ನೈಜೀರಿಯಾಗೆ ಪಂಚ್ ನೀಡುವುದೇ ಫ್ರಾನ್ಸ್

ರಿಯೊ ಡಿ ಜೆನೈರೊ: ಗುಂಪು ಹಂತದಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಇ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಫ್ರಾನ್ಸ್, ವಿಶ್ವಕಪ್ನ ನಾಕೌಟ್ ಸುತ್ತಿನಲ್ಲಿ ಎಫ್ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದಿರುವ ನೈಜೀರಿಯಾ ತಂಡವನ್ನು ಎದುರಿಸಲಿದೆ.
ಸೋಮವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಗೆಲವು ಸಾಧಿಸುವ ತಂಡ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಲಿದ್ದು, ಉಭಯ ತಂಡಗಳು ಗೆಲವಿನ ಹುಡುಕಾಟದಲ್ಲಿವೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಫ್ರಾನ್ಸ್ ಗುಂಪು ಹಂತದಿಂದ ಅರ್ಹತೆ ಪಡೆದ ಎಲ್ಲಾ ಆವೃತ್ತಿಗಳಲ್ಲೂ ಸೆಮಿಫೈನಲ್ ಹಂತದವರೆಗೆ ಸಾಗಿದೆ. ಹಾಗಾಗಿ ಪ್ರಸ್ತುತ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ತೋರಿರುವ ಫ್ರಾನ್ಸ್ ಪಂದ್ಯದಲ್ಲಿ ಗೆಲವಿನ ಫೇವರಿಟ್ ತಂಡವಾಗಿದೆಯಾದರೂ, ನೈಜೀರಿಯಾ ತಂಡವನ್ನು ಕೇವಲವಾಗಿ ಪರಿಗಣಿಸುವಂತಿಲ್ಲ. ಈ ಹಿಂದೆ ಫ್ರಾನ್ಸ್ ಹಾಗೂ ನೈಜೀರಿಯಾ ತಂಡಗಳು ಒಂದು ಬಾರಿ ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ನೈಜೀರಿಯಾ ತಂಡ 1-0 ಅಂತರದಿಂದ ಗೆಲವಿನ ನಗೆ ಬೀರಿತ್ತು.
ಈ ಬಾರಿ ಫ್ರಾನ್ಸ್ ತಂಡ ಇ ಗುಂಪಿನಲ್ಲಿ 2 ಗೆಲವು ಹಾಗೂ 1 ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಸೋಲರಿಯದ ತಂಡವಾಗಿ ಹೊರಹೊಮ್ಮಿದೆ.
ಫ್ರಾನ್ಸ್-ನೈಜೀರಿಯಾ
(ಸಮಯ-ರಾತ್ರಿ 9.30)
17 ರ್ಯಾಂಕ್ 44
ಮುಖಾಮುಖಿ
01 ಪಂದ್ಯ 01
00 ಗೆಲವು 01
01 ಸೋಲು 00
00 ಗೋಲು 01
ಗುಂಪಿನ ನಡೆ
ಫ್ರಾನ್ಸ್
ಹೋಂಡುರಾಸ್ ವಿರುದ್ಧ 3-0 ಗೆಲವು
ಸ್ವಿಜರ್ಲೆಂಡ್ ವಿರುದ್ಧ 5-2 ಗೆಲವು
ಈಕ್ವೆಡಾರ್ ವಿರುದ್ಧ 0-0 ಡ್ರಾ
ನೈಜೀರಿಯಾ
ಇರಾನ್ ವಿರುದ್ಧ 0-0 ಡ್ರಾ.
ಬೋಸ್ನಿಯಾ ವಿರುದ್ಧ 1-0 ಗೆಲವು
ಅರ್ಜೆಂಟೀನಾ ವಿರುದ್ಧ 2-3 ಸೋಲು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


