ರಾಜ್ಯ

ನನ್ನ ಆತ್ಮಹತ್ಯೆಗೆ ಡಿಜಿಪಿ ಓಂ ಪ್ರಕಾಶ್ ಪುತ್ರ ಕಾರಣ: ಸಾವಿಗೂ ಮುನ್ನ ರೈತನ ಆರೋಪ

ಜಮೀನು ವಿವಾದ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಪುತ್ರ ಕಾರ್ತಿಕೇಶ್ ಹಾಗೂ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು...

ನನ್ನ ಆತ್ಮಹತ್ಯೆಗೆ ಡಿಜಿಪಿ ಓಂ ಪ್ರಕಾಶ್ ಪುತ್ರ ಕಾರಣ: ಸಾವಿಗೂ ಮುನ್ನ ರೈತನ ಆರೋಪ
ಡಿಜಿ ಓಂ ಪ್ರಕಾಶ್ ಮತ್ತು ಮತ ರೈತ ಶಿವಣ್ಣ
Published On :

ಮಾಗಡಿ: ಜಮೀನು ವಿವಾದ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಪುತ್ರ ಕಾರ್ತಿಕೇಶ್ ಹಾಗೂ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತನೊಬ್ಬ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಶಿವಣ್ಣ(48) ಮೃತ ರೈತ. ಸಹೋದರ ಲೋಕೇಶ್ ಜತೆ ಶಿವಣ್ಣನಿಗೆ ಜಮೀನಿನ ವಿಚಾರವಾಗಿ ವಿವಾದವಿತ್ತು. ಈ ವಿಚಾರದಲ್ಲಿ ಕಾರ್ತಿಕೇಶ್ ಹಾಗೂ ಪೊಲೀಸರು ಲೋಕೇಶ್ ಪರ ನಿಂತು ಕಿರುಕುಳ ನೀಡಿದ್ದರಿಂದ ವಿಷ ಸೇವಿಸಿದ್ದಾಗಿ, ಮೃತಪಡುವ ಮುನ್ನ ಶಿವಣ್ಣ ಹೇಳಿಕೆ ನೀಡಿದ್ದಾರೆ. ಇದನ್ನು ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ.

ನನ್ನ ತಂದೆ ಸಾವಿಗೆ ಅವರ ಸಹೋದರ ಲೋಕೇಶ್‌, ನಾರಾಯಣಪ್ಪ ಹಾಗೂ ತಂಡದವರೇ ಕಾರಣ ಎಂದು ಆರೋಪಿಸಿ ಶಿವಣ್ಣರ ಪುತ್ರ ಅರುಣ್‌ ಕುಮಾರ್‌ ಮಾಗಡಿ ಪೊಲೀಸ್‌ ಠಾಣೆಗೆ  ದೂರು ನೀಡಿದ್ದಾರೆ.

2015ರ ಜು.13ರಂದು ಲೋಕೇಶ್ ತನ್ನ ಸಹಚರರೊಂದಿಗೆ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು ನೀಡಿದ್ದರೂ ಕಾರ್ತಿಕೇಶ್, ಕ್ರಮ ಕೈಗೊಳ್ಳಲು ಅಡ್ಡಿಯಾಗಿದ್ದರು. ಲೋಕೇಶ್ ಪದೇಪದೆ ಕಿರುಕುಳ ನೀಡುತ್ತಿದ್ದುದರಿಂದ ಮನನೊಂದು ವಿಷ ಸೇವಿಸಿದ್ದೇನೆ’ ಎಂದು ಶಿವಣ್ಣ ವಿಡಿಯೋದಲ್ಲಿ ವಿವರಿಸಿದ್ದಾರೆ. .

ಶಿವಣ್ಣ ಮತ್ತು ಅವರ ಸೋದರ ಸಂಬಂಧಿಗಳಿಗೆ ಮೊದಲಿನಿಂದಲೂ ಗವಿನಾಗಮಂಗಲ ಸರ್ವೆ ನಂಬರ್‌37/3ರಲ್ಲಿನ 1ಎಕರೆ37 ಗುಂಟೆ ಜಮೀನಿಗೆ ಸಂಬಂಧಿಸಿ ವ್ಯಾಜ್ಯ ನಡೆಯುತ್ತಿತ್ತು. ಹಲವು ಬಾರಿ ಗಲಾಟೆಗಳು ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳೆದ ವರ್ಷ ಜುಲೈ ತಿಂಗಳಿನಲ್ಲೂ ಶಿವಣ್ಣ ಮತ್ತು ನಾರಾಯಣಪ್ಪ ಕುಟುಂಬದವರಿಗೆ ಘರ್ಷಣೆ ನಡೆದು ದೂರು ದಾಖಲಾಗಿತ್ತು.

ಕಾರ್ತಿಕೇಶ್ ಮತ್ತು ಡಿ.ಜಿ.ಕಚೇರಿಯಲ್ಲಿ ಇದ್ದ ನರಸಿಂಹಮೂರ್ತಿ ಎಂಬುವವರ ಸಂಬಂಧಿ ಸಹಭಾಗಿತ್ವದಲ್ಲಿ ತಾಲ್ಲೂಕಿನ ಮಾರೇಗೌಡನದೊಡ್ಡಿ ಬಳಿ ಕ್ರಷರ್ ನಡೆಯುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.