ಅಧಿಕ ಋತುಸ್ರಾವಕ್ಕೆ ಶೀಘ್ರದಲ್ಲೇ ಹೇಳಬಹುದು ಗುಡ್ ಬೈ!

ಮಹಿಳೆಯರಿಗೆ ಖುಷಿಯಾಗುವ ವಿಚಾರ ಇಲ್ಲೊಂದಿದೆ. ಋತುಚಕ್ರದ ಸಂದರ್ಭದಲ್ಲಿ ಹಲವು ಯುವತಿಯರಿಗೆ ಅಧಿಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ಮಹಿಳೆಯರಿಗೆ ಖುಷಿಯಾಗುವ ವಿಚಾರ ಇಲ್ಲೊಂದಿದೆ. ಋತುಚಕ್ರದ ಸಂದರ್ಭದಲ್ಲಿ  ಹಲವು ಯುವತಿಯರಿಗೆ ಅಧಿಕ ರಕ್ತಸ್ರಾವ, ಹೊಟ್ಟೆನೋವು, ಮಾನಸಿಕ ತಳಮಳ, ದೈಹಿಕ ನಿಶ್ಯಕ್ತಿಯಾಗುವುದು ಸಾಮಾನ್ಯ. ಮುಟ್ಟಿನ ಸಂದರ್ಭದಲ್ಲಿ ಅಧಿಕ ರಕ್ತಸ್ರಾವ ಉಂಟಾಗಿ ತೀವ್ರ ಹೊಟ್ಟೆನೋವು ಅನುಭವಿಸುವವರಿಗೆ ವಿಜ್ಞಾನಿಗಳು ಕಾರಣ ಮತ್ತು ಚಿಕಿತ್ಸಾ ವಿಧಾನ ಕಂಡುಹಿಡಿದಿದ್ದಾರೆ.
ಇಂಗ್ಲೆಂಡಿನ ಎಡಿನ್ ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರಮುಖ ಪ್ರೊಟೀನ್ ಆದ ಹೆಚ್ ಐಎಫ್-1ನ್ನು ಕಂಡುಹಿಡಿದಿದ್ದು ಅದರಲ್ಲಿ ಮಹಿಳೆಯರಿಗೆ ಮುಟ್ಟಾದಾಗ ಹೆಚ್ಚು ರಕ್ತಸ್ರಾವ ಏಕೆ ಆಗುತ್ತದೆ ಎಂದು ವಿವರಿಸಲಾಗಿದೆ.
ಎಂಡೋಮೆಟ್ರಿಯಮ್ ಎಂದು ಕರೆಯಲ್ಪಡುವ ಗರ್ಭಾಶಯದ ಒಳಪದರವನ್ನು ಅಧ್ಯಯನ ಮಾಡಲಾಗಿದೆ.ಹೈಪೊಕ್ಸಿಯಾ ಪ್ರೇರಿತ ಉತ್ಪಾದನೆಯಾದ ಹೆಚ್ ಐಎಫ್-1 ಎಂಬ ಆಕ್ಸಿಜನ್ ಮಟ್ಟವನ್ನು ತಂಡ ಕಂಡುಹಿಡಿದಿದ್ದು ಇದು ಹೊಟ್ಟೆಯ ಒಳಪದರವನ್ನು ದುರಸ್ತಿ ಮಾಡುತ್ತದೆ.
ಋತುಚಕ್ರದ ವೇಳೆ ಅಧಿಕ ರಕ್ತಸ್ರಾವವಾಗುವ ಮಹಿಳೆಯರಲ್ಲಿ ಹೆಚ್ ಐಎಫ್-1 ಮಟ್ಟ ಕಡಿಮೆಯಾಗಿರುತ್ತದೆ. ಸಂಶೋಧಕರು ಇಲಿಯ ಮೇಲೆ ಪ್ರಯೋಗ ನಡೆಸಿ ಹೆಚ್ಐಎಫ್-1 ಮಟ್ಟವನ್ನು ಹೆಚ್ಚಿಸುವ ಔಷಧವನ್ನು ನೀಡಿ ಪ್ರಯೋಗ ಮಾಡಿದರು. ಅದರಲ್ಲಿ ಉತ್ತಮ ಫಲಿತಾಂಶ ವ್ಯಕ್ತವಾಯಿತು. 
ಶೇಕಡಾ 20ರಿಂದ 30ರಷ್ಟು ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಹೆಚ್ಚು ರಕ್ತಸ್ರಾವವಾಗುತ್ತದೆ ಎಂದು ಹೇಳಿಕೊಂಡು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುತ್ತಾರೆ. ಅಧಿಕ ರಕ್ತಸ್ರಾವವಾಗುವವರಲ್ಲಿ ಪ್ರತಿ ತಿಂಗಳು ಋತುಮತಿ ಸಂದರ್ಭದಲ್ಲಿ ಸುಮಾರು 80 ಮಿಲಿಮೀಟರ್ ಗಳಷ್ಟು ರಕ್ತ ಹೋಗುತ್ತದೆ. 
ಅಧಿಕ ರಕ್ತಸ್ರಾವವಾಗುವುದರಿಂದ ಅನೀಮಿಯಾದಂತಹ ಕಾಯಿಲೆಗಳು ತಲೆದೋರಬಹುದು. ಇದರಿಂದ ದೇಹಪೂರ್ತಿ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳು ಬೇಕಾದಷ್ಟು ಇಲ್ಲದಿರಬಹುದು. ಇದರಿಂದ ತೀವ್ರ ಕಿಬ್ಬೊಟ್ಟೆಯ ನೋವು ಕಾಣಿಸಿಕೊಂಡು ದೈನಂದಿನ ಚಟುವಟಿಕೆಗಳಿಗೆ ತೊಂದರೆಯುಂಟಾಗಬಹುದು. ಉಬ್ಬುವಿಕೆ, ಅನಿರೀಕ್ಷಿತ ರಕ್ತಸ್ರಾವ, ಆಯಾಸ ಇತರ ಲಕ್ಷಣಗಳಿಗೆ ಕಾರಣವಾಗುತ್ತದೆ.
ಈಗಿರುವ ಅಧಿಕ ರಕ್ತಸ್ರಾವವನ್ನು ತಡೆಯಲಿರುವ ಚಿಕಿತ್ಸಾ ವಿಧಾನಗಳಿಂದ ಗರ್ಭಧಾರಣೆಗೆ ತೊಂದರೆಯಾಗುವ ಅಡ್ಡ ದುಷ್ಪರಿಣಾಮದ ಸಾಧ್ಯತೆಯಿದೆ. ಮಹಿಳೆಯರ ದೇಹದ ಹಾರ್ಮೊನ್ ಗಳಿಗೆ ತೊಂದರೆಯಾಗದೆ ಗರ್ಭಧಾರಣೆಗೆ ಅಡ್ಡಿಯುಂಟಾಗದಿರುವಂತಹ ಚಿಕಿತ್ಸಾ ವಿಧಾನವನ್ನು ಸಂಶೋಧಕರು ಕಂಡುಹಿಡಿಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com