ಸ್ಪೇನ್- ಕಾಂಗರೂ ಪ್ರತಿಷ್ಠೆ ಪಣಕ್ಕೆ
ಕ್ಯೂರಿಟಿಬಾ: ಆಸ್ಟ್ರೇಲಿಯಾ ಹಾಗೂ ಸ್ಪೇನ್ ತಂಡ ಈಗಾಗಲೇ ವಿಶ್ವಕಪ್ನಿಂದ ಹೊರಗುಳಿದಿದ್ದು, ಈ ಉಭಯ ತಂಡಗಳ ನಡುವಣ ಕಾದಾಟ ಅನೌಪಚಾರಿಕವಾಗಿದೆ. ಆದರೂ ತಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ನಡೆಸುವ ಕಾದಾಟವಾಗಿ ಈ ಪಂದ್ಯ ಬಿಂಬಿತವಾಗಿದೆ.
ಆಸ್ಟ್ರೇಲಿಯಾ ಸತತ 2 ಸೋಲಿನಿಂದ ಟೂರ್ನಿಯಿಂದ ಹೊರ ಬಿದ್ದಿದ್ದು, ಹಾಲಿ ಚಾಂಪಿಯನ್ ಸ್ಪೇನ್ ವಿರುದ್ಧ ಗೆಲವು ದಾಖಲಿಸುವ ಮೂಲಕ ಪಂದ್ಯಾವಳಿಯಲ್ಲಿ ತಮ್ಮ ಹೋರಾಟವನ್ನು ಗೆಲವಿನೊಂದಿಗೆ ತೆರೆ ಎಳೆಯಲು ಎದುರು ನೋಡುತ್ತಿದೆ.
ಈ ಪಂದ್ಯದ ಮತ್ತೊಂದು ವಿಶೇಷ ಎಂದರೆ, ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಎರಡೂ ತಂಡಗಳು ಆರಂಭಿಕ ಎರಡು ಪಂದ್ಯಗಳಲ್ಲಿ ಹಾಲೆಂಡ್ ಹಾಗೂ ಚಿಲಿ ವಿರುದ್ಧ ಸೋಲನುಭವಿಸಿದ್ದು, ಕಡೇಯ ಪಂದ್ಯದಲ್ಲಿ ಗೆಲವಿನ ಹುಟುಕಾಟ ನಡೆಸುತ್ತಿವೆ. ಆಸ್ಟ್ರೇಲಿಯಾ ತಂಡ ಈ ಪಂದ್ಯವನ್ನು ಸವಾಲಾಗಿ ಪರಿಗಣಿಸಿದೆ ಎಂದರೆ ತಪ್ಪಿಲ್ಲ. ಕಾರಣ ಫಿಫಾ ರ್ಯಾಂಕಿಂಗ್ನಲಿ ್ಲ62ನೇ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ, ಅಗ್ರ ಸ್ಥಾನ ಪಡೆದಿರುವ ಸ್ಪೇನ್ ವಿರುದ್ಧ ಗೆದ್ದರೆ, ಭವಿಷ್ಯದಲ್ಲಿ ತಂಡದ ಆತ್ಮ ವಿಶ್ವಾಸ ಹೆಚ್ಚಿಸಲು ನೆರವಾಗಲಿದೆ. ನೆಮ್ಮದಿಯಿಂದ ಟೂರ್ನಿಗೆ ವಿದಾಯ ಹೇಳಬಹುದು. ಇನ್ನು ಹಾಲಿ ಚಾಂಪಿಯನ್ನರು ಈ ಬಾರಿ ಸೋಲಿನ ಸುಳಿಯಿಂದ ಹೊರ ಬಂದು, ಕನಿಷ್ಠ ಒಂದು ಪಂದ್ಯದಲ್ಲಾದರೂ ಗೆದ್ದು, ಮಾನ ಕಾಪಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಒಟ್ಟಿನಲ್ಲಿ ಪಂದ್ಯ ಟೂರ್ನಿಯಲ್ಲಿ ಅನೌಪಚಾರಿಕವಾಗಿದ್ದರೂ,ಪ್ರತಿಷ್ಠೆಯ ಕದನವಾಗಿದೆ.
ಸ್ಪೇನ್- ಆಸ್ಟ್ರೇಲಿಯಾ (ಗುಂಪು-ಬಿ)
ಪಂದ್ಯ ಆರಂಭ: ನಾಳೆ ರಾತ್ರಿ 09.30
01-ರ್ಯಾಂಕ್-62
00-ಪಂದ್ಯ-00
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

