ಸಿಕ್ಕಾಪಟ್ಟೆ ಗೊರಕೆ ಹೊಡೆಯುತ್ತೀರಾ? Vitamin D ಕೊರತೆಯಿರಬಹುದು, ಚೆಕ್ ಮಾಡಿದ್ದೀರಾ?

ಇತ್ತೀಚಿನ ಕೆಲವು ಅಧ್ಯಯನಗಳು, ವಿಟಮಿನ್ ಡಿ ಕೊರತೆಯೂ ಗೊರಕೆ ಹಾಗೂ ನಿದ್ರೆಯಲ್ಲಿನ ಉಸಿರಾಟ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ತಿಳಿಸಿವೆ.
File photo
ಸಂಗ್ರಹ ಚಿತ್ರ
Updated on

ಗೊರಕೆ (Snoring) ಅಂದರೆ ಸಾಮಾನ್ಯ ಸಮಸ್ಯೆ ಎಂದು ಬಹುತೇಕ ಜನ ನಿರ್ಲಕ್ಷ್ಯ ಮಾಡುತ್ತಾರೆ. ನಿದ್ರೆ ಸರಿಯಾಗಿ ಆಗದಿರುವುದು, ಶೀತ, ಮಲಗುವ ಭಂಗಿ, ಅತಿಯಾದ ತೂಕವೇ ಗೊರಕೆಗೆ ಕಾರಣ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅಬ್‌ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (OSA) ಲಕ್ಷಣವೆಂದೂ ಕರೆಯಲಾಗುತ್ತದೆ.

ಆದರೆ, ಇತ್ತೀಚಿನ ಕೆಲವು ಅಧ್ಯಯನಗಳು, ವಿಟಮಿನ್ ಡಿ ಕೊರತೆಯೂ ಗೊರಕೆ ಹಾಗೂ ನಿದ್ರೆಯಲ್ಲಿನ ಉಸಿರಾಟ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ತಿಳಿಸಿವೆ.

ದೇಹಕ್ಕೆ ಅವಶ್ಯಕವಾಗಿ ಬೇಕಾಗುವ ಇತರ ಎಲ್ಲಾ ಬಗೆಯ ವಿಟಮಿನ್ಸ್ ಗಳ ಜೊತೆಗೆ, ನಮ್ಮ ದೇಹಕ್ಕೆ ವಿಟಮಿನ್ ಡಿ ಕೂಡ ಬೇಕು. ವಿಟಮಿನ್ ಡಿ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ ವೆಂದು ಪರಿಗಣಿಸಲಾಗಿದೆ. ಸೂರ್ಯನ ಬೆಳಕಿನಿಂದಾಗಿ ನಮ್ಮ ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಆದರೆ ಇಂದಿನ ಕಾರ್ಯನಿರತ ಜೀವನದಲ್ಲಿ, ಹೆಚ್ಚಿನ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದಾಗಿ, ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯಕ್ತಿ ಗೊರಕೆಯ ಸಮಸ್ಯೆಗೆ ವಿಟಮಿನ್ ಡಿ ಕೊರತೆ ಕೂಡ ಕಾರಣವಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಹೇಗೆ..? ಇಲ್ಲಿದೆ ಮಾಹಿತಿ..

ಗಂಟಲಿನ ಸ್ನಾಯುಗಳ ದುರ್ಬಲತೆ

ನಿದ್ರೆಯ ಸಮಯದಲ್ಲಿ ಗಂಟಲಿನ ಮೇಲ್ಭಾಗದ ಸ್ನಾಯುಗಳು ಉಸಿರಾಟದ ಮಾರ್ಗವನ್ನು ತೆರೆಯುತ್ತವೆ. ವಿಟಮಿನ್ ಡಿ ಕೊರತೆಯಾದಾಗ ಈ ಸ್ನಾಯುಗಳ ಶಕ್ತಿ ಕುಂಠಿತವಾಗುತ್ತದೆ. ಗಂಟಲಿನ ಸ್ನಾಯು ಹೆಚ್ಚು ಸಡಿಲವಾಗುತ್ತವೆ, ಉಸಿರಾಟದ ಮಾರ್ಗ ಭಾಗಶಃ ಮುಚ್ಚಿಕೊಳ್ಳುತ್ತದೆ. ಇದರಿಂದ ಉಸಿರಾಟಕ್ಕೆ ಅಡ್ಡಿಯಾಗಿ ಗೊರಕೆ ಸಮಸ್ಯೆ ಎದುರಾಗುತ್ತದೆ.

File photo
Vitamin D-Rich Foods: ವಿಟಮಿನ್ ಡಿ ಕೊರತೆ ನೀಗಿಸಲು ತಿನ್ನಬೇಕಾದ ಆಹಾರಗಳು

ಉರಿಯೂತ (Inflammation) ಹೆಚ್ಚಳ

ವಿಟಮಿನ್ ಡಿ ಕೊರತೆಯು ದೇಹದಲ್ಲಿ ಉರಿಯೂತ ಹೆಚ್ಚಾಗಲು ಕಾರಣವಾಗುತ್ತದೆ. ಮೂಗು ಅಥವಾ ಉಸಿರಾಟದ ಮಾರ್ಗದಲ್ಲಿ ಉರಿಯೂತ ಉಂಟಾದರೆ, ಉಸಿರಾಟದ ಮಾರ್ಗ ಇನ್ನಷ್ಟು ಕಿರಿದಾಗುತ್ತದೆ. ಇದು ನಿದ್ರೆಯ ವೇಳೆ ಉಸಿರಾಟಕ್ಕೆ ತೊಂದರೆ ಉಂಟುಮಾಡಿ ಗೊರಕೆ ಸಮಸ್ಯೆಗೆ ಕಾರಣವಾಗುತ್ತದೆ.

ನಿದ್ರೆ ಸಮಸ್ಯೆ

ಅಧ್ಯಯನಗಳ ಪ್ರಕಾರ, ವಿಟಮಿನ್ ಡಿ ಕೊರತೆ ಇರುವವರಲ್ಲಿ, ನಿರಂತರ ಉಸಿರಾಟ ಸಮಸ್ಯೆ ಉಂಟಾಗಿ ನಿದ್ರೆ ಸರಿಯಾಗಿ ಆಗದ ಅನುಭವವಾಗುತ್ತದೆ.

ಯಾರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡುಬರುತ್ತದೆ..?

ಕಚೇರಿಗೆ ಹೋಗುವ ಜನರು ವಿಟಮಿನ್ ಡಿ ಕೊರತೆಗೆ ಹೆಚ್ಚು ಒಳಗಾಗುತ್ತಾರೆ. ಕಚೇರಿಗೆ ಹೋಗುವವರಿಗೆ ಬಿಸಿಲಿನಲ್ಲಿ ಕುಳಿತು ಕೊಳ್ಳಲು ಸಮಯ ಸಿಗುವುದಿಲ್ಲ. ಇದರಿಂದಾಗಿ ಈ ಜನರಲ್ಲಿ ವಿಟಮಿನ್ ಡಿ ಕೊರತೆ ತುಂಬಾ ಹೆಚ್ಚಾಗಿರುತ್ತದೆ.

50 ವರ್ಷ ವಯಸ್ಸಿನ ನಂತರ, ದೇಹವು ಅನೇಕ ರೀತಿಯ ಜೀವಸತ್ವಗಳ ಕೊರತೆಯನ್ನು ಅನುಭವಿಸಲು ಪ್ರಾರಂಭಿಸುತ್ತದೆ, ಅವುಗಳಲ್ಲಿ ಒಂದು ವಿಟಮಿನ್ ಡಿ. ಈ ವಯಸ್ಸಿನಲ್ಲಿ, ದೇಹವು ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಈ ವಯಸ್ಸಿನ ಜನರು ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ಇತರ ವಿಧಾನಗಳ ಮೂಲಕ ಪೂರೈಸಬೇಕಾಗುತ್ತದೆ.

ವಿಟಮಿನ್ ಡಿ ಕೊರತೆಯಾಗದಂತೆ ಮಾಡುವುದು ಹೇಗೆ?

ದೇಹದಲ್ಲಿ ವಿಟಮಿನ್ ಡಿ ಕೊರತೆಯಾಗದಂತೆ ತಡೆಯಲು ಆಹಾರದಲ್ಲಿ ಅಣಬೆಗಳು, ಹಾಲು ಮತ್ತು ಕುಂಬಳಕಾಯಿ ಬೀಜಗಳನ್ನು ಸೇರಿಸಿಕೊಳ್ಳಬೇಕು.

​ಮಧುಮೇಹಿಗಳು ವಾಲ್ನಟ್ಸ್ ನಂತಹ ಒಣಗಿದ ಹಣ್ಣುಗಳನ್ನು ಸೇವಿಸುವ ಮೂಲಕ ವಿಟಮಿನ್ ಡಿ ಕೊರತೆ ಬರದಂತೆ ತಡೆಯಬಹುದು, ಇವು ದೇಹವು ಸಕ್ಕರೆಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ಕೆಲವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಹೀಗಾಗಿ, ವಿಟಮಿನ್ ಡಿ ಕೊರತೆಯು ಮಧುಮೇಹಕ್ಕೆ ಕಾರಣವಾಗಬಹುದು.

File photo
ಸಮೃದ್ಧ ಪೋಷಕಾಂಶ ವಿಟಮಿನ್ ಸಿ (ಕುಶಲವೇ ಕ್ಷೇಮವೇ)

ಹಸುವಿನ ಹಾಲಿನಲ್ಲಿ ವಿಟಮಿನ್ ಡಿ ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಕೂಡ ಇದೆ, ಇದು ಮೂಳೆಗಳಿಗೆ ಅತ್ಯಂತ ಪ್ರಯೋಜನಕಾರಿ. ಆದ್ದರಿಂದ, ವಿಟಮಿನ್ ಡಿ ಕೊರತೆ ಯನ್ನು ತಪ್ಪಿಸಲು, ಪ್ರತಿದಿನ ಒಂದು ಲೋಟ ಹಸುವಿನ ಹಾಲು ಕುಡಿಯಿರಿ. ಇದು ಇತರ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ.

ಸಸ್ಯಾಹಾರಿಗಳು ಮತ್ತು ಲ್ಯಾಕ್ಟೋಸ್-ಅಸಹಿಷ್ಣುತೆ ಇರುವ ವ್ಯಕ್ತಿಗಳಿಗೆ ಸೋಯಾ ಹಾಲು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಇದು ವಿಟಮಿನ್ ಡಿ ಜೊತೆಗೆ ಇತರ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಸೋಯಾ ಹಾಲಿಗೆ ಬದಲಾಗಿ ಬಾದಾಮಿ ಹಾಲು ಅಥವಾ ಇತರ ಸಸ್ಯ ಆಧಾರಿತ ಹಾಲನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಕ್ಯಾರೆಟ್ ಜ್ಯೂಸ್ ಕೂಡ ವಿಟಮಿನ್ ಡಿ ಯ ಉತ್ತಮ ಮೂಲವೆಂದು ಪರಿಗಣಿಸ ಲಾಗಿದೆ. ಇದು ವಿಟಮಿನ್ ಎ ಮತ್ತು ಸಿ ಯನ್ನು ಸಹ ಹೊಂದಿದೆ,

ಮುಖ್ಯವಾಗಿ ಸಾಕಷ್ಟು ಸೂರ್ಯನ ಬೆಳಕು ಸಿಗುವಂತೆ ನೋಡಿಕೊಳ್ಳಿ. ವಿಟಮಿನ್ ಡಿ ಗಾಗಿ ಸೂರ್ಯನ ಸ್ನಾನ ಮಾಡಲು ಉತ್ತಮ ಸಮಯ ಬೆಳಿಗ್ಗೆ 7 ರಿಂದ 9 ರವರೆಗೆ. ಪ್ರತಿದಿನ ಕೇವಲ 10-15 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಸಾಕಷ್ಟು ವಿಟಮಿನ್ ಡಿ ದೊರೆಯುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com