ಭಾರತೀಯ ಮಾರುಕಟ್ಟೆಗೆ ಮೋಟೋ ಜಿ 5ಜಿ ಸ್ಮಾರ್ಟ್ ಫೋನ್ ಲಗ್ಗೆ: ವಿಶೇಷತೆಗಳೇನು ಗೊತ್ತೆ?

ಮೊಬೈಲ್ ಉತ್ಪಾದಕ ಸಂಸ್ಥೆ ಮೋಟೊರೋಲಾ ಸೋಮವಾರ (ನ.30) ರಂದು ಮೋಟೋ ಜಿ 5 ಜಿ ಮೊಬೈಲ್ ಫೋನ್ ನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಫ್ಲಿಪ್ ಕಾರ್ಟ್ ನಲ್ಲಿ ಡಿ. 7 ರಿಂದ ಲಭ್ಯವಿರಲಿದೆ.
ಭಾರತೀಯ ಮಾರುಕಟ್ಟೆಗೆ ಮೋಟೋ ಜಿ 5ಜಿ ಸ್ಮಾರ್ಟ್ ಫೋನ್ ಲಗ್ಗೆ: ವಿಶೇಷತೆಗಳೇನು ಗೊತ್ತೆ?
ಭಾರತೀಯ ಮಾರುಕಟ್ಟೆಗೆ ಮೋಟೋ ಜಿ 5ಜಿ ಸ್ಮಾರ್ಟ್ ಫೋನ್ ಲಗ್ಗೆ: ವಿಶೇಷತೆಗಳೇನು ಗೊತ್ತೆ?

ನವದೆಹಲಿ: ಮೊಬೈಲ್ ಉತ್ಪಾದಕ ಸಂಸ್ಥೆ ಮೋಟೊರೋಲಾ ಸೋಮವಾರ (ನ.30) ರಂದು ಮೋಟೋ ಜಿ 5 ಜಿ ಮೊಬೈಲ್ ಫೋನ್ ನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಫ್ಲಿಪ್ ಕಾರ್ಟ್ ನಲ್ಲಿ ಡಿ. 7 ರಿಂದ ಲಭ್ಯವಿರಲಿದೆ.

ಆಕರ್ಷಕ ಕೊಡುಗೆಗಳನ್ನೂ ಘೋಷಿಸಲಾಗಿದ್ದು, 20,999 ರೂಪಾಯಿ ಬೆಲೆ ಹೊಂದಿರುವ ಈ ಮೊಬೈಲ್ ನ್ನು ಹೆಚ್ ಡಿಎಫ್ ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನೀಡಿ ಖರೀದಿಸಿದರೆ 1000 ತಕ್ಷಣವೇ ರಿಯಾಯಿತಿ ದೊರೆಯಲಿದ್ದು 19,999 ರೂಪಾಯಿಗಳಿಗೆ ಲಭ್ಯವಿದೆ.

ವೋಲ್ಕಾನಿಕ್ ಗ್ರೇ ಹಾಗೂ ಫ್ರೋಸ್ಟೆಡ್ ಸಿಲ್ವರ್ ಬಣ್ಣಗಳಲ್ಲಿ ಮೊಬೈಲ್ ಫೋನ್ ಲಭ್ಯವಿದೆ.

6.7 ಇಂಚಿನ ಮ್ಯಾಕ್ಸ್ ವಿಷನ್ ಹೆಚ್ ಡಿಆರ್ 10 ಡಿಸ್ಪ್ಲೇ 20:9 ಆಸ್ಪಕ್ಟ್ ರೇಶಿಯೋ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್  750 ಜಿ ಚಿಪ್ ಸೆಟ್ ಜೊತೆಗೆ 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಆಂತರಿಕ ಸ್ಟೋರೇಜ್ ಹೊಂದಿದೆ.

ಟ್ರಿಪಲ್ ಕ್ಯಾಮರಾ ಗಳನ್ನು ಹೊಂದಿದ್ದು, 48 ಎಂಪಿ ಪ್ರೈಮರಿ ಕ್ಯಾಮರ, 8ಎಂಪಿ ಸೆಕೆಂಡರಿ ಕ್ಯಾಮರಾ, ಸೆಲ್ಫಿ, ವಿಡಿಯೋ ಕರೆಗಳಿಗಾಗಿ 16 ಎಂಪಿ ಮುಂಭಾಗದ ಕ್ಯಾಮರ, 5000ಎಂಎಎಚ್ ಬ್ಯಾಟರಿ ಹೊಂದಿರುವುದು ಈ ಮೊಬೈಲ್ ನ ವಿಶೇಷವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com