ಸೀನಿದ್ದೆಲ್ಲವೂ ಕೊರೋನಾ ಆಗಲ್ಲ! ಆತಂಕ ಬೇಡ, ಎಚ್ಚರದಿಂದಿರಿ...

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯಾರೇ ಸೀನುತ್ತಿರುವುದು ಕಂಡರೂ ಭಯವಾಗುತ್ತಿದೆ. ಇದು ಸಾಮಾನ್ಯ. ಆದರೆ, ಮಳೆಗಾಲ ಹತ್ತಿರಬರುತ್ತಿರುವುದರಿಂದ ಸಾಕಷ್ಟು ಜನರಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಬರುತ್ತಲೇ ಇರುತ್ತದೆ. ಹೀಗಾಗಿ ಸೀನಿದ ಕೂಡಲೇ ಕೊರೋನಾ ಇದೆ ಎಂದುಕೊಳ್ಳಬಾರದು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯಾರೇ ಸೀನುತ್ತಿರುವುದು ಕಂಡರೂ ಭಯವಾಗುತ್ತಿದೆ. ಇದು ಸಾಮಾನ್ಯ. ಆದರೆ, ಮಳೆಗಾಲ ಹತ್ತಿರಬರುತ್ತಿರುವುದರಿಂದ ಸಾಕಷ್ಟು ಜನರಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಬರುತ್ತಲೇ ಇರುತ್ತದೆ. ಹೀಗಾಗಿ ಸೀನಿದ ಕೂಡಲೇ ಕೊರೋನಾ ಇದೆ ಎಂದುಕೊಳ್ಳಬಾರದು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಇಂತಹ ಲಕ್ಷಣಗಳಾವುದು ಬಾರದಂತೆ ನೋಡಿಕೊಳ್ಳಬೇಕಾಗುತ್ತದೆ. 

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಲಿದ್ದು, ಇಂತಹ ಸಂದರ್ಭದಲ್ಲಿ ನ್ಯೂಮೋನಿಯಾ, ಅತೀವ್ರ ಜ್ವರ, ಡೆಂಗ್ಯೂ ಆರಂಭವಾಗುತ್ತದೆ. ಹೀಗಾಗಿ ಜನರು ಹೆಚ್ಚು ಜಾಗ್ರತೆ ವಹಿಸಬೇಕಿದ್ದು, ಯಾವುದೇ ರೀತಿಯ ಜ್ವರ ಬಂದರೂ, ಶೀತ, ನೆಗಡಿ ಬಂದರೂ ಕೂಡಲೇ ವೈದ್ಯರನ್ನು ಕಾಣುವುದು ಉತ್ತಮ.

ಚಳಿಗಾಲದಲ್ಲಿ ಡೆಂಗ್ಯೂ ಜ್ವರ ಬರುವುದು, ವೈರಲ್ ಫೀವರ್ ಬರುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕೊರೋನಾ ಹಾಗೂ ಈ ಜ್ವರಗಳ ನಡುವಿನ ವ್ಯತ್ಯಾಸಗಳನ್ನು ಕಂಡು ಹಿಡಿಯುವುದು ಕಷ್ಟಕರವಾಗಿರುತ್ತದೆ ಎಂದು ಹಿರಿಯ ವೈದ್ಯ ಡಾ. ಕೆ. ಶಿವ ರಾಜು ಅವರು ಹೇಳಿದ್ದಾರೆ. 

ಭಾರತದಲ್ಲಿ ಬಾಲ್ಯದ ಮಕ್ಕಳಿಗೆ ನೀಡುವ ಲಸಿಕೆಗಳಿಗೆ ಹೋಲಿಕೆ ಮಾಡಿದರೆ ವಯಸ್ಕರಿಗೆ ನೀಡುವ ಲಸಿಕೆಗಳು ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ. ಇತ್ತೀಚಿನ ಒತ್ತಡ ವಾತಾವರಣಗಳಿಂದಾಗಿ ಮಗುವಿಗೆ ನೀಡುವ ಲಸಿಕೆಗಳಷ್ಟೇ ವಯಸ್ಕರಿಗೂ ನೀಡುವ ಲಸಿಕೆಗಳ ಅಗತ್ಯವಿದೆ. 

ಸಕ್ಕರೆ ಕಾಯಿಲೆ, ಹೃದಯರಕ್ತನಾಳದ ಕಾಯಿಲೆಗಳು (ಸಿವಿಡಿಗಳು), ಆಸ್ತಮಾ ಮತ್ತು ದೀರ್ಘಕಾಲದ ರೋಗಗಳು (ಸಿಒಪಿಡಿ) ನಂತಹ ಕೊಮೊರ್ಬಿಡಿಟಿ ಹೊಂದಿರುವ ವ್ಯಕ್ತಿಗಳು ಶೀತಜ್ವರ ಮತ್ತು ಕೊರೊನಾವೈರಸ್ಗೆ ಹೆಚ್ಚು ಒಳಗಾಗುತ್ತಾರೆ. ಇಂತಹವರಿಗೆ ಲಸಿಕೆ ಹಾಕಿದಾಗ ಈ ವೈರಸ್ ಸೋಂಕಿನ ತೀವ್ರತೆಯನ್ನು ಶೇಕಡಾ 60 ರಷ್ಟು ಕಡಿಮೆ ಮಾಡಬಹುದು ಎಂದು ಡಾ.ಶಿವ ಅವರು ತಿಳಿಸಿದ್ದಾರೆ. 

ಕೆಲಸ ನಿಮಿತ್ತ ಹೊರಗೆ ಓಡಾಡುವ ಜನರಿಗೆ ಆರೋಗ್ಯ ಸಿಬ್ಬಂದಿಗಳಿಗೆ ನೀಡುವ ರೀತಿಯಲ್ಲಿಯೇ ಈ ಲಸಿಕೆಗಳನ್ನು ನೀಡುವುದು ಕಡ್ಡಾಯ ಮಾಡಬೇಕು. ಹೆಚ್'ಸಿಡಬ್ಲ್ಯೂ ಲಸಿಕೆಯು ವ್ಯಕ್ತಿಯನ್ನು ಸೋಂಕಿನಿಂದ ರಕ್ಷಿಸುವುದಷ್ಟೇ ಅಲ್ಲದೆ, ರೋಗಿಗಳನ್ನು ವಿಶೇಷವಾಗಿ ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳು ಮತ್ತು ದೀರ್ಘಕಾಲಿಕ ರೋಗಗಳಿಂದ ಬಳುತ್ತಿರುವವರನ್ನು, ದುರ್ಬಲರಾಗಿರುವವರನ್ನು ರಕ್ಷಣೆ ಮಾಡುತ್ತದೆ ಎಂದು ಡಾ.ಸಂಪತ್ ಅವರು ಹೇಳಿದ್ದಾರೆ. 

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿರುವ ಮಕ್ಕಳು ಮತ್ತು ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಶಿಫಾರಸು ಮಾಡಬಹುದು. ಆದರೆ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬಾರದು. ಲಕ್ಷಣ ಇರುವ ಅಥವಾ ಲಕ್ಷಣ ಇಲ್ಲದ ಕೊರೋನಾ ಸೋಂಕಿತರು ಲಸಿಕೆಯನ್ನು ತಿಳಿಯದೆ ಹಾಕಿಸಿಕೊಂಡರೆ ಅದರಿಂದ ಪ್ರತಿಕಾಯ ಘರ್ಷಣೆ (ಆ್ಯಂಟಿಬಾಡಿ ಕ್ಲಾಷ್) ಎದುರಾಗುತ್ತದೆ. ಇದರಿಂದ ವ್ಯಕ್ತಿಯ ಪರಿಸ್ಥಿತ ಹದಗೆಡಬಹುದು. ಹೀಗಾಗಿ ಅಂತಹವರು ಲಸಿಕೆಯ ಬದಲಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಮಾಡಬೇಕೆಂದು ಗ್ಲೋಬಲ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞೆ ಡಾ.ತಪಸ್ವಿ ಕೃಷ್ಣ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com