

ಬೆಂಗಳೂರು: ನಗರದ ಕೊಟ್ಟಿಗೆ ಹಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಒಬ್ಬ ವ್ಯಕ್ತಿ ಮತಪಟ್ಟು 6 ಮಂದಿಗೆ ಗಂಭೀರ ಗಾಯಗಳಾಗಿವೆ.
ಸುಂಕದ ಕಟ್ಟೆ ಬಳಿ ಬ್ರೇಕ್‌ಫೇಲ್ ಆದ ಲಾರಿ ಟಾಟಾ ಏಸ್ ಕಾರು ಸೇರಿದಂತೆ ಎರಡು ಕಾರು ಮತ್ತು 2 ಬೈಕ್ಗಳಿಗೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಬೆಳಗ್ಗೆ 9.30ಕ್ಕೆ ಅಪಘಾತ ಸಂಭವಿಸಿದೆ. ಲಗ್ಗೆರೆಯಿಂದ ಮರಳು ಲಾರಿ ಹೊರಟಿತ್ತು.
ಲಾರಿ ಮುಂದೆ ಇದ್ದ 2 ಟಾಟಾ ಏಸ್ ಕಾರು ಮತ್ತು ಬೈಕ್ಗಳಿಗೆ ಡಿಕ್ಕಿ ಹೊಡೆದು ಬಸ್‌ಸ್ಟಾಂಡ್‌ಗೆ ನುಗ್ಗಿದೆ. ನಂತರ ಬಸ್ ಸ್ಟಾಂಡಿನಲ್ಲಿ ಬಿಎಂಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಲಾರಿಯೊಳಗಿದ್ದ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರ ಎರಡೂ ಕಾಲುಗಳು ತುಂಡಾಗಿವೆ.
ಇನ್ನೂ ಇಬ್ಬರಿಗೆ ಒಂದು ಕಾಲು ತುಂಡಾಗಿದೆ. ಲಾರಿಯ ಬ್ರೇಕ್ ಫೇಲ್ ಆದ ಕೂಡಲೇ ಲಾರಿಯ ಚಾಲಕ ಬ್ರೇಕ್ ಫೇಲ್ ಆಗಿರುವ ಕುರಿತು ಕೂಗಿ ಹೇಳಿದರೂ ಅಲ್ಲಿದ್ದವರಿಗೆ ಗೊತ್ತಾಗಲಿಲ್ಲವೆಂದು ತಿಳಿದುಬಂದಿದೆ.