ವಿಶ್ವ ಹೃದಯ ದಿನ: ಹೃದಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಸಲಹೆ
ವಿಶ್ವ ಹೃದಯ ದಿನದ ಶುಭಾಶಯ ಕೋರಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಧೂಮಪಾನ, ಬೊಜ್ಜಿನಂತಹ ಅಪಾಯಕಾರಿ ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋಣ ಎಂದು ಸಲಹೆ ನೀಡಿದ್ದಾರೆ.
Published: 29th September 2020 11:18 AM | Last Updated: 29th September 2020 11:18 AM | A+A A-

ವಿಶ್ವ ಹೃದಯ ದಿನ
ಬೆಂಗಳೂರು: ವಿಶ್ವ ಹೃದಯ ದಿನದ ಶುಭಾಶಯ ಕೋರಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಧೂಮಪಾನ, ಬೊಜ್ಜಿನಂತಹ ಅಪಾಯಕಾರಿ ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋಣ ಎಂದು ಸಲಹೆ ನೀಡಿದ್ದಾರೆ.
ಪ್ರತಿ ಕ್ಷಣವೂ ಅವಿರತವಾಗಿ ದುಡಿವ ಹೃದಯದ ಕಾಳಜಿ ವಹಿಸೋಣ. ಜಾಗತಿಕ ಮಟ್ಟದಲ್ಲಿ ಹೃದಯ ಸಂಬಂಧಿ ರೋಗಗಳನ್ನು ತಡೆಯುವ ಮತ್ತು ಅವುಗಳ ವಿರುದ್ದ ಹೋರಾಡುವ ಉದ್ದೇಶದಿಂದ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಕ್ರಮ ಅನುಸರಿಸುವ ಹಾಗೂ ದುಶ್ಚಟಗಳಿಂದ ದೂರವಿರುವ ಮೂಲಕ ಹೃದ್ರೋಗಗಳನ್ನು ನಿಯಂತ್ರಿಸಬಹುದೆನ್ನುವ ಮಹತ್ವದ ಸಂದೇಶ ಸಾರೋಣ, ಹೃದಯ ರೋಗಗಳಿಂದ ದೂರವಿರೋಣ ಎಂದು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಅಂತೆಯೇ ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಹೃದಯದ ಆರೋಗ್ಯ ರಕ್ಷಣೆಗಾಗಿ ದಿನಕ್ಕೆ ಕನಿಷ್ಟ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವ ಮೂಲಕ ವಿಶ್ರಮಿಸಿ. ವ್ಯಾಯಾಮ ನಡಿಗೆ ಜಾಗಿಂಗ್ ಮತ್ತು ಉತ್ತಮ ಹವ್ಯಾಸಗಳನ್ನು ರೂಪಿಸಿಕೊಳ್ಳಿ. ಅಂತೆಯೇ ಹೆಚ್ಚು ತಾಜಾ ತರಕಾರಿಗಳು ಮತ್ತು ಹಣ್ಣು, ಎಲ್ಲ ತರಹದ ದವಸಧಾನ್ಯ, ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳ ಸೇವನೆ ಮಾಡಿ ಎಂದು ಸಲಹೆ ನೀಡಿದೆ.
ಅಲ್ಲದೆ ಅನಾರೋಗ್ಯಕರ ಕೊಲೆಸ್ಟ್ರಾಲ್ ಅಂಶದ ಆಹಾರ ಸವನ ಬೇಡ, ನಿಮ್ಮ ಆಹಾರದಲ್ಲಿ ಉಪ್ಪಿನ ಅಂಶ (ಸೋಡಿಯಂ)ವನ್ನು ಕಡಿಮೆಗೊಳಿಸಿ. ಧೂಮಪಾನ ಮದ್ಯಪಾನದಿಂದ ದೂರವಿರಿ ಎಂದು ಸಲಹೆ ನೀಡಿದೆ.