ಫಿಫಾ ವಿಶ್ವಕಪ್ 2014

ಇತಿಹಾಸ ಸೃಷ್ಟಿಗೆ ಕಾದಿರುವ ಅಲ್ಜೀರಿಯಾ

Published On :

ಕ್ಯುರಿಟಿಬಾ (ಬ್ರೆಜಿಲ್): ವಿಶ್ವಕಪ್‌ನಲ್ಲಿ ನಾಕೌಟ್‌ಹಂತ ತಲುಪಿ ಹೊಸ ಇತಿಹಾಸ ಬರೆಯಲು ಅಲ್ಜೀರಿಯಾಕ್ಕೆ ಸದಾವಕಾಶವೊಂದು ಒದಗಿ ಬಂದಿದೆ. ಆದರೆ, ಗುರುವಾರ 'ಎಚ್‌' ಗುಂಪಿನಲ್ಲಿನಡೆಯಲಿರುವ ಪಂದ್ಯದಲಿ ರಷ್ಯಾವನ್ನು ಸೋಲಿಸಿದರೆ ಮಾತ್ರ ಅದರ ಆಸೆ ಈಡೇರಲಿದೆ.      ಇದುವರೆಗೂ ನಾಲ್ಕು ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಅಲ್ಜೀರಿಯಾ, ಇದೇ ಮೊದಲ ಬಾರಿಗೆ ರಷ್ಯಾವನ್ನು ಎದುರಿಸುತ್ತಿದೆ.  ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಅಲ್ಜೀರಿಯಾ ನಾಕೌಟ್ ಹಂತಕ್ಕೆ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲಿದೆ.
 'ಎಚ್‌' ಗುಂಪಿನಲ್ಲಿ ಬೆಲ್ಜಿಯಂ ಮಾತ್ರ ಈಗಾಗಲೇ ನಾಕೌಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದು, ಎರಡನೇ ಸ್ಥಾನಕ್ಕಾಗಿ ದಕ್ಷಿಣ ಕೊರಿಯಾ ಮತ್ತು ಅಲ್ಜೀರಿಯಾ ನಡುವೆ ಪೈಪೋಟಿ ನಡೆದಿದೆ. ಎರಡು ತಂಡಗಳಲ್ಲಿ ಯಾವ ತಂಡ ಪೂರ್ಣ ಮೂರು ಅಂಕ ಗಳಿಸುತ್ತದೆಯೋ ಅದು ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿದೆ. ವಿಶ್ವಕಪ್ ಪಂದ್ಯಾವಳಿಯ ತನ್ನ 32 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಲ್ಜೀರಿಯಾ ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಕೊರಿಯಾ ವಿರುದ್ಧ 4-2 ಗೋಲುಗಳಿಂದ ಜಯ ಕಂಡುಕೊಂಡು ವಿಶ್ವಾಸದಲ್ಲಿದೆ.
ಅಲ್ಜೀರಿಯಾ-ರಷ್ಯಾ
(ಎಚ್- ಗುಂಪು)
ಪಂದ್ಯ ಆರಂಭ:
ರಾತ್ರಿ 1.30 ಗಂಟೆ
   22    ರ್ಯಾಂಕ್    19
ಮುಖಾಮುಖಿ
   1    ಪಂದ್ಯ    1   1    ಡ್ರಾ    1
   2    ಗೋಲು ಪರ    2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.