ಬೆಂಗಳೂರಿನಲ್ಲಿ ದಾಖಲೆ ಉಷ್ಣಾಂಶ: ಇದೇ ಮೊದಲ ಬಾರಿಗೆ 40 ಡಿಗ್ರಿ ಸೆಲ್ಷಿಯಸ್ ದಾಖಲು

ಉದ್ಯಾನನಗರಿ ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಇದೇ ಮೊದಲ ಬಾರಿಗೆ ಗರಿಷ್ಠ 40 ಡಿಗ್ರಿ ಸೆಲ್ಫಿಯಸ್ ಉಷ್ಣಾಂಶ ದಾಖಲಾಗಿದೆ...
ಬಿಸಿಲಿನ ಬೇಗೆ
ಬಿಸಿಲಿನ ಬೇಗೆ
Updated on: 

ಬೆ೦ಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಇದೇ ಮೊದಲ ಬಾರಿಗೆ ಗರಿಷ್ಠ 40 ಡಿಗ್ರಿ ಸೆಲ್ಫಿಯಸ್ ಉಷ್ಣಾಂಶ ದಾಖಲಾಗಿದೆ.

ವಾತಾವರಣದಲ್ಲಿನ ತೇವಾಂಶ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಸ್ತುತ ಬೇಸಿಗೆಯಲ್ಲಂತೂ ಉಷ್ಣಾಂಶ 3-4 ಡಿಗ್ರಿ ಸೆಲ್ಷಿಯಸ್ ಏರಿಕೆಯಾಗುತ್ತಿದೆ. ಇನ್ನು ರಾಜ್ಯಾದ್ಯ೦ತ ತಾಪಮಾನ ಏರುಮುಖವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ(ಕೆಎಸ್ಎನ್ ಡಿಎಂಸಿ) ಅಧ್ಯಕ್ಷ ಜಿಎಸ್ ಶ್ರೀನಿವಾಸ ರೆಡ್ಡಿ ಅವರು ಹೇಳಿದ್ದಾರೆ.

ಮೊದಲ ಬಾರಿಗೆ ಬೆಂಗಳೂರಿನಲ್ಲಿ 1931ರ ಮೇ ತಿಂಗಳಿನಲ್ಲಿ ಅತೀ ಹೆಚ್ಚು ಅಂದರೆ 38.9 ಡಿಗ್ರಿ ಸೆಲ್ಫಿಯಸ್ ಉಷ್ಣಾಂಶ ದಾಖಲಾಗಿತ್ತು. ಆ ಬಳಿಕ ಇದೀಗ ಮಂಗಳವಾರ 40 ಡಿಗ್ರಿ ಸೆಲ್ಷಿಯಸ್ ತಾಪಮಾನ ಏರಿಕೆಯೊಂದಿಗೆ ಬೆಂಗಳೂರಿಗರು ಬಿಸಿಲಿನ ಝಳಕ್ಕೆ ತತ್ತರಿಸುವಂತಾಗಿದೆ.

ಇನ್ನು ಏಪ್ರಿಲ್ ತಿಂಗಳಿನಲ್ಲಿ ಗರಿಷ್ಠ ಅಂದರೆ 35 ಡಿಗ್ರಿ ಸೆಲ್ಷಿಯಸ್ ತಾಪಮಾನ ಇರುತ್ತಿತ್ತು. ಈ ಅಂಕಿ ಅಂಶಗಳು ಬದಲಾಗಿದ್ದು, ಇದೀಗ ಏಪ್ರಿಲ್ ನಲ್ಲೇ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ 41 ಡಿಗ್ರಿ ಸೆಲ್ಷಿಯಸ್ ದಾಟುವ ಸಾಧ್ಯತೆ ಇದೆ ಎಂದು ಶ್ರೀನಿವಾಸ ರೆಡ್ಡಿ ಅವರು ಹೇಳಿದ್ದಾರೆ.

ಅದೇ ರೀತಿ ರಾಜ್ಯಾದ್ಯಂತ ಬಿರು ಬೇಸಿಗೆಯ ತೀವ್ರತೆ ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಯಚೂರಿನಲ್ಲಿ ಬರೋಬ್ಬರಿ 44 ಡಿಗ್ರಿ ಸೆಲ್ಷಿಯಸ್ ತಾಪಮಾನದ ವರದಿಯಾಗಿದೆ ಎಂದು ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com