ಭಾರತಕ್ಕೂ ಬಂತು ಗರ್ಭಾಶಯದ ಕಸಿ ತಂತ್ರಜ್ಞಾನ

ಗರ್ಭಾಶಯದ ಕಸಿ ತಂತ್ರಜ್ಞಾನ ಇದೀಗ ಭಾರತಕ್ಕೂ ಬಂದಿದ್ದು, ಇನ್ನುಂದೆ ಮಹಿಳೆಯರು ಬಂಜೆತನದಿಂದ ಮುಕ್ತಿ ಪಡೆಯಲಿದ್ದಾರೆ...
ಭ್ರೂಣ
ಭ್ರೂಣ

ಬೆಂಗಳೂರು: ಗರ್ಭಾಶಯದ ಕಸಿ ತಂತ್ರಜ್ಞಾನ ಇದೀಗ ಭಾರತಕ್ಕೂ ಬಂದಿದ್ದು, ಇನ್ನುಂದೆ ಮಹಿಳೆಯರು ಬಂಜೆತನದಿಂದ ಮುಕ್ತಿ ಪಡೆಯಲಿದ್ದಾರೆ.

ಅಪಘಾತ ಹಾಗೂ ಇತರ ಕಾರಣಗಳಿಂದ ಗರ್ಭಕೋಶವನ್ನು ಕಳೆದುಕೊಂಡು ಇನ್ನುಮುಂದೆ ಮಕ್ಕಳೇ ಆಗದಂತ ಮಹಿಳೆಯರಿಗೆ ಈ ತಂತ್ರಜ್ಞಾನ ವರದಾನವಾಗಿದೆ. ಬೆಂಗಳೂರಿನ ಮಹಿಳೆಯೇ ಭಾರತದಲ್ಲಿ ಮೊದಲ ಬಾರಿ ಗರ್ಭಕೋಶ ದಾನ ಮಾಡಿದವರೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಸ್ವೀಡನ್ ನಲ್ಲಿ 2014ರ ಅಕ್ಟೋಬರ್ ನಲ್ಲಿಯೇ ಗರ್ಭಾಶಯ ಕಸಿ ಮಾಡಿಕೊಂಡ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಸ್ವೀಡನ್ ನ ಗುಟೆನ್ ಬರ್ಗ್ ವಿವಿಯ ಗೈನಕಾಲಜಿ ಮತ್ತು ಆಬ್ಸ್ ಟೆಕ್ರಿಕ್ಸ್ ನ ಪ್ರೋ. ಡಾ ಮಾಟ್ಸ್ ಬ್ರಾನ್ಸ್ ಟ್ರನ್ ಗೆ ಭಾರತೀಯ ವೈದ್ಯ ಮಂಡಳಿ(ಎಂಸಿಎ) ಗರ್ಭಕೋಶದ ಕಸಿ

ಪ್ರಕ್ರಿಯೆಯನ್ನು ಭಾರತದಲ್ಲೂ ನಡೆಸಲು ತಾತ್ಕಲಿಕ ಅನುಮತಿ ನೀಡಿದೆ. ಮೊದಲಿಗೆ 15 ಮಹಿಳೆಯರು ಗರ್ಭಕೋಶದ ಕಸಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಲ್ಲಿ ಮುಂದಿನ ತಿಂಗಳು ಗರ್ಭಕೋಶದ ಕಸಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com