ಮುಷ್ಕರ ಕೈ ಬಿಟ್ಟ ಶಿಕ್ಷಕರಿಗೆ ನಿಯಮಿತ ಭತ್ಯೆ ಏರಿಕೆ

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಿ ಶಿಕ್ಷಕರು ನಡೆಸುತ್ತಿದ್ದ ಪ್ರತಿಭಟನೆಯನ್ನು ಮಂಗಳವಾರ ರಾತ್ರಿ ಹಿಂತೆಗೆದುಕೊಳ್ಳಲಾಗಿದ್ದು, ಮುಷ್ಕರ ಹಿಂಪಡೆದ ಶಿಕ್ಷಕರ ಭತ್ಯೆಯನ್ನು ನಿಯಮಿತವಾಗಿ ಏರಿಕೆ ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ...
ಶಿಕ್ಷಕರ ಪ್ರತಿಭಟನೆ (ಸಂಗ್ರಹ ಚಿತ್ರ)
ಶಿಕ್ಷಕರ ಪ್ರತಿಭಟನೆ (ಸಂಗ್ರಹ ಚಿತ್ರ)

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಿ ಶಿಕ್ಷಕರು ನಡೆಸುತ್ತಿದ್ದ ಪ್ರತಿಭಟನೆಯನ್ನು ಮಂಗಳವಾರ ರಾತ್ರಿ ಹಿಂತೆಗೆದುಕೊಳ್ಳಲಾಗಿದ್ದು, ಮುಷ್ಕರ  ಹಿಂಪಡೆದ ಶಿಕ್ಷಕರ ಭತ್ಯೆಯನ್ನು ನಿಯಮಿತವಾಗಿ ಏರಿಕೆ ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮೂಲಗಳ ಪ್ರಕಾರ ಕಳೆದ 20 ವರ್ಷಗಳ ಶಿಕ್ಷಕರ ವೇತನ ಏರಿಕೆಯಾಗಿಲ್ಲ. ಆದರೆ ಸರ್ಕಾರದ ಕಡತಗಳಲ್ಲಿ ಮಾತ್ರ 1972ರಿಂದಲೂ ನಿಯಮಿತವಾಗಿ ಶಿಕ್ಷಕರ ಭತ್ಯೆ ಏರಿಕೆಯಾಗುತ್ತಿದೆ ಎಂದು  ತೋರಿಸುತ್ತಿದೆ. 1972ರಲ್ಲಿ ಅನುಭವ ರಹಿತ ಶಿಕ್ಷಕರಿಗೆ 300 ರು. ಮತ್ತು ಅನುಭವ ಇರುವ ಶಿಕ್ಷಕರಿಗೆ ಮೂಲ ಭತ್ಯೆಯಾಗಿ 700 ರು. ನಿಗದಿ ಮಾಡಲಾಗಿತ್ತು. 2012ರಲ್ಲಿ ವೇತನ ಪರಿಷ್ಕರಣೆ ಮಾಡಿದ  ಸರ್ಕಾರ ಅನುಭವ ರಹಿತ ಶಿಕ್ಷಕರಿಗೆ ಮಾಸಿಕ 22, 800 ಮತ್ತು ಅನುಭವ ಇರುವ ಶಿಕ್ಷಕರು 43, 200ಕ್ಕೆ ಏರಿಕೆ ಮಾಡಲಾಗಿತ್ತು. ಅಂತೆಯೇ ಬೆಂಗಳೂರಿನಲ್ಲಿರುವ ಶಿಕ್ಷಕರಿಗೆ ಅವರ ಭತ್ಯೆಯಲ್ಲಿ  ಶೇ.30ರಷ್ಚು ಏರಿಕೆ ಮತ್ತು ಮನೆ ಬಾಡಿಗೆ ಭತ್ಯೆ ಮತ್ತು ಗ್ರಾಮೀಕ್ಷ ಶಿಕ್ಷಕರಿಗೆ ಶೇ.10 ವೇತನ ಭತ್ಯೆ, ಇತರೆ ವಿಶೇಷ ಭತ್ಯೆಗಳನ್ನು ನೀಡಲಾಗುತ್ತಿದೆ.

ಇದಲ್ಲದೆ ಶಿಕ್ಷಕರ ಮಕ್ಕಳು ಮತ್ತು ಪತಿ ಅಥವಾ ಪತ್ನಿ ಸೇರಿದಂತೆ 8 ಲಕ್ಷ ಮೌಲ್ಯದ ವೈದ್ಯಕೀಯ ವಿಮೆಯನ್ನು ಕೂಡ ನೀಡಲಾಗುತ್ತಿದೆ. ಪ್ರಸ್ತುತ ಮುಷ್ಕರ ನಡೆಸುತ್ತಿದ್ದ ಶಿಕ್ಷಕರ ಸಂಘ ಕೆಎಸ್  ಪಿಸಿಎಲ್ ಎ ಕುಮಾರ್ ನಾಯಕ್ ವರದಿ ಪ್ರಕಾರ ಶಿಕ್ಷಕರ ಮೂಲವೇತನವನ್ನು 22, 800 ರಿಂದ 26, 000 ಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com