ಎದೆಬಡಿತ ನಿಲ್ಲುವ ಮುನ್ನ ಹೃದಯದ ಪಿಸುಮಾತನ್ನು ಆಲಿಸಿ!

ಯೌವ್ವನದಲ್ಲಿ ಹೆಚ್ಚು ಫಾಸ್ಟ್ ಫುಡ್ ಸೇವಿಸಬಹುದು, ಜೀವನ ಶೈಲಿ ಕ್ರಮಬದ್ಧವಾಗಿಲ್ಲದಿದ್ದರೂ ನಡೆಯುತದೆ, ಹೃದಯ ಸಮಸ್ಯೆಗಳು ಎದುರಾಗಲು 20-30 ತುಂಬಾ ಸಣ್ಣ ವಯಸ್ಸು ಎಂದೆಲ್ಲಾ ಭಾವಿಸುವವರಿಗೆ ಇಲ್ಲೊಂದು
ಹೃದಯ ಸಮಸ್ಯೆ
ಹೃದಯ ಸಮಸ್ಯೆ
ಯೌವ್ವನದಲ್ಲಿ ಹೆಚ್ಚು ಫಾಸ್ಟ್ ಫುಡ್ ಸೇವಿಸಬಹುದು, ಜೀವನ ಶೈಲಿ ಕ್ರಮಬದ್ಧವಾಗಿಲ್ಲದಿದ್ದರೂ ನಡೆಯುತದೆ, ಹೃದಯ ಸಮಸ್ಯೆಗಳು ಎದುರಾಗಲು  20-30 ತುಂಬಾ ಸಣ್ಣ ವಯಸ್ಸು ಎಂದೆಲ್ಲಾ ಭಾವಿಸುವವರಿಗೆ ಇಲ್ಲೊಂದು ಎಚ್ಚರಿಕೆ ಇದೆ. ಅದೇನೆಂದರೆ ಹೃದಯ ಸಮಸ್ಯೆ ಎದುರಾಗಲು ವಯಸ್ಸು ಅಡ್ಡ ಬರುವುದಿಲ್ಲ ಎನ್ನುತ್ತಿದೆ ಹೊಸ ಸಂಶೋಧನೆ. 
ವಯಸ್ಸಾದವರಿಗೆ ಮಾತ್ರ ಹೃದಯ ಸಮಸ್ಯೆ ಕಾಣಿಸಿಕೊಳ್ಳುವುದು ಎಂಬ ತಪ್ಪು ಕಲ್ಪನೆಯನ್ನು ತೆಗೆದುಹಾಕಬೇಕು, ಏಕೆಂದರೆ ಯುವಕರಲ್ಲಿಯೂ ಹೃದಯ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚುತ್ತಿದೆ, 29-50 ವಯಸ್ಸಿನ ವ್ಯಕ್ತಿಗಳಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಸಂಶೋಧನೆ ಹೇಳಿದೆ. 
30 ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿಗಿಂತ 900 ಭಾರತೀಯರಿಗೆ ಪ್ರತಿದಿನವೂ ಹೃದಯಾಘಾತವಾಗುತ್ತಿದೆ ಎಂದು ಈ ಅಧ್ಯಯನ ವರದಿ ತಿಳಿಸಿದೆ. ಅಷ್ಟೇ ಅಲ್ಲದೇ 2015 ರಲ್ಲಿ 3.5 ಲಕ್ಷ ರೋಗಿಗಳು ಹೃದಯ ಸಮಸ್ಯೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ, ಈ ಪೈಕಿ ಪ್ರತಿ 10 ರಲ್ಲಿ ಒಬ್ಬರು 40 ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು ಎಂಬ ಅಂಶ ಬಹಿರಂಗವಾಗಿದೆ. ಈ ಪೈಕಿ ಬಹುತೇಕರಿಗೆ ಕೊರೋನರಿ ರಕ್ತನಾಳದಲ್ಲಿ ಉಂಟಾಗುವ ಬ್ಲಾಕೇಜ್ ನಿಂದ ಹೃದಯಾಘಾತ ಸಂಭವಿಸುತ್ತದೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ. 
ಹೃದಯ ಸ್ನಾಯುವಿನ ಊತದಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆಯೂ ಹೆಚ್ಚುತಿದ್ದು. ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರಿಗಿಂತ ನಗರ ಪ್ರದೇಶಗಳಲ್ಲಿ ಬದುಕುತ್ತಿರುವ ಜನರಿಗೆ ಹೃದಯಾಘಾತದ ಅಪಾಯ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಅಧ್ಯಯನ ವರದಿ ಎಚ್ಚರಿಕೆ ನೀಡಿದೆ. 
ಕಡಿಮೆ ವ್ಯಾಯಾಮ, ಹೆಚ್ಚಿನ ಜಂಕ್ ಫುಡ್ ಸೇವನೆ, ಧೂಮಪಾನ, ಕಚೆರಿಯಲ್ಲಿನ ಒತ್ತಡಗಳು ಹೃದಯಾಘಾತ ಸಂಭವಿಸುವುದಕ್ಕೆ ಪ್ರಮುಖ ಕಾರಣವಾಗಿದ್ದು, ಮಹಿಳೆಯರಿಗಿಂತ ಪುರುಷರಲ್ಲಿಯೇ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ, ಕ್ರಮಬದ್ಧವಾದ ಜೀವನ ಶೈಲಿ, ಹಣ್ಣು ತರಕಾರಿಗಳಂತಹ ಉತ್ತಮ ಆಹಾರ ಸೇವನೆ, ನಿಯಮಿತ ತಪಾಸಣೆಗಳಿಂದ ಯುವಕರು ಹೃದಯ ಸಮಸ್ಯೆಯನ್ನು ದೂರವಿಡಬಹುದು ಎಂದು ಅಧ್ಯಯನ ವರದಿ ಸಲಹೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com