ಫಿಫಾ ವಿಶ್ವಕಪ್ 2014

ನಾಕೌಟ್ ಅವಕಾಶ ಹೆಚ್ಚಿಸಿಕೊಂಡ ಅಲ್ಜೀರಿಯಾ

ನಾಕೌಟ್ ಅವಕಾಶ ಹೆಚ್ಚಿಸಿಕೊಂಡ ಅಲ್ಜೀರಿಯಾ
Published On :

ಪೋರ್ಟೊ ಅಲೆಗ್ರೆ: ಅತ್ಯಂತ ಹುರುಪು ತುಂಬಿದ, ಚತುರತೆಯ ಆಟ ಪ್ರದರ್ಶಿಸಿದ ಅಲ್ಜೀರಿಯಾ ತಂಡದ ಆಟಗಾರರು ಮೊದಲ ಬಾರಿಗೆ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಕೌಟ್ ಹಂತ ತಲುಪಲು ಹೊಸ್ತಿಲಿಗೆ ಬಂದು ನಿಂತಿದ್ದಾರೆ.
ಎಸ್ಟಾಡಿಯೊ ಬೇರಾ-ರಿಯೊದಲ್ಲಿ ಸೋಮವಾರ ಬೆಳಗ್ಗೆ ನಡೆದ “G^é’ ಗುಂಪಿನ ಪಂದ್ಯದಲ್ಲಿ ಅಲ್ಜೀರಿಯಾ ತಂಡದ ಆಟಗಾರರು 4-2 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಪರಾಭವಗೊಳಿಸಿ ನಾಕೌಟ್ ಸುತ್ತಿನ ಆಸೆ ಜೀವಂತವಾಗಿರಿಸಿಕೊಂಡರು.
ಇದರೊಂದಿಗೆ 1982ರಲ್ಲಿ ಪಶ್ಚಿಮ ಜರ್ಮನಿ ವಿರುದ್ಧದ ಯಶಸ್ವಿ ಫಲಿತಾಂಶದ ನಂತರ ಉತ್ತರ ಆಫ್ರಿಕಾ ತಂಡದ ಮೊದಲ ಗೆಲವು ಇದಾಗಿದೆ. ಅಲ್ಲದೆ, ಮೊದಲ ಬಾರಿಗೆ ಈ ಅಫ್ರಿಕನ್ ತಂಡವೊಂದು ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ 4 ಗೋಲು ದಾಖಲಿಸಿದ ಮೊದಲ ಸಾಧನೆ ಕೂಡ ಇದಾಗಿರುವುದು ಮತ್ತೊಂದು ವಿಶೇಷ.
ಈ ಜಯಭೇರಿಯೊಂದಿಗೆ ಅಲ್ಜೀರಿಯಾ ತಂಡ ತನ್ನ ಗುಂಪಿನಲ್ಲಿ ಬ್ರೆಜಿಲ್ ನಂತರ ಎರಡನೇ ಸ್ಥಾನವನ್ನು ಹೊಂದಿದೆ. ಅಲ್ಜೀರಿಯಾ ಆಟಗಾರರು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ರಷ್ಯಾವನ್ನು ಎದುರಿಸಲಿದ್ದು, ಇಲ್ಲಿ ಗೆದ್ದು ಪ್ರಿಕ್ವಾರ್ಟರ್‌ಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಬೇಕಿದೆ.
ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಅಲ್ಜೀರಿಯಾ ಆಟಗಾರರು ಮೊದಲ ಅವಧಿಯ ಆಟ ಮುಗಿಯುತ್ತಿದ್ದಂತೆಯೇ ಬಹುತೇಕ ವಿಜಯಲಕ್ಷ್ಮಿಯನ್ನು ತನ್ನ ಒಲಿಸಿಕೊಂಡಂತಾಗಿತ್ತು. ಏಕೆಂದರೆ, ವಿರಾಮದ ವೇಳೆಗಾಗಲೇ ಅಲ್ಜೀರಿಯಾ ತಂಡ 3-0 ಗೋಲುಗಳ ಭಾರಿ ಅಂತರದಲ್ಲಿ ಮುನ್ನಡೆ ಸಾಧಿಸಿತ್ತು.
ಅದೇ ರೀತಿ ಉತ್ತರಾರ್ಧದ ಅವಧಿಯ ಆಟ ರೋಚಕತೆಯಿಂದ ಕೂಡಿತ್ತು. ಈ ಬಾರಿ ದಕ್ಷಿಣ ಕೊರಿಯಾ ಆಟಗಾರರು ತಮ್ಮ ಪ್ರಭುತ್ವ ಸ್ಥಾಪಿಸಿದರು. ಒಟ್ಟು 2 ಗೋಲುಗಳನ್ನು ದಾಖಲಿಸಿದ ತಂಡ ಅಲ್ಜೀರಿಯಾಗೆ ಭಯ ಹುಟ್ಟಿಸಿತು. ಆದರೂ, ಸಹ ಅಲ್ಜೀರಿಯಾಕ್ಕೆ ಆರಂಭದಲ್ಲಿ ದೊರೆತ ಭಾರಿ ಮುನ್ನಡೆಗೆ ಯಾವುದೇ ಧಕ್ಕೆಯಾಗಲಿಲ್ಲ.
ಅಲ್ಜೀರಿಯಾದ ಸೋಫಿಯಾನೆ ಫೆಗೌಲಿ ಮತ್ತು ಇಸ್ಲಾಮ್ ಸ್ಲಿಮಾನಿ ಅವರು ಪಂದ್ಯದಲ್ಲಿ ಕೊರಿಯಾದ ಗೋಲ್‌ಕೀಪರ್ ಜಂಗ್ ಸಂಗ್-ರ್ಯೂಂಗ್ ಅವರನ್ನು ಸಾಕಷ್ಟು ಕಾಡಿದರು. ತಮ್ಮ ರಕ್ಷಣಾ ಆಟಗಾರರನ್ನು ವಂಚಿಸಿ ಒಳನುಗ್ಗಿ ಬರುತ್ತಿದ್ದ ಅಲ್ಜೀರಿಯಾದ ಮುನ್ಪಡೆ ಆಟಗಾರರನ್ನು ತಡೆಯುವಲ್ಲಿ ಜಂಗ್ ಸಂಗ್ ವಿಫಲರಾದರು.
ಹಾಗೆ ನೋಡಿದರೆ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಆಟಗಾರರೇ ಸ್ವಲ್ಪ ಹೆಚ್ಚಿನ ಸಮಯ ಚೆಂಡಿನ ಮೇಲೆ ನಿಯಂತ್ರಣ ಹೊಂದಿತ್ತು. ಪ್ರತಿಶತ 54ರಷ್ಟು ಭಾಗ ಚೆಂಡನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಆದಾಗ್ಯೂ, ಅಲ್ಜೀರಿಯಾದ ಪ್ರಬಲ ರಕ್ಷಣಾ ಗೋಡೆಯನ್ನು ಭೇದಿಸಿ ಗೋಲು ಗಳಿಸಲು ದಕ್ಷಿಣ ಕೊರಿಯಾ ಆಟಗಾರರಿಗೆ ಸಾಧ್ಯವಾಗಲಿಲ್ಲ.


ಗೋಲು ವಿವರ
ಅಲ್ಜೀರಿಯಾ 4 ಇಸ್ಲಾಮ್ ಸ್ಲಿಮಾನಿ
26ನೇ ನಿಮಿಷ
ಅಬ್ದೆಲ್‌ಮೌಮೆನೆ ಜೆಬೊವು
38ನೇ ನಿಮಿಷ
ರಫೀಕ್ ಹಲ್ಲಿಚೆ
28ನೇ ನಿಮಿಷ
ಯಾಸಿನೆ ಬ್ರಾಹಿಮಿ
62ನೇ ನಿಮಿಷ

ದ.ಕೊರಿಯಾ
2 ಸನ್ ಹ್ಯೂಂಗ್ ಮಿನ್
50ನೇ ನಿಮಿಷ
ಕೂ ಜಾಕೆಲ್
72ನೇ ನಿಮಿಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.