ಉರುಗ್ವೆ ಮೇಲೆ ಕೊಲಂಬಿಯಾ ಕೆಂಗಣ್ಣು

ರಿಯೊ ಡಿ ಜನೈರೊ: ಅಚ್ಚರಿಯ ಪ್ರದರ್ಶನದಿಂದ ಫಿಫಾ ವಿಶ್ವಕಪ್ ಪಂದ್ಯಾವಳಿಯ ಪ್ರಿಕ್ವಾರ್ಟರ್ಫೈನಲ್ಗೆ ಪ್ರವೇಶಿಸಿರುವ ಉರುಗ್ವೆ, ತಂಡದ ಪ್ರಮುಖ ಆಟಗಾರ ಲೂಯಿಸ್ ಸೂರೇಜ್ ಅವರ ಅನುಪಸ್ಥಿತಿಯನ್ನು ಎದುರಿಸುತ್ತಿದೆ. ಹಾಗಾಗಿ ಉರುಗ್ವೆ, ಕೊಲಂಬಿಯಾ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಶನಿವಾರ ಇಲ್ಲಿನ ಸ್ಟೆಡಿಯೊ ಮಾರಕಾನದಲ್ಲಿ ನಡೆಯಲಿರುವ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಕೊಲಂಬಿಯಾ ತಂಡ, ಡಿ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಉರುಗ್ವೆ ತಂಡವನ್ನು ಎದುರಿಸುತ್ತಿದ್ದು, ಉಭಯ ತಂಡಗಳು ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸುವ ಲೆಕ್ಕಾಚಾರದಲ್ಲಿವೆ.
ಉರುಗ್ವೆ ತಂಡ 1990ರ ವಿಶ್ವಕಪ್ ಪಂದ್ಯದಲ್ಲಿ ಕಡೇಯ ಬಾರಿಗೆ ಪ್ರಿಕ್ವಾಟರ್ಫೈನಲ್ಗೆ ಪ್ರವೇಶಿಸಿತ್ತು. ಆದರೆ ತಂಡದ ಪ್ರಮುಖ ಆಟಗಾರ ಲೂಯಿಸ್ ಸೂರೇಜ್, ಇಟಲಿಯ ರಕ್ಷಣಾತ್ಮಕ ಆಟಗಾರ ಜಾರ್ಜಿಯೊ ಚಿಲಿನಿ ಅವರ ಭುಜವನ್ನು ಕಚ್ಚಿದ ಪ್ರಕರಣದಲ್ಲಿ, ನಾಲ್ಕು ತಿಂಗಳ ನಿಷೇಧ ಶಿಕ್ಷೆಗೆ ಒಳಗಾಗಿರುವುದು ತಂಡಕ್ಕೆ ಸಿಡಿಲು ಬಡಿದಂತಾಗಿದೆ. ಈ ಹಿಂದೆ ಉಭಯ ತಂಡಗಳು 38 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಉರುಗ್ವೆ 18 ಪಂದ್ಯಗಳಲ್ಲಿ ಗೆಲವು ದಾಖಲಿಸಿ ಮೇಲುಗೈ ಸಾಧಿಸಿದೆ. ಇನ್ನು ಕೊಲಂಬಿಯಾ 11 ಪಂದ್ಯಗಳಲ್ಲಿ ಗೆಲವು ದಾಖಲಿಸಿದರೆ, 9 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಕೊಲಂಬಿಯಾ-ಉರುಗ್ವೆ
ಸಮಯ-ನಸುಕಿನ 1.30
08 ರ್ಯಾಂಕ್ 07
38 ಪಂದ್ಯ 38
11 ಗೆಲವು 18
18 ಸೋಲು 11
09 ಡ್ರಾ 09
43 ಗೋಲು 54
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


