆಕೋ ಅವರು ನೈಜೀರಿಯಾದ ಗೋಲ್ ಕೀಪರ್ ಎನೆಯಾಮಾ ಕಣ್ತಪ್ಪಿಸಿ ಚೆಂಡನ್ನು ಗೋಲ್ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈ ಗೋಲನ್ನು ನಿರಾಕರಿಸಲಾಯಿತು.
ನಂತರ ಸಹ ಜೆಕೋ ಮತ್ತೊಂದು ಅವಕಾಶವನ್ನು ಪಡೆದರು. ಕಾರ್ನರ್ ಕಿಕ್ನಲ್ಲಿ ತಲೆ ಮೂಲಕ ಗೋಲ್ ಪೆಟ್ಟಿಗೆಯತ್ತ ಕಳುಹಿಸಿದ ಚೆಂಡನ್ನು ಅಷ್ಟೇ ಸುಲಭವಾಗಿ ಹಿಂದಿರುಗಿಸುವಲ್ಲಿ ಎನಿಯಾಮಾ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


