ಅತಿ ಹೆಚ್ಚು ಕ್ಷಯರೋಗ ಪ್ರಕರಣ ಹೊಂದಿರುವ ಟಾಪ್ 30 ದೇಶಗಳಲ್ಲಿ ಪಟ್ಟಿಯಲ್ಲಿ ಭಾರತ!

ವಿಶ್ವದಾದ್ಯಂತ ಅತಿ ಹೆಚ್ಚು ಕ್ಷಯರೋಗ (ಟಿಬಿ) ಪ್ರಕರಣಗಳನ್ನು ಹೊಂದಿರುವ ಟಾಪ್ 30 ದೇಶಗಳಲ್ಲಿ ಭಾರತವೂ ಇದ್ದು, ಈ ಬೆಳವಣಿಗೆ ಆಂತಕವನ್ನು ಹೆಚ್ಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಶ್ವದಾದ್ಯಂತ ಅತಿ ಹೆಚ್ಚು ಕ್ಷಯರೋಗ (ಟಿಬಿ) ಪ್ರಕರಣಗಳನ್ನು ಹೊಂದಿರುವ ಟಾಪ್ 30 ದೇಶಗಳಲ್ಲಿ ಭಾರತವೂ ಇದ್ದು, ಈ ಬೆಳವಣಿಗೆ ಆಂತಕವನ್ನು ಹೆಚ್ಚಿಸಿದೆ. 

ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ವರದಿಯಲ್ಲಿ ಕೋವಿಡ್ -19 ನಂತರ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಅತ್ಯಂತ ಸಾಂಕ್ರಾಮಿಕ ರೋಗ ಎಂದರೆ ಕ್ಷಯರೋಗ (ಟಿಬಿ) ಎಂದು ಹೇಳಿದೆ. 

2021 ರಲ್ಲಿ ಅಂದಾಜು 10.6 ಮಿಲಿಯನ್ ಮಂದಿ ಕ್ಷಯರೋಗದಿಂದ (ಟಿಬಿ) ಅನಾರೋಗ್ಯಕ್ಕೆ ಒಳಗಾದರು, 2020 ರಿಂದ ಶೇ.4.5ರಷ್ಟು ಹೆಚ್ಚಳವಾಗಿದೆ ಮತ್ತು ವಿಶ್ವ ಆರೋಗ್ಯದ ಪ್ರಕಾರ 1.6 ಮಿಲಿಯನ್ ಜನರು ಟಿಬಿಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

2021 ರಲ್ಲಿ 4,50,000 ಹೊಸ ರಿಫಾಂಪಿಸಿನ್-ನಿರೋಧಕ ಟಿಬಿ (ಆರ್ಆರ್-ಟಿಬಿ) ಪ್ರಕರಣಗಳೊಂದಿಗೆ 2020 ಮತ್ತು 2021 ರ ನಡುವೆ ಡ್ರಗ್-ರೆಸಿಸ್ಟೆಂಟ್ ಟಿಬಿ (ಡಿಆರ್-ಟಿಬಿ) ಯ ಹೊರೆಯು ಶೇ.3 ರಷ್ಟು ಹೆಚ್ಚಾಗಿದೆ. ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ಷಯ ರೋಗ ಹೆಚ್ಚಳವಾಗಿರುವ ಕುರಿತು ವರದಿಯಾಗಿದೆ. 2021ರಲ್ಲಿ ಕೊರೊನಾ ಸೋಂಕಿನಿಂದಾಗಿ ಕ್ಷಯದಂತಹ ರೋಗಗಳಿಗೆ ತುರ್ತು ಚಿಕಿತ್ಸೆ ದೊರೆಯಲಿಲ್ಲ.

ಸಾಂಕ್ರಾಮಿಕವು ನಮಗೆ ಏನನ್ನಾದರೂ ಕಲಿಸಿದ್ದರೆ, ಅದು ಒಗ್ಗಟ್ಟು, ನಿರ್ಣಯ, ನಾವೀನ್ಯತೆ ಮತ್ತು ಉಪಕರಣಗಳ ಸಮಾನ ಬಳಕೆಯಿಂದ ನಾವು ಎಂಥದ್ದೇ ಕಷ್ಟವನ್ನು ನಿವಚಾರಿಸಬಹುದು ಎಂದು ಹೇಳಲಾಗಿದೆ. ಆ ಪಾಠಗಳನ್ನು ಕ್ಷಯರೋಗಕ್ಕೆ ಅನ್ವಯಿಸಬೇಕು. ಒಟ್ಟಾಗಿ ಕೆಲಸ ಮಾಡುವ ಮೂಲಕ ನಾವು ಟಿಬಿಯನ್ನು ಕೊನೆಗೊಳಿಸಬಹುದು ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಅಗತ್ಯ ಟಿಬಿ ಸೇವೆಗಳನ್ನು ಒದಗಿಸುವುದರೊಂದಿಗೆ ಜನರ ಜೀವವನ್ನು ಕಾಪಾಡಬೇಕಿದೆ. 2019ರಲ್ಲಿ 7.1 ಮಿಲಿಯನ್​ ಟಿಬಿಯ ಹೊಸ ಪ್ರಕರಣಗಳು ಪತ್ತೆಯಾಗಿತ್ತು. 2020 ರಲ್ಲಿ ಇದು 5.8 ಮಿಲಿಯನ್‌ಗೆ ಇಳಿದಿದೆ. 2021 ರಲ್ಲಿ 6.4 ಮಿಲಿಯನ್‌ಗೆ ಭಾಗಶಃ ಚೇತರಿಕೆ ಕಂಡುಬಂದಿದೆ. 2019 ಮತ್ತು 2020 ರ ನಡುವೆ ಆರ್'ಆರ್-ಟಿಬಿ ಮತ್ತು ಮಲ್ಟಿಡ್ರಗ್-ರೆಸಿಸ್ಟೆಂಟ್ ಟಿಹಿ(ಎಂಡಿಆರ್-ಟಿಬಿ) ಗಾಗಿ ಚಿಕಿತ್ಸೆಯನ್ನು ಪಡೆದವರ ಸಂಖ್ಯೆಯು ಇಳಿಮುಖವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com