ನೀಟ್ ಫಲಿತಾಂಶ: ಬೆಂಗಳೂರಿನ ಸೂರಜ್ ರಾಜ್ಯಕ್ಕೆ ಪ್ರಥಮ

ವೈದ್ಯಕೀಯ ಕೋರ್ಸುಗಳ ಪ್ರವೇಶ ಸಿಬಿಎಸ್‌ಇ ನಡೆಸಿದ್ದ ರಾಷ್ಟ್ರೀಯ ಏಕರೂಪ ಪ್ರವೇಶ ಪರೀಕ್ಷೆ (ನೀಟ್‌) ಫ‌ಲಿತಾಂಶ...
ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಬಂದ ಸೂರಜ್ (ಎಡ ಚಿತ್ರ) ಮತ್ತು ದ್ವಿತೀಯ ಸ್ಥಾನ ಪಡೆದ ಸಂಜಯ್ ಎಂ.ಗೌಡರ್(ಬಲ ಚಿತ್ರ)
ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಬಂದ ಸೂರಜ್ (ಎಡ ಚಿತ್ರ) ಮತ್ತು ದ್ವಿತೀಯ ಸ್ಥಾನ ಪಡೆದ ಸಂಜಯ್ ಎಂ.ಗೌಡರ್(ಬಲ ಚಿತ್ರ)
Updated on
ಬೆಂಗಳೂರು: ವೈದ್ಯಕೀಯ ಕೋರ್ಸುಗಳ ಪ್ರವೇಶ ಸಿಬಿಎಸ್‌ಇ ನಡೆಸಿದ್ದ ರಾಷ್ಟ್ರೀಯ ಏಕರೂಪ ಪ್ರವೇಶ ಪರೀಕ್ಷೆ (ನೀಟ್‌) ಫ‌ಲಿತಾಂಶ ನಿನ್ನೆ ಹೊರಬಿದ್ದಿದ್ದು, ರಾಷ್ಟ್ರಮಟ್ಟದಲ್ಲಿ 78ನೇ ರ್ಯಾಂಕ್ ಗಳಿಸುವ ಮೂಲಕ ಬೆಂಗಳೂರಿನ ವಿದ್ಯಾರ್ಥಿ ಸೂರಜ್‌ ಎಂ. ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. 
ನಗರದ ವಿವಿಎಸ್‌ ಸರ್ದಾರ್‌ ಪಿಯು ಕಾಲೇಜಿನ ವಿದ್ಯಾರ್ಥಿ ಸೂರಜ್‌, ನೀಟ್‌ ಪರೀಕ್ಷೆಯಲ್ಲಿ 720 ಅಂಕಗಳಿಗೆ 630 ಅಂಕ ಗಳಿಸುವ ಮೂಲಕ ದೇಶಕ್ಕೆ 78ನೇ ರ್ಯಾಂಕ್‌ ಪಡೆದಿದ್ದಾರೆ. ಸೂರಜ್‌ ರಾಜ್ಯದ ಸಿಇಟಿಯಲ್ಲಿ ವೈದ್ಯಕೀಯ ವಿಭಾಗದಲ್ಲಿ 11ನೇ ರ್ಯಾಂಕ್ ಪಡೆದಿದ್ದರು. 
ಸಂಜಯ್ ಗೆ 122ನೇ ರ್ಯಾಂಕ್: ಯಲಹಂಕದ ಶೇಷಾದ್ರಿಪುರ ಪಿಯು ಕಾಲೇಜು ವಿದ್ಯಾರ್ಥಿ ಸಂಜಯ್ ಎಂ.ಗೌಡರ್ 122ನೇ ರ್ಯಾಂಕ್ ಗಳಿಸಿದ್ದಾರೆ. ಇವರು ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com