ಹಬ್ಬದೂಟಕ್ಕೆ ವಿಶೇಷ ಸಿಹಿ ಪೇಣಿ ಹಾಲು; ಮನೆಯಲ್ಲೇ ಸುಲಭವಾಗಿ ತಯಾರಿಸಿ ಸವಿಯಿರಿ..!

ಪೇಣಿ ಹಾಲು ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಸಿಹಿ ತಿನಿಸು. ತೆಳುವಾದ, ಗರಿಗರಿಯಾದ ಪೇಣಿಯನ್ನು ಸಿಹಿ ಹಾಲಿನಲ್ಲಿ ನೆನೆಸಿ, ಏಲಕ್ಕಿ ಮತ್ತು ಡ್ರೈಫ್ರೂಟ್ಸ್ ಜೊತೆ ಸವಿಯುವುದೇ ಇದರ ವಿಶೇಷತೆ.
Pheni MIlk
ಪೇಣಿ ಹಾಲು
Updated on: 

ಪೇಣಿ ಹಾಲು ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಸಿಹಿ ತಿನಿಸು. ತೆಳುವಾದ, ಗರಿಗರಿಯಾದ ಪೇಣಿಯನ್ನು ಸಿಹಿ ಹಾಲಿನಲ್ಲಿ ನೆನೆಸಿ, ಏಲಕ್ಕಿ ಮತ್ತು ಡ್ರೈಫ್ರೂಟ್ಸ್ ಜೊತೆ ಸವಿಯುವುದೇ ಇದರ ವಿಶೇಷತೆ. ಹಬ್ಬ, ಮದುವೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

ಬೇಕಾಗುವ ಪದಾರ್ಥಗಳು...

  • ಹಾಲು – ½ ಲೀಟರ್

  • ಸಕ್ಕರೆ – 4ರಿಂದ 5 ಚಮಚ

  • ಏಲಕ್ಕಿ ಪುಡಿ – ¼ ಚಮಚ

  • ಕೇಸರಿ – ಸ್ವಲ್ಪ

  • ಬಾದಾಮಿ – 5ರಿಂದ 6

  • ಗೋಡಂಬಿ – 5ರಿಂದ 6

  • ಪಿಸ್ತಾ – ಸ್ವಲ್ಪ

  • ತುಪ್ಪ – 1 ಚಮಚ

Pheni MIlk
ಮದುವೆ ಮನೆಗಳಲ್ಲಿ ಸವಿಯುವ ಸಾಂಪ್ರದಾಯಿಕ ಪೇಣಿ; ಮಾಡುವ ಸರಳ ವಿಧಾನ ಇಲ್ಲಿದೆ..!

ಮಾಡುವ ವಿಧಾನ...

  • ಮೊದಲು ಬಾಣಲೆಯಲ್ಲಿ ಹಾಲು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ.

  • ಹಾಲು ಸ್ವಲ್ಪ ಗಟ್ಟಿಯಾಗುವವರೆಗೆ 8–10 ನಿಮಿಷ ಕುದಿಸಿ.

  • ಇದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ.

  • ಕೇಸರಿಯನ್ನು ಸ್ವಲ್ಪ ಬೆಚ್ಚಗಿನ ಹಾಲಿನಲ್ಲಿ ನೆನೆಸಿ ಮುಖ್ಯ ಹಾಲಿಗೆ ಸೇರಿಸಿ.

  • ಬಾದಾಮಿ, ಗೋಡಂಬಿ ಮತ್ತು ಪಿಸ್ತಾವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.

  • ಒಂದು ಸಣ್ಣ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ ಮತ್ತು ಬಾದಾಮಿಯನ್ನು ಹುರಿದು ಹಾಲಿಗೆ ಸೇರಿಸಿ.

  • ಹಾಲನ್ನು ತಣ್ಣಗಾಗಲು ಬಿಡಿ.

  • ಬಡಿಸುವ ಪಾತ್ರೆಯಲ್ಲಿ ಪೇಣಿಯನ್ನು ಸಣ್ಣ ತುಂಡುಗಳಾಗಿ ಮುರಿದು ಹಾಕಿ. ಅದರ ಮೇಲೆ ತಯಾರಿಸಿದ ಹಾಲನ್ನು ಸುರಿಯಿರಿ. ಮೇಲಿನಿಂದ ಪಿಸ್ತಾ ಮತ್ತು ಬಾದಾಮಿ ಚೂರುಗಳನ್ನು ಉದುರಿಸಿ ಬಡಿಸಿ.

ಟಿಪ್ಸ್...

  • ಗರಿಗರಿಯಾದ ಪೇಣಿ ಇಷ್ಟವಿದ್ದರೆ ಬಡಿಸುವ ಸಮಯದಲ್ಲೇ ಹಾಲು ಹಾಕಿ.

  • ಮೃದುವಾದ ಪೇಣಿ ಇಷ್ಟವಿದ್ದರೆ 5–10 ನಿಮಿಷ ಹಾಲಿನಲ್ಲಿ ನೆನೆಯಲು ಬಿಡಿ.

  • ತಣ್ಣನೆಯ ಪೇಣಿ ಹಾಲು ಬೇಕಿದ್ದರೆ ಹಾಲನ್ನು ಫ್ರಿಜ್‌ನಲ್ಲಿಟ್ಟು ತಣ್ಣಗಾದ ಬಳಿಕ ಬಳಸಿ.

  • ಕೇಸರಿ ಮತ್ತು ಏಲಕ್ಕಿ ಸೇರಿಸುವುದರಿಂದ ಉತ್ತಮ ಪರಿಮಳ ಸಿಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X